
CHITRADURGA NEWS | 13 AUGUST 2025
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗವನ್ನು ಬೆಚ್ಚಿ ಬೀಳಿಸಿದ್ದ ಆಟೋ ಚಾಲಕ ರವಿಕುಮಾರ್ ಕೊಲೆ ಪ್ರಕರಣವನ್ನು ಚಿತ್ರದುರ್ಗ ಪೊಲೀಸರು ಬೇಧಿಸಿದ್ದಾರೆ.
ಆಟೋ ಚಾಲಕ ರವಿಕುಮಾರ್ ಕೊಲೆಯ ಹಿಂದೆ ಆತನ ಪತ್ನಿ, ಪುತ್ರ ಹಾಗೂ ಬೆಂಗಳೂರು ಮೂಲದ ಟಚ್ ಗಣೇಶ್ ಎಂಬಾತನನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಜಾನುಕೊಂಡ ಬಳಿ ಆಟೋ ಚಾಲಕನ ಭೀಕರ ಹತ್ಯೆ | ಕೊಲೆ ಬಳಿಕ ಮೂಟೆ ಕಟ್ಟಿ ಎಸೆದು ಹೋದ ದುಷ್ಕರ್ಮಿಗಳು
ಚಿತ್ರದುರ್ಗ ಹೊರವಲಯದ ಜಾನುಕೊಂಡ ಬಳಿ ರವಿಕುಮಾರ್ ಕೊಲೆ ಮಾಡಿ ಗುರುತು ಪತ್ತೆಯಾಗದಂತೆ ಬೆಡ್‌ಶೀಟ್‌ನಲ್ಲಿ ಸುತ್ತಿ ಬಿಸಾಡಿ ಬರಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಕೊಲೆಯ ಆರೋಪಿಗಳನ್ನು ಬಂಧಿಸಿದ್ದಾರೆ.
ರವಿಕುಮಾರ್ ಪತ್ನಿ ಸುನಿತಾ, ಪುತ್ರ ವಿಷ್ಣು ಹಾಗೂ ಬೆಂಗಳೂರು ಮೂಲದ ಟಚ್ ಗಣೇಶ್ ಬಂಧನವಾಗಿದೆ. ರವಿಕುಮಾರ್ ಕುಟುಂಬಕ್ಕೆ ಸಾಲ ಕೊಟ್ಟು ಪರಿಚಿತನಾಗಿದ್ದ ಗಣೇಶ್ ಈ ಪ್ರಕರಣದ A1 ಆರೋಪಿ.
ಇದನ್ನೂ ಓದಿ: ಅಡಿಕೆ ಧಾರಣೆ | ಆಗಸ್ಟ್ 12| ಯಾವ ಅಡಿಕೆಗೆ ಎಷ್ಟು ರೇಟ್
ರವಿಕುಮಾರ್ ಕೊಲೆ ನಂತರ ಆತನ ಮೃತ ದೇಹವನ್ನು ಬೆಡ್‌ಶೀಟ್ ನಲ್ಲಿ ಸುತ್ತಿ ಎಸೆಯಲಾಗಿತ್ತು. ಈ ಬೆಡ್‌ಶೀಟ್ ಮಂಗಳಮುಖಿಯೊಬ್ಬರಿಗೆ ಸೇರಿದ್ದು, ಇದರ ಆಧಾರದಲ್ಲಿ ಟಚ್ ಗಣೇಶ್ ಬಂಧನವಾಗಿದೆ.
ಜುಲೈ 20 ರಂದು ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣವನ್ನು ಪೊಲೀಸರು ತಿಂಗಳು ಕಳೆಯುವುದರಲ್ಲಿ ಪತ್ತೆ ಮಾಡಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
