Connect with us

    Blood Donation; ಬಿಜೆಪಿ ಯುವ ಮೋರ್ಚಾದಿಂದ ಬಸವೇಶ್ವರ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ 

    ಬಿಜೆಪಿ ಯುವ ಮೋರ್ಚಾದಿಂದ ಬಸವೇಶ್ವರ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ 

    ಮುಖ್ಯ ಸುದ್ದಿ

    Blood Donation; ಬಿಜೆಪಿ ಯುವ ಮೋರ್ಚಾದಿಂದ ಬಸವೇಶ್ವರ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ 

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 21 SEPTEMBER 2024

    ಚಿತ್ರದುರ್ಗ: ಬಿಜೆಪಿ(BJP) ನಗರ ಯುವ ಮೋರ್ಚಾದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ 74ನೇ ಹುಟ್ಟುಹಬ್ಬದ ಹಿನ್ನಲೆಯಲ್ಲಿ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ(Blood Donation) ಹಮ್ಮಿಕೊಳ್ಳಲಾಗಿತ್ತು.

    ಕ್ಲಿಕ್ ಮಾಡಿ ಓದಿ: AdikeRate: ಅಡಿಕೆ ಧಾರಣೆ | ಭೀಮಸಮುದ್ರ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್ ಎಷ್ಟಿತ್ತು

    ಈ ವೇಳೆ ಸಂಸದ ಗೋವಿಂದ ಕಾರಜೋಳ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿ, ಎಲ್ಲಾ ದಾನಗಳಲ್ಲಿ ರಕ್ತದಾನ ಮಹತ್ವವನ್ನು ಪಡೆದಿದೆ, ಏಕೆಂದರೆ ರಕ್ತವನ್ನು ಕೃತಕವಾಗಿ ಮಾಡಲು ಬರುವುದಿಲ್ಲ ಅಲ್ಲದೆ ಬೇರೆ ಯಾವುದೇ ಪ್ರಾಣಿಗಳ ರಕ್ತವನ್ನು ಹಾಕಲು ಬರುವುದಿಲ್ಲ ಈ ಹಿನ್ನಲೆಯಲ್ಲಿ ಮಾನವರಾದ ನಾವುಗಳು ನಮ್ಮ ಜೀವಿತಾವಧಿಯಲ್ಲಿ ರಕ್ತವನ್ನು ದಾನ ಮಾಡಬೇಕಿದೆ ಎಂದು ತಿಳಿಸಿದರು.

    ರಕ್ತಕ್ಕೆ ಪರ್ಯಾಯವಾಗಿ ಏನು ಇಲ್ಲ ನಮ್ಮ ಚಿತ್ರದುರ್ಗದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿದೆ ಇಲ್ಲಿ ಅಫಘಾತವಾದರೆ ಅವರಿಗೆ ರಕ್ತದ ಅನಿವಾರ್ಯತೆ ಇರುತ್ತದೆ ಈ ಹಿನ್ನಲೆಯಲ್ಲಿ ಆಗ ರಕ್ತವನ್ನು ಹುಡುಕುವ ಬದಲು ನಮ್ಮ ಮನೆಗಳಲ್ಲಿ ಎನಾದರೂ ಶುಭ ಕಾರ್ಯವಾದರೆ ಅದರ ನೆನಪಿಗಾಗಿ ರಕ್ತವನ್ನು ದಾನ ಮಾಡುವ ಅಭ್ಯಾಸವನ್ನು ಬೆಳಸಿಕೊಳ್ಳಬೇಕಿದೆ ಇದರಿಂದ ಬೇರೆಯವರಿಗೆ ಸಹಾಯವಾಗಲಿದೆ ಎಂದರು.

    ಮೋದಿಯವರು ದೇಶದ ಪ್ರಧಾನಮಂತ್ರಿಯಾದ ಮೇಲೆ ದೇಶ ಪ್ರಗತಿಯನ್ನು ಕಾಣುತ್ತಿದೆ, ಬೇರೆ ರಾಷ್ಟ್ರಗಳು ಸಹಾ ನಮ್ಮ ಜೊತೆ ವಿವಿಧ ರೀತಿಯ ಮಾತುಕಥೆಯನ್ನು ಮಾಡುತ್ತಿವೆ, ದೇಶದ ಆರ್ಥಿಕ ಪರಿಸ್ಥಿತಿ ವೃದ್ದಿಯಾಗಿದೆ. ಕಳೆದ 10 ವರ್ಷದಿಂದ ದೇಶದಲ್ಲಿ ವಿವಿಧ ರೀತಿಯ ಬದಲಾವಣೆಯನ್ನು ಕಾಣಲಾಗುತ್ತಿದೆ. ಇದೇ ರೀತಿ ಮುಂದಿನ 15 ವರ್ಷಗಳು ಸಹಾ ದೇಶ ಮೋದಿಯವರ ಸಾರಥ್ಯದಲ್ಲಿ ಮುನ್ನಡೆಯಲಿದೆ ಎಂದರು.

    ಕ್ಲಿಕ್ ಮಾಡಿ ಓದಿ: Tribute Ceremony: ಕ್ರಾಂತಿಕಾರಕ ಹೆಜ್ಜೆ ಇಟ್ಟು ಮುಂದೆ ಸಾಗಿದ ಶಿವಕುಮಾರ ಶ್ರೀ | ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌

    ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ, ಜಿಲ್ಲಾದ್ಯಕ್ಷರಾದ ಎ ಮುರಳಿ. ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಸುರೇಶ್ ಸಿದ್ದಾಪುರ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜನ್, ಜಿಲ್ಲಾ ಖಂಜಾಚಿ ಮಾಧುರಿ ಗೀರೀಶ್, ನಗರ ಯುವ ಮೊರ್ಚಾ ಅದ್ಯಕ್ಷ ರಾಮು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಸೇರಿದಂತೆ ಇತರರು ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top