ಕ್ರೈಂ ಸುದ್ದಿ
ಪ್ರಿಯತಮೆಯ ಕತ್ತು ಕೊಯ್ದು ಹತ್ಯೆಗೆ ಯತ್ನ

Published on
CHITRADURGA NEWS | 30 JANUARY 2024
ಚಿತ್ರದುರ್ಗ: ಕತ್ತು ಕೊಯ್ದು ಪ್ರಿಯತಮೆಯನ್ನೇ ಹತ್ಯೆ ಮಾಡಲು ಯತ್ನಿಸಿರುವ ಘಟನೆ ಚಿತ್ರದುರ್ಗ ತಾಲೂಕಿನ ಸುಲ್ತಾನಪುರದಲ್ಲಿ ನಡೆದಿದೆ.
ದಾದಾಪೀರ್ ಎಂಬಾತ ಸೋಮವಾರ ರಾತ್ರಿ ಸಮೀನಾ ಎಂಬುವವರ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದು ಹತ್ಯೆಗೆ ಯತ್ನಿಸಿದ್ದಾನೆ.
ಇದನ್ನೂ ಓದಿ: ಮುಖ್ಯ ರಸ್ತೆಯಲ್ಲೇ ಮೊಣಕಾಲುದ್ದ ಗುಂಡಿ
ಗಂಭೀರವಾಗಿ ಗಾಯಗೊಂಡಿರುವ ಸಮೀನಾ ಅವರನ್ನು ಸ್ಥಳೀಯರು ದಾವಣಗೆರೆಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವವಾಗಿರುವ ಸಮೀನಾ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಕಳೆದ ಒಂದು ತಿಂಗಳಿಂದ ಇಬ್ಬರೂ ಸುಲ್ತಾನಪುರದಲ್ಲಿ ಮನೆ ಮಾಡಿಕೊಂಡು ವಾಸವಿದ್ದರು ಎನ್ನಲಾಗಿದೆ. ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ರಾತ್ರಿ ಹತ್ಯೆಗೆ ಯತ್ನ ನಡೆದಿದೆ.
ಇದನ್ನೂ ಓದಿ: ಬ್ಯಾಟರಿ ಚಾಲಿತ ವೀಲ್‍ಚೇರ್‍ಗೆ ಅರ್ಜಿ ಆಹ್ವಾನ
ಸದ್ಯ ಆರೋಪಿ ದಾದಾಪೀರ್ ಬಂಧನಕ್ಕೆ ಭರಮಸಾಗರ ಪೊಲೀಸರು ಬಲೆ ಬೀಸಿದ್ದಾರೆ.
Continue Reading
Related Topics:Attempted Murder, Beloved, Bharamasagar, Chitradurga, Police, Sultanpur, ಚಿತ್ರದುರ್ಗ, ಪೊಲೀಸ್, ಪ್ರಿಯತಮೆ, ಭರಮಸಾಗರ, ಸುಲ್ತಾನಪುರ, ಹತ್ಯೆ ಯತ್ನ

Click to comment