ಮುಖ್ಯ ಸುದ್ದಿ
Subsidy; ಜಿಮ್ ತೆರೆಯಲು ಸಹಾಯಧನಕ್ಕೆ ಅರ್ಜಿ ಆಹ್ವಾನ

CHITRADURGA NEWS | 07 SEPTEMBER 2024
ಚಿತ್ರದುರ್ಗ: 2024-25ನೇ ಸಾಲಿಗೆ ಪರಿಶಿಷ್ಟ ಜಾತಿ ಉಪಯೋಜನೆ ಅಡಿಯಲ್ಲಿ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಅಧಿಕೃತ ಕ್ರೀಡಾ ಕೂಟಗಳಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿ ಕ್ರೀಡಾಪಟುಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಜಿಮ್(gym) ಸ್ಥಾಪನೆಗೆ ಸಹಾಯಧನ(Subsidy) ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಕ್ಲಿಕ್ ಮಾಡಿ ಓದಿ: Ettinhola Project: ವಾಣಿವಿಲಾಸ ಜಲಾಶಯದತ್ತ ಎತ್ತಿನಹೊಳೆ | ಇದು ಡಿಕೆಶಿ ಬದ್ದತೆ ಇಚ್ಛಾಶಕ್ತಿಯ ಪ್ರತಿರೂಪ | ಇಲ್ಲಿದೆ ನೋಡಿ ಯೋಜನೆಯ ಕಂಪ್ಲೀಟ್ ಡಿಟೇಲ್ಸ್

ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ ತರಬೇತುದಾರರಿಂದ ಪರಿಶೀಲಿಸಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಿಂದ ದೃಢೀಕರಿಸಿ ಸೆ.27ರೊಳಗಾಗಿ, ಬೆಂಗಳೂರಿನ ಕೇಂದ್ರ ಕಚೇರಿಗೆ ಕಳುಹಿಸಿಕೊಡುವಂತೆ ಸೂಚಿಸಿದೆ. ಕೇಂದ್ರ ಕಚೇರಿಗೆ ನೇರವಾಗಿ ಬಂದ ಅರ್ಜಿಗಳನ್ನು ಹಾಗೂ ಕೊನೆಯ ದಿನಾಂಕದ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.
