
CHITRADURGA NEWS | 22 MARCH 2024
ಚಿತ್ರದುರ್ಗ: ಅರವಿಂದ್ ಕ್ರೇಜಿವಾಲ್ ಅವರು ಅಂಬೇಡ್ಕರ್, ಮಹಾತ್ಮ ಗಾಂಧಿಯವರ ಚಿಂತನೆಯನ್ನು ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದಾರೆ, ಅಂತವರನ್ನು ಬಿಜೆಪಿ ಪಕ್ಷ ತುಳಿಯುತ್ತಿದೆ, ಕ್ರೇಜಿವಾಲ್ ಅವರನ್ನು ಇಡಿ ಅವರು ಬಂಧಿಸಿದ್ದಾರೆ, ಇದು ಸಂವಿಧಾನದ ಕಗ್ಗೊಲೆ, ಇಡಿಯನ್ನು ಉಪಯೋಗಿಸಿಕೊಂಡು ನಮ್ಮ ನಾಯಕರಾದ ಕ್ರೇಜಿವಾಲ್ ಅವರನ್ನು ಅರೆಸ್ಟ್ ಮಾಡಿಸಿದ್ದಾರೆ, ಇದು ಆಮ್ ಆದ್ಮಿ ಪಕ್ಷವನ್ನು ನಿರ್ನಾಮ ಮಾಡಲು ಬಿಜೆಪಿ ಸರ್ಕಾರ ಮಾಡಿರುವ ಕುತಂತ್ರ ಎಂದು ಆಮ್ ಅದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಜಗದೀಶ್ ದೂರಿದರು.
ಇದನ್ನೂ ಓದಿ: ಅಧಿಕಾರಿಗಳ ವಶಕ್ಕೆ ಮಂಕಿ ಮ್ಯಾನ್ ಜ್ಯೋತಿರಾಜ್
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಇಡಿ, ಸಿಬಿಐಗಳನ್ನು ಕೈಗೊಂಬೆಯಾಗಿ ಮಾಡಿಕೊಂಡಿದೆ, ವಿರೋಧ ಪಕ್ಷಗಳನ್ನು ತುಳಿಯುವ ಕೆಲಸ ಮಾಡುತ್ತಾರೆ.
ಬಿಜೆಪಿ ಸರ್ಕಾರವು ತಮಗೆ ಅನುಕೂಲವಾಗುವ ರೀತಿಯಲ್ಲಿ ಕಾನೂನುಗಳನ್ನು ತಿದ್ದುಪಡಿ ಮಾಡುತ್ತಾರೆ, ಬ್ಲಾಕ್ ಮನಿಯನ್ನು ಅಕೌಂಟ್ ಮನಿಯಾಗಿ ಪರಿವರ್ತನೆ ಮಾಡಿ ಚುನಾವಣೆಗೆ ಬಳಸುತ್ತಿದ್ದಾರೆ, ಬಾಂಡ್ ಕೊಳ್ಳುವಿಕೆ ಕಾನೂನು ಬಾಹಿರ, ಇದು ದಾವತ್ ಇಬ್ರಾಹಿಂ ರೀತಿಯಲ್ಲಿ ಹಫ್ತಾ ವಸೂಲಿ ನೀತಿ ಇದ್ದಹಾಗೆ.
ಇದನ್ನೂ ಓದಿ: ರೈತರ ಗಮನಕ್ಕೆ | ಬೋರ್‍ವೆಲ್ ಪ್ರತಿ ಅಡಿಗೆ ರೂ.105 ಫಿಕ್ಸ್
ಇದನ್ನು ಇಂದಿನ ಯಾವ ಸರ್ಕಾರಗಳು ಸಹ ಜಾರಿತಂದಿರಲಿಲ್ಲ, ದೇಶದಲ್ಲಿ ಭ್ರಷ್ಟಾಚಾರ ಜಾಸ್ತಿ ಆಗಿರುವುದು ಬಿಜೆಪಿ ಪಕ್ಷದ ಆಡಳಿತದಲ್ಲಿ, ಬಿಜೆಪಿ ಜನ ವಿರೋಧಿ ಸರ್ಕಾರವಾಗಿದೆ, ಹಿಂದುಳಿದ ಸಮುದಾಯಗಳನ್ನು ಕೇವಲ ಮತಕ್ಕಾಗಿ ಬಿಜೆಪಿ ಬಳಸಿಕೊಳ್ಳುತ್ತಿದ್ದಾರೆ ಎಂದರು.
ಬಿಜೆಪಿಯವರು ಶ್ರೀ ರಾಮನನ್ನು ಪ್ರತಿಷ್ಠಾಪನೆ ಮಾಡಿದ್ದಾರೆ ಆದರೆ ಶ್ರೀ ರಾಮನ ಚಿಂತನೆಗಳನ್ನು ಅವರು ಅಳವಡಿಸಿಕೊಂಡಿಲ್ಲ. ಸರ್ಕಾರ ಸರಿದಾರಿಯಲ್ಲಿ ನಡೆಯಬೇಕಾದರೆ ವಿರೋಧ ಪಕ್ಷ ಬೇಕು.
ಇದನ್ನೂ ಓದಿ: ನಾಯಕನಹಟ್ಟಿ ರಥಕ್ಕೆ 2.5 ಕೋಟಿ ವಿಮೆ
ವಿರೋಧ ಪಕ್ಷ ಇಲ್ಲದೇ ಇರುವ ಹಾಗೆ ಮಾಡುವ ಹೊನ್ನಾರ ಬಿಜೆಪಿ ಪಕ್ಷದ್ದು, ದೇಶದಲ್ಲಿ ಸಂವಿಧಾನ ಇರುವುದರಿಂದ ರಾಷ್ಟ್ರದಲ್ಲಿ ಎಲ್ಲರೂ ಸಮನಾಗಿ ಬದುಕಲು ಸಾಧ್ಯವಾಗಿದೆ.
ಸೋಮವಾರದೊಳಗೆ ನಮ್ಮ ನಾಯಕರಾದ ಅರವಿಂದ್ ಕ್ರೇಜಿವಾಲ್ ಅವರನ್ನು ಬಿಡುಗಡೆ ಮಾಡದಿದ್ದರೆ ಅವರ ಬಂಧನವನ್ನು ವಿರೋಧಿಸಿ ದಿನಾಂಕ : 25-03-2024 ರಂದು ಪ್ರತಿಭಟನೆ ನಡೆಸಲಾಗುವುದೆಂದು ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಲಕ್ಷ್ಮಿನರಸಿಂಹಸ್ವಾಮಿ ರಥೋತ್ಸವಕ್ಕೆ ಹೊರಕೆರೆ ದೇವರಪುರ ಸಜ್ಜು
ಈ ವೇಳೆ ಅರವಿಂದ ಕೇಜ್ರಿವಾಲ್ ಅವರ ಬಂಧನವನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳು ಕಪ್ಪು ಬಟ್ಟೆಯನ್ನು ಧರಿಸಿದ್ದರು.
ಸುದ್ದಿಗೋಷ್ಠಿಯಲ್ಲಿ ತನ್ವೀರ್, ಅಕ್ಬರ್, ಹೇಮಣ್ಣ, ಜ್ಯೋತಿ, ವರಲಕ್ಷ್ಮಿ, ವಿನೋದಮ್ಮ, ಲತಾ, , ಶಿವಮ್ಮ, ಸೇರಿದಂತೆ ಇತರರು ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
