
CHITRADURGA NEWS | 31 JULY 2024
ಚಿತ್ರದುರ್ಗ: ಎಮ್ಮೆ ಮೇಯಿಸುತ್ತಿದ್ದ ವ್ಯಕ್ತಿ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದ ಘಟನೆ ಮರು ದಿನವೇ ಕರಡಿ ಪುನಃ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಚಳ್ಳಕೆರೆ ತಾಲ್ಲೂಕಿನ ಗಡಿ ಭಾಗದ ಓಬಳಾಪುರ ಗ್ರಾಮದ ತೋಟವೊಂದರಲ್ಲಿ ಮಂಗಳವಾರ ಕರಡಿ ಕಾಣಿಸಿಕೊಂಡಿದೆ.
ಇದನ್ನೂ ಓದಿ: ವಿವಿ ಸಾಗರ ಜಲಾಶಯದ ಇಂದಿನ ನೀರಿನ ಮಟ್ಟ
ಆಂಧ್ರದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಪುಟ್ಲೋರಹಳ್ಳಿ, ಕ್ಯಾದಿಗುಂಟೆ, ಸಿದ್ದೇಶ್ವರನದುರ್ಗ, ನಾಗಪ್ಪನಹಳ್ಳಿ, ಪಿಲ್ಲಹಳ್ಳಿ, ಜಾಜೂರು, ತಿಪ್ಪಾರೆಡ್ಡಿಹಳ್ಳಿ, ಪಗಡಲಬಂಡೆ, ಟಿ.ಎನ್.ಕೋಟೆ, ದೊಡ್ಡಚೆಲ್ಲೂರು ಗ್ರಾಮದ ಅರಣ್ಯ ಪ್ರದೇಶ ಹಾಗೂ ವೇದಾವತಿ ನದಿ ತೀರದ ನಾಗಗೊಂಡನಹಳ್ಳಿ, ಹರವಿಗೊಂಡನಹಳ್ಳಿ, ಹಾಲಗೊಂಡನಹಳ್ಳಿ, ಕಾಮಸಮುದ್ರ ಮುಂತಾದ ಗ್ರಾಮದ ಸುತ್ತಮುತ್ತಲ ಜಮೀನು ಹಾಗೂ ತೋಟಗಳಲ್ಲಿ ಆಗಾಗ್ಗೆ ಕರಡಿ ಕಾಣಿಸಿ ಕೊಳ್ಳುತ್ತಿದೆ.

ಕರಡಿ ಕಾಣಿಸಿದ್ದರಿಂದ ನೂರಾರು ದನಗಾಹಿ– ಕುರಿಗಾಹಿಗಳು ಆತಂಕಗೊಂಡಿದ್ದಾರೆ. ಕರಡಿಯನ್ನು ಕೂಡಲೇ ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
