
CHITRADURGA NEWS | 28 APRIL 2024
ಚಿತ್ರದುರ್ಗ: ಪ್ರಥಮ್ ಶಿಕ್ಷಣ ಸಂಸ್ಥೆ ವತಿಯಿಂದ ಭಾನುವಾರ ನಗರದ ಜೋಗಿ ಮುಟ್ಟಿ ಮತ್ತು ಆಡು ಮಲ್ಲೇಶ್ವರ ಅರಣ್ಯ ಪ್ರದೇಶದಲ್ಲಿ ಬೀಜದುಂಡೆ ಬಿಥೋತ್ಸವ ಕಾರ್ಯಕ್ರಮ ಜರುಗಿತು.
ಇದನ್ನೂ ಓದಿ : ಹೊಸಪೇಟೆಗೆ ಪ್ರಧಾನಿ ನರೇಂದ್ರ ಮೋದಿ | ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭದ್ರತೆ

ಪರಿಸರ ಹೋರಾಟಗಾರ ಡಾ. ಹೆಚ್. ಕೆ. ಸ್ವಾಮಿ ಈ ವೇಳೆ ಮಾತನಾಡಿ, ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ, ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬೀಜದ ಉಂಡೆಗಳ ಬಿತೋತ್ಸವ ಕಾರ್ಯಕ್ರಮ ಮಹತ್ವದ ಕಾರ್ಯವಾಗಿದೆ.
ವಿವಿಧ ಮರದ ಬೀಜಗಳಾದ ಬೇವು, ಹೊಂಗೆ, ಹುಣಸೆ, ತೇಗು ಸೇರಿದಂತೆ ಮುಂತಾದ ಮರದ ಬೀಜದ ಉಂಡೆಗಳನ್ನು ಬಿತ್ತನೆ ಮಾಡುವ ಮೂಲಕ ಪರಿಸರ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಇದನ್ನೂ ಓದಿ : ಮುರುಘಾಮಠದಲ್ಲಿ ಸಮಾಲೋಚನ ಸಭೆ | ಸೂಕ್ತ ಸಲಹೆ-ಸೂಚನೆಗೆ ಮನವಿ
ಡಾ.ಮಹೇಶ್ ಮಾತನಾಡಿ, ಬೀಜದ ಉಂಡೆಗಳು ಮುಂದೆ ಮಳೆಗಾಲ ಬಂದಾಗ ಮೊಳಕೆ ಒಡೆದು ಸಸಿಗಳಾಗಿ ಶುದ್ಧವಾದ ಗಾಳಿಯನ್ನು ಅಹ್ಲಾದಕರವಾದ ಪರಿಸರವನ್ನುಂಟು ಮಾಡುತ್ತದೆ. ಬೀಜದ ಉಂಡೆಗಳನ್ನು ಹಾಕಿದ ನಂತರ ಅವುಗಳನ್ನು ಕಾಳಜಿ ವಹಿಸುವುದು ಅಷ್ಟೇ ಮಹತ್ವ ಕಾರ್ಯವಾಗಿದೆ. ಸಂಸ್ಥೆಯ ಪದಾಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
ಸಂಸ್ಥೆಯ ಖಜಾಂಚಿ ಸುಮ ಮಾತನಾಡಿ, ಗಿಡಮರಗಳು ಪರಿಸರದಲ್ಲಿ ಹೆಚ್ಚಾದಂತೆಲ್ಲ ಮಳೆಯೂ ಸಹ ಸಮೃದ್ಧವಾಗಿ ಸುರಿಯುತ್ತದೆ, ಉತ್ತಮ ಪರಿಸರಕ್ಕಾಗಿ ನಾವೆಲ್ಲರೂ ಒಂದುಗೂಡಬೇಕಾಗಿದೆ, ಇದು ಮೊದಲ ಹಂತದ ಬೀಜದ ಉಂಡೆಗಳ ಬಿತೋತ್ಸವ ಕಾರ್ಯಕ್ರಮವಾಗಿದ್ದು ಮುಂದಿನ ದಿನಗಳಲ್ಲಿ ಚಿತ್ರದುರ್ಗದ ಎಲ್ಲಾ ಪ್ರದೇಶಗಳಲ್ಲಿ ನಮ್ಮ ಸಂಸ್ಥೆ ವತಿಯಿಂದ ಬೀಜದ ಉಂಡೆಗಳ ಬಿತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಇದನ್ನೂ ಓದಿ : ಈ ವರ್ಷ ಬಹಳ ಬಿಸಿಲು ಸ್ವಾಮೀಜಿ | ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್
ಈ ವೇಳೆ ಸುಮಾರು 500 ಬೀಜದ ಉಂಡೆಗಳನ್ನು ಅರಣ್ಯ ಪ್ರದೇಶದಲ್ಲಿ ಬಿತ್ತನೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಕೀಲರಾದ ಸುಧೀರ್, ಪರಿಸರ ಪ್ರೇಮಿಗಳಾದ ಶಶಿಧರ್, ಸಂತೋಷ್, ಸಂಸ್ಥೆ ಪದಾಧಿಕಾರಿಗಳಾದ ತಿಮ್ಮರಾಜು, ಚೈತ್ರ, ಚಂದ್ರಕಲಾ, ಅನಿತಾ, ಧನುಷ್, ಈಶ್ವರಿ, ವೈಷ್ಣವಿ, ಪ್ರಥಮ್, ಪ್ರೀತಮ್, ಗಣೇಶ್ ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
