ಮುಖ್ಯ ಸುದ್ದಿ
AIDS: ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಹಿರೇಗುಂಟನೂರಿನಲ್ಲಿ ಜಾಗೃತಿ ಜಾಥಾ

CHITRADURGA NEWS | 03 DECEMBER 2024
ಚಿತ್ರದುರ್ಗ: ಸರ್ಕಾರಿ ಪ್ರಾಥಮಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರದಿಂದ ವಿಶ್ವ ಏಡ್ಸ್ (AIDS) ದಿನಾಚರಣೆ ಅಂಗವಾಗಿ ತಾಲೂಕಿನ ಹಿರೇಗುಂಟನೂರು ಗ್ರಾಮದಲ್ಲಿ ಮಂಗಳವಾರ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕ್ಲಿಕ್ ಮಾಡಿ ಓದಿ: PDO ನೇಮಕಾತಿಗೆ ಪರೀಕ್ಷೆ | ಅಗತ್ಯ ಸಿದ್ಧತೆ ಪೊಲೀಸರ ನಿಯೋಜನೆಗೆ ಸೂಚನೆ

ಹಿರೇಗುಂಟನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಜಯಶ್ರೀ ಮಾತನಾಡಿ, ಸರಿಯಾದ ಹಾದಿಯನ್ನು ಹಿಡಿಯಿರಿ, ನನ್ನ ಆರೋಗ್ಯ, ನನ್ನ ಹಕ್ಕು ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿರುವ 2024ರ ವಿಶ್ವ ಏಡ್ಸ್ ದಿನಾಚರಣೆ ಅರ್ಥಪೂರ್ಣವಾಗಿದೆ.
ಏಡ್ಸ್ ರೋಗಿಗಳು ಈಗ ಭಯಪಡುವ ಅಗತ್ಯವಿಲ್ಲ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆದರೆ ಉತ್ತಮ ಜೀವನ ನಡೆಸಬಹುದು ಎಂದು ತಿಳಿಸಿದರು.
ಕ್ಲಿಕ್ ಮಾಡಿ ಓದಿ: ಶಾಸಕ ಎಂ.ಚಂದ್ರಪ್ಪ ಅನುದಾನದಲ್ಲಿ ಅಂಬ್ಯುಲೆನ್ಸ್ ಕೊಡುಗೆ | ಜಿಲ್ಲಾಸ್ಪತ್ರೆಗೆ ಹಸ್ತಾಂತರ
ಹಿರಿಯ ಪ್ರಾಥಮಿಕ ಸುರಕ್ಷಣಾಧಿಕಾರಿ ಶಾಂತಮ್ಮ, ಅರೋಗ್ಯ ನಿರೀಕ್ಷಣಾಧಿಕಾರಿಗಳಾದ ಪುಟ್ಟು ಸ್ವಾಮಿ, ನಾಗರಾಜ್, ಅಜಯಕುಮಾರ್, ಯೋಗಗುರು ರವಿ ಕೆ. ಅಂಬೇಕರ್, ಆರೋಗ್ಯ ಸುರಕ್ಷಣಾಧಿಕಾರಿಗಳಾದ ಗಂಗಮ್ಮ ಪರ್ವೀನ್, ಸುಶೀಲಮ್ಮ, ವೀರಮ್ಮ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಪ್ರಿಯಾ, ಪುನೀತ್ ಭಾಗವಹಿಸಿದ್ದರು.
