Connect with us

    ಕಿರಣ್ ಯಾದವ್ NSUI ನೂತನ ಜಿಲ್ಲಾ ಅಧ್ಯಕ್ಷ

    ಕಿರಣ್ ಯಾದವ್ ಎನ್‍ಎಸ್‍ಯುಐ ಜಿಲ್ಲಾ ಅಧ್ಯಕ್ಷ

    ಮುಖ್ಯ ಸುದ್ದಿ

    ಕಿರಣ್ ಯಾದವ್ NSUI ನೂತನ ಜಿಲ್ಲಾ ಅಧ್ಯಕ್ಷ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 30 JANUARY 2024

    ಚಿತ್ರದುರ್ಗ: ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್(NSUI) ಚಿತ್ರದುರ್ಗ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಕಿರಣ್ ಯಾದವ್ ಅವರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಹೊಳಲ್ಕೆರೆ ತಾಲೂಕು ಆವಿನಹಟ್ಟಿ ಗ್ರಾಮದ ಕಿರಣ್ ಯಾದವ್ ಈ ಹಿಂದೆ ಎರಡು ಅವಧಿಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.

    ಇದನ್ನೂ ಓದಿ: ಪ್ರೇಯಸಿಯ ಕತ್ತು ಕೊಯ್ದು ಹತ್ಯೆಗೆ ಯತ್ನ

    ಬಿ.ಕಾಂ ಪದವೀಧರರಾಗಿರುವ ಕಿರಣ್, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.
    ಈ ಹಿಂದೆ ವಿನಯ್ ಗೋಡೆಮನೆ ಚಿತ್ರದುರ್ಗ ಜಿಲ್ಲಾ ಎನ್‍ಎಸ್‍ಯುಐ ಅಧ್ಯಕ್ಷರಾಗಿದ್ದರು.

    ಈಗ ವಿನಯ್ ಗೋಡೆಮನೆ ಎನ್‍ಎಸ್‍ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ತೆರವಾಗಿದ್ದ ಚಿತ್ರದುರ್ಗ ಜಿಲ್ಲಾ ವಿದ್ಯಾರ್ಥಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕಿರಣ್ ಯಾದವ್ ನೇಮಕವಾಗಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top