CHITRADURGA NEWS |03 APRIL 2025
ಚಿತ್ರದುರ್ಗ: ಕೋಡೆನಾಡು ಚಿತ್ರದುರ್ಗಕ್ಕೆ ವರ್ಷದ ಮೊದಲ ಮಳೆ ಸುರಿದಿದೆ. ಯುಗಾದಿ ಹಬ್ಬದ ಮೂರು ದಿನಗಳ ನಂತರ ಚಿತ್ರದುರ್ಗ ನಗರದಲ್ಲಿ ಹದವಾದ ಮಳೆಯಾಗಿದೆ.
ನಗರದಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಶುರುವಾದ ಮಳೆ ಮೂರು ಗಂಟೆವರೆಗೂ ಹದವಾಗಿ ಸುರಿಯಿತು.
ಮಳೆಯ ನಿರೀಕ್ಷೆ ಇಲ್ಲದೆ ರಸ್ತೆಯಲ್ಲಿ ಕಾರ್ಯನಿಮಿತ್ತ ಓಡಾಡುತ್ತಿದ್ದವರು ಮಳೆ ಆರಂಭವಾಗುತ್ತಿದ್ದಂತೆ ಪರದಾಡಿದರು. ವಾಹನ ಸವಾರರು ಕೂಡಾ ಆಕಸ್ಮಿಕ ಮಳೆಗೆ ಪರದಾಡಿದರು.
ನಿನ್ನೆ ಬುಧವಾರ ಕೂಡಾ ಮಳೆ ಮೋಡವಿತ್ತು. ರಾತ್ರಿ ಒಂದೆರಡು ನಿಮಿಷ ರಪರಪ ಎಂದು ಸುರಿದ ಮಳೆ ಸುಮ್ಮನಾಗಿತ್ತು.
ಆದರೆ, ಇಂದು ಸುರಿದ ಮಳೆಯಿಂದ ಬೇಸಿಗೆ ಬಿಸಿಲಿಗೆ ಕಾದು ಕಾವಲಿಯಾಗಿದ್ದ ಭೂಮಿ ತಂಪಾಗಿದೆ. ಮರ, ಗಿಡಗಳು ತೊಳೆದು ನಿಲ್ಲಿಸದಂತೆ ಭಾಸವಾದವು.
ಮೊಳಕಾಲ್ಮೂರು ತಾಲೂಕಿನಲ್ಲಿ ಉತ್ತಮ ಮಳೆ:
ಬುಧವಾರ ಮೊಳಕಾಲ್ಮೂರು ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ.
ಬಿ.ಜಿ.ಕೆರೆ ಗ್ರಾಮದಲ್ಲಿ 46.2 ಮಿಮೀ ಮಖೆಯಾಗಿದೆ. ಮೊಳಕಾಲ್ಮುರು.5.2 ರಾಯಪುರ 33.4, ರಾಂಪುರ 14.2, ದೇವಸಮುದ್ರ 12.2 ಮಿ.ಮೀ ಮಳೆ ಸುರಿದಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
