
CHITRADURGA NEWS | 25 OCTOBER 2025
ಹೊಳಲ್ಕೆರೆ: ಸರ್ಕಾರ ಹಣ ಖರ್ಚು ಮಾಡಿದ ಮೇಲೆ ಗುಣಮಟ್ಟದ ಕೆಲಸ ಆಗಬೇಕೆಂದು ಶಾಸಕ ಡಾ.ಎಂ.ಚಂದ್ರಪ್ಪ ಗುತ್ತಿಗೆದಾರರು ಹಾಗೂ ಇಂಜಿನಿಯರ್ ಗಳಿಗೆ ಸೂಚಿಸಿದರು.
ಇದನ್ನೂ ಓದಿ: ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗೆ ಸಚಿವರಿಂದ ಸನ್ಮಾನ

ಸಿರಿಗೆರೆ ಹೋಬಳಿ ಡಿ.ಮದಕರಿಪುರ ಗ್ರಾಮದಲ್ಲಿ ಮೂರು ಕೋಟಿ ರೂ.ವೆಚ್ಚದಲ್ಲಿ ಡಿ.ಮದಕರಿಪುರ ಗ್ರಾಮದಿಂದ ತಣಿಗೆಹಳ್ಳಿವರೆಗೆ ನೂತನ ಸಿ.ಸಿ.ರಸ್ತೆ, ಚರಂಡಿಗಳ ನಿರ್ಮಾಣ, ನೂತನ ಶಾಲಾ ಕಟ್ಟಡ, ಆಟದ ಮೈದಾನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ರಾಜ್ಯದಲ್ಲಿದ್ದ ಹಿಂದಿನ ಬಿಜೆಪಿ ಸರ್ಕಾರ 63 ಜಾತಿಗಳಿಗೆ ಶೇ.5 ರಷ್ಟು ಮೀಸಲಾತಿ ನೀಡಿತ್ತು. ಈಗಿನ ಸರ್ಕಾರ ಲಂಬಾಣಿ, ಕೊರಚ, ಕೊರಮ, ಭೋವಿ ಜನಾಂಗಕ್ಕೆ ಶೇ.3 ರಷ್ಟು, ಅಲೆಮಾರಿಗಳಿಗೆ ಶೇ.1 ರಷ್ಟು ಮೀಸಲಾತಿ ನೀಡಿರುವುದು ಅನ್ಯಾಯವಲ್ಲವೇ? ಇದರ ವಿರುದ್ದ ಮೊದಲು ನೀವುಗಳು ಎಚ್ಚೆತ್ತುಕೊಂಡು ಹೋರಾಡಬೇಕೆಂದು ತಿಳಿಸಿದರು.
ನನ್ನ ಕ್ಷೇತ್ರ ಶಿವನಿ, ಅಜ್ಜಂಪುರದವರೆಗಿದೆ, ತಾಲ್ಲೂಕಿನ 493 ಹಳ್ಳಿಗಳಲ್ಲಿಯೂ ಸಿ.ಸಿ.ರಸ್ತೆ, ರೈತರಿಗೆ ವಿದ್ಯುತ್, ಶಾಲಾ-ಕಾಲೇಜುಗಳನ್ನು ನಿರ್ಮಿಸಿ, ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದ್ದೇನೆ. ಸಾರ್ವಜನಿಕರ ಮಧ್ಯೆಯಿದ್ದುಕೊಂಡು ಕಷ್ಟ-ಸುಖ ಸಮಸ್ಯೆಗಳನ್ನು ಆಲಿಸಿ ಸಾಮಾನ್ಯ ಜ್ಞಾನವಿಟ್ಟುಕೊಂಡು ಕೆಲಸ ಮಾಡುವ ರಾಜಕಾರಣಿ ನಾನು. ಆಶ್ವಾಸನೆ ಕೊಡುವವನಲ್ಲ. ಎಲ್ಲಿ ಏನು ಕೆಲಸ ಆಗಬೇಕೆಂಬುದನ್ನು ಹುಡುಕಿ ಕ್ಷೇತ್ರದ ಅಭಿವೃದ್ದಿಗೆ ಹಗಲು-ರಾತ್ರಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆಂದರು.
ಇದನ್ನೂ ಓದಿ: ತರಳಬಾಳು ಶ್ರೀಗಳ ಜಲಕಲ್ಯಾಣ | ಕೋಡಿ ಬಿದ್ದ ಕೆರೆ | ಮುಗಿಲು ಮುಟ್ಟಿದ ಜನರ ಸಂಭ್ರಮ
ರಸ್ತೆ, ಶಾಲೆ, ಆಟದ ಮೈದಾನಕ್ಕೆ ಮೂರು ಕೋಟಿ ರೂ.ಗಳನ್ನು ಖರ್ಚು ಮಾಡಲಾಗುವುದು. ಪಶುವೈದ್ಯರುಗಳ ಕೊರತೆಯಿದೆ. ಅದಕ್ಕಾಗಿ ಮೊಬೈಲ್ ವ್ಯಾನ್‍ಗಳ ಸೌಲಭ್ಯ ಒದಗಿಸಲಾಗಿದೆ. ನಿಮ್ಮ ಜಾನುವಾರುಗಳಿಗೆ ಏನೇ ತೊಂದರೆಯಾದರೆ ಫೋನ್ ಮಾಡಿ ತಿಳಿಸಿದರೆ ಸಾಕು ನೀವಿರುವ ಕಡೆ ಬಂದು ಚಿಕಿತ್ಸೆ ನೀಡುತ್ತಾರೆ. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಿ ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಾಕ್ಷಿ, ಸಿರಿಗೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೋಹನ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ರಮೇಶ್, ಕುಬೇರಮ್ಮ, ರುದ್ರಣ್ಣ, ವಿಷ್ಣು, ಮೋಹನ್‍ಕುಮಾರ್, ಮೂರ್ತಣ್ಣ, ಗಂಗಣ್ಣ, ಶೇಖರಪ್ಪ, ಬಸವರಾಜ್, ಪಂಚಾಕ್ಷರಿ, ಕೃಷ್ಣಣ್ಣ ಸೇರಿದಂತೆ ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
