CHITRADURGA NEWS | 26 OCTOBER 2024
ಚಿತ್ರದುರ್ಗ: ಕರ್ನಾಟಕ ರಾಜ್ಯ ರೈತ ಸಂಘ ಪೂರ್ಣ ಸಮಿತಿ ಸಭೆ ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಇಂದು(ಶನಿವಾರ) ನಡೆದಿದ್ದು, ಪೂರ್ಣ ಸಮಿತಿಯನ್ನು ಪುನಾರಚನೆ ಮಾಡಲಾಗಿದೆ. ಬಡಗಲಪುರ ನಾಗೇಂದ್ರ ರಾಜ್ಯಾಧ್ಯಕ್ಷರಾಗಿ ಪುನಾರಾಯ್ಕೆ ಆಗಿದ್ದಾರೆ.
ರೈತ ಸಂಘದ ಗೌರವಾಧ್ಯಕ್ಷರಾಗಿ ಚಾಮರಸ ಮಾಲಿಪಾಟೀಲ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ರವಿಕಿರಣ್ ಪುಣಚ, ಎನ್.ಡಿ.ವಸಂತಕುಮಾರ್ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಶೀಘ್ರದಲ್ಲೇ ಮಳೆಯಿಂದ ಹಾಳಾದ ಬೆಳೆಗಳಿಗೆ ಪರಿಹಾರ | ಸಚಿವ ಕೃಷ್ಣಭೈರೇಗೌಡ
ಕಾರ್ಯಾಧ್ಯಕ್ಷರಾಗಿ ಜೆ.ಎಂ.ವೀರಸಂಗಯ್ಯ, ಎ.ಗೋವಿಂದರಾಜು, ಎ.ಎಂ.ಮಹೇಶ್‍ಪ್ರಭು, ಖಜಾಂಚಿ ಪ್ರಸನ್ನಗೌಡ, ಕಾರ್ಯದರ್ಶಿಗಳಾಗಿ ಗೋಪಾಲ ಪಾಪೇಗೌಡ, ಅರುಣ್‍ಕುಮಾರ್ ಕುರುಡಿ, ಸೂಗುರಯ್ಯ ಎಸ್ ಮಠ, ಸಂಘಟನಾ ಕಾರ್ಯದರ್ಶಿಗಳಾಗಿ ಗೋಣಿ ಬಸಪ್ಪ, ಶಿವಾನಂದ ಇಟಗಿ ಆಯ್ಕೆಯಾಗಿದ್ದಾರೆ.
ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾಗಿ ನಾಗರತ್ನಮ್ಮ ವಿ ಪಾಟೀಲ್, ಪ್ರಧಾನ ಕಾರ್ಯದರ್ಶಿಗಳಾಗಿ ನೇತ್ರಾವತಿ ಹಾಗೂ ರಮ್ಯಾ ರಾಮಣ್ಣ, ಕಾರ್ಯಾಧ್ಯಕ್ಷರಾಗಿ ಯಧುಶೈಲ, ಉಪಾಧ್ಯಕ್ಷರಾಗಿ ಶಾಂತಮ್ಮ ಭಾಯಿ, ವನಶ್ರೀ ಹಾಗೂ ಪ್ರೇಮ ಕಂದಗಲ್, ಕಾರ್ಯದರ್ಶಿಗಳಾಗಿ ಮಮತಾ ಹಾಗೂ ರತ್ನಮ್ಮ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಏರುತ್ತಲೇ ಇದೆ ನೀರಿನ ಮಟ್ಟ | ವಿವಿ ಸಾಗರಕ್ಕೆ ಇಂದು ಬಂದ ನೀರೆಷ್ಟು ?
ರಾಜ್ಯ ಉಪಾಧ್ಯಕ್ಷರಾಗಿ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕೆ.ಪಿ.ಭೂತಯ್ಯ, ಶಿವಾನಂದ ಕುಗ್ವೆ, ಕೆ.ಮಲ್ಲಯ್ಯ, ಅಮರಣ್ಣ ಗುಡಿಯಾಳ, ಎಂ.ಎಸ್.ಕೆಂಪೇಗೌಡ, ದೊಡ್ಡ ಬಸವನಗೌಡ, ನಾಗಪ್ಪ ಉಂಡಿ, ಆರ್.ಗಣಾಚಾರ್, ಮುತ್ತಪ್ಪಕುಮಾರ್, ಮಂಜುಳಾ ಎಸ್.ಅಕ್ಕಿ, ಖಾಸೀಂ ಅಲಿ, ವರಿಷ್ಠ ಮಂಡಳಿಯಲ್ಲಿ ಸುನಿತಾ ಪುಟ್ಟಣ್ಣಯ್ಯ ಇದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
