
CHITRADURGA NEWS | 26 OCTOBER 2024
ಚಿತ್ರದುರ್ಗ: ಮಳೆ ನಿಂತರೂ ಮರದ ಹನಿಗಳು ನಿಲ್ಲಲಿಲ್ಲ ಎನ್ನುವಂತೆ, ಭರ್ಜರಿಯಾಗಿ ಸುರಿದ ಮಳೆರಾಯ ಬಿಡುವು ಕೊಟ್ಟಿದ್ದಾನೆ. ಆದರೆ, ಬಹುತೇಕ ಕೆರೆ, ಕಟ್ಟೆಗಳು ಭರ್ತಿಯಾಗಿದ್ದು, ಕೋಡಿ ಬಿದ್ದ ನೀರಿನ ಹರಿವು ಮಾತ್ರ ಕಡಿಮೆಯಾಗಿಲ್ಲ.
ಇದನ್ನೂ ಓದಿ: ಮಾಡದಕೆರೆ, ಮತ್ತೋಡು ಹೋಬಳಿಗಳಿಗೆ ವಿವಿ ಸಾಗರ ನೀರು ಕೊಡಿ | ಶಾಸಕ ಬಿ.ಜಿ.ಗೋವಿಂದಪ್ಪ

ಹಳ್ಳ, ಕೊಳ್ಳಗಳಲ್ಲಿ ಇನ್ನೂ ನೀರು ಹರಿಯುತ್ತಿದೆ. ಇದರೊಟ್ಟಿಗೆ ವೇದಾವತಿ ನದಿಯಲ್ಲೂ ನೀರು ಇನ್ನೂ ಹರಿಯುತ್ತಿರುವುದರಿಂದ ವಾಣಿವಿಲಾಸ ಸಾಗರ ಜಲಾಶಯಕ್ಕೆ(Vanivilasa Dam) ಬರುತ್ತಿರುವ ಒಳಹರಿವಿನ ಪ್ರಮಾಣ ಕಡಿಮೆಯಾಗಿಲ್ಲ.
ಅ.26 ಶನಿವಾರ ಬೆಳಗ್ಗೆ ಮಾಪನದ ವೇಳೆ ಜಲಾಶಯಕ್ಕೆ 2888 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇಂದಿನ ಜಲಾಶಯ ಮಟ್ಟ 126.40 ಅಡಿಗೆ ತಲುಪಿದ್ದು, ಒಟ್ಟಾರೆ 27.40 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಇದನ್ನೂ ಓದಿ: ವಿವಿ ಸಾಗರ ಭರ್ತಿಗೆ ಇನ್ನು 3 ಅಡಿ ಮಾತ್ರ ಬಾಕಿ | 126 ಅಡಿ ದಾಟಿದ ಜಲಾಶಯ
ಮುಂದಿನ ಮಳೆಗಳು ಸರಿಯಾಗಿ ಎರಡು, ಮೂರು ಹದ ಬಂದರೆ ಈ ವರ್ಷವೂ ಜಲಾಶಯ ಕೋಡಿ ಬೀಳುವುದರಲ್ಲಿ ಅನುಮಾನವೇ ಇಲ್ಲ. ಇದರೊಟ್ಟಿಗೆ ಭದ್ರಾ ಜಲಾಶಯದಿಂದ ಇನ್ನಷ್ಟು ನೀರು ಹರಿದು ಬಂದರೂ 15 ದಿನಗಳಲ್ಲಿ ವಿವಿ ಸಾಗರ ಭರ್ತಿಯಾಗಲಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
