CHITRADURGA NEWS | 24 July 2025
ಹೊಸದುರ್ಗ: ಕೊಲೆ ಪ್ರಕರಣವೊಂದು ಆರು ತಿಂಗಳ ಬಳಿಕ ಬೆಳಕಿಗೆ ಬಂದಿದ್ದು, ಇದರಲ್ಲಿ ಶಾಸಕರ ಮಾಜಿ ಕಾರು ಚಾಲಕನೇ ಪ್ರಮುಖ ಆರೋಪಿಯಾಗಿದ್ದಾನೆ.
ಇದನ್ನೂ ಓದಿ: ಜಾನುಕೊಂಡ ಬಳಿ ಆಟೋ ಚಾಲಕನ ಭೀಕರ ಹತ್ಯೆ | ಕೊಲೆ ಬಳಿಕ ಮೂಟೆ ಕಟ್ಟಿ ಎಸೆದು ಹೋದ ದುಷ್ಕರ್ಮಿಗಳು
ಹೊಸದುರ್ಗ ತಾಲೂಕು ಜಾನಕಲ್ ಗ್ರಾಮದ ಪ್ರಸನ್ನ(45) ಕೊಲೆಯಾದ ವ್ಯಕ್ತಿಯಾಗಿದ್ದು, ಈ ಪ್ರಕರಣದಲ್ಲಿ ಆತನ ಪತ್ನಿ, ಜಾನಕಲ್ ಗ್ರಾಮ ಪಂಚಾಯಿತಿ ಸದಸ್ಯೆ ಗಾಯತ್ರಿ, ಹೊಸದುರ್ಗ ಶಾಸಕರಾದ ಬಿ.ಜಿ.ಗೋವಿಂದಪ್ಪ ಅವರ ಬಳಿ ಕಾರು ಚಾಲಕನಾಗಿ ಕಾರ್ಯನಿರ್ವಹಿಸಿದ್ದ ಯಶವಂತ, ಡಿ.ಮಲ್ಲಾಪುರ ವೀರಭದ್ರಪ್ಪ ಹಾಗೂ ಅಜ್ಜಂಪುರ ತಾಲೂಕು ಗುಡಿಹಳ್ಳಿಯ ಲೋಹಿತ ಬಂಧಿತರು.ಆರು ತಿಂಗಳ ಹಿಂದೆ ನಡೆದಿದ್ದ ಪ್ರಸನ್ನ ಕೊಲೆ ಪ್ರಕರಣವನ್ನು ಬೇದಿಸಿರುವ ಪೊಲೀಸರು ಈ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಏನಿದು ಕೊಲೆ ಪ್ರಕರಣ:2025 ಮಾರ್ಚ್ 17 ರಂದು ಜಾನಕಲ್ ಗ್ರಾಮದ ಪ್ರಸನ್ನಕುಮಾರ್ ಕಾಣೆಯಾಗಿದ್ದಾರೆ. ಎಂದು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗುತ್ತದೆ.
ಇದನ್ನೂ ಓದಿ: ಮದುವೆಗೆ ಹೆಣ್ಣು ಸಿಗಲಿಲ್ಲವೆಂದು ಹೋಮ್ ಗಾರ್ಡ್ ಆತ್ಮ*ಹತ್ಯೆ
ಆನಂತರ ಚಿಕ್ಕಮಗಳೂರು ಜಿಲ್ಲೆಯ ಲಿಂಗದಹಳ್ಳಿ ಬಳಿ ಪ್ರಸನ್ನ ಅವರ ಶವ ಸಿಗುತ್ತದೆ. ಕೊಲೆ ಮಾಡಿ ಅರಣ್ಯದಲ್ಲಿ ತಂದು ಎಸೆಯಲಾಗಿದೆ ಎಂಬ ಶಂಕೆ ವ್ಯಕ್ತವಾಗಿತ್ತು.
ಆದರೆ, ಆರೋಪಿಗಳು ಫೆಬ್ರವರಿ 16 ರಂದು ಪ್ರಸನ್ನಕುಮಾರ ಅವರನ್ನು ಜಾನಕಲ್‌ನಿಂದ ಕಾರಿನಲ್ಲಿ ಕರೆದೊಯ್ದು ಲಿಂಗದಹಳ್ಳಿ ಠಾಣೆ ವ್ಯಾಪ್ತಿಯ ಸಂತೆವೇರಿ ಬಳಿ ಹೊಡೆದು, ಟವೆಲ್‌ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಸೆದು ಹೋಗಿದ್ದರು ಎನ್ನುವುದು ತಿಳಿದು ಬಂದಿದೆ.
ಇದನ್ನೂ ಓದಿ: ಟಾಟಾಏಸ್ ಹರಿದು ಮೂರು ವರ್ಷದ ಮಗು ಮೃತ | ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯಲ್ಲಿ ಘಟನೆ
ಈ ಪ್ರಕರಣದಲ್ಲಿ ಪ್ರಸನ್ನಕುಮಾರ್ ಪತ್ನಿ ಗಾಯತ್ರಿ ಅಕ್ರಮ ಸಂಬಂಧ ಶಂಕೆ ವ್ಯಕ್ತಪಡಿಸಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಮುಂದುವರೆದಿದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
