CHITRADURGA NEWS | 18 MAY 2026
ಚಿತ್ರದುರ್ಗ: ಬಕ್ರೀದ್ ಸಂದರ್ಭದಲ್ಲಿ ಗೋವುಗಳ ಅಕ್ರಮ ಸಾಗಾಣಿಕೆ ಮತ್ತು ಗೋಹತ್ಯೆ ತಡೆಗಟ್ಟುವಂತೆ ವಿಶ್ವ ಹಿಂದೂ ಪರಿಷತ್, ಬಜರಂಗದಳದಿಂದ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಮೇ.18 | ಮೆಕ್ಕೆಜೋಳ, ಶೇಂಗಾ ಸೂರ್ಯಕಾಂತಿ ರೇಟ್..
ಮುಂಬರಲಿರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಕಾನೂನು ಬಾಹಿರವಾಗಿ ಪ್ರಾಣಿಗಳ ಸಾಗಾಣಿಕೆ ಮತ್ತು ಗೋಹತ್ಯೆ (ಕುರ್ಬಾನಿ)ನಡೆಯುವ ಸಾಧ್ಯತೆಯಿದೆ. ಇದನ್ನು ತಡೆಗಟ್ಟಲು ಪೊಲೀಸ್ ಇಲಾಖೆಯ ಪ್ರತಿಯೊಂದು ಠಾಣೆಯ ಬೀಟ್ ಪೋಲೀಸರನ್ನು ಉಪಯೋಗಿಸಿ ಅವರವರ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಕಸಾಯಿಖಾನೆಗಳನ್ನು ಗುರುತಿಸಿ ಧಾಳಿ ಮಾಡಿ ಶಾಶ್ವತವಾಗಿ ನಿಲ್ಲಿಸಬೇಕು ಎಂದರು.
ಜಾನುವಾರು ಹತ್ಯೆ ನಡೆದ ಮನೆ, ಕಟ್ಟಡ, ಖಾಲಿ ಜಮೀನುಗಳನ್ನು ಜಫ್ತಿ ಮಾಡಿ ಸರಕಾರಕ್ಕೆ ಮುಟ್ಟುಗೋಲು ಹಾಕಲು ಕ್ರಮ ಕೈಗೊಳ್ಳಬೇಕು. ಆರೋಪಿಗಲಿಗೆ 7 ವರ್ಷ ಶಿಕ್ಷೆ ಹಾಗೂ ಜಾನುವಾರು ವಧೆ ಅಥವಾ ವಧೆ ಪ್ರಯತ್ನಕ್ಕೆ ಪ್ರತಿಯೊಂದು ಜಾನುವಾರಿಗೆ ಒಂದು ಲಕ್ಷ ದಂಡ ವಿಧಿಸಬೇಕು. ಹಾಗೂ ಅನಧಿಕ್ರತ ಸ್ಥಳ, ಕಟ್ಟಡಗಳಲ್ಲಿ ಕಟ್ಟಿ ಹಾಕಿದ ಜಾನುವಾರುಗಳನ್ನು ವಧೆಗಾಗಿ ತಯಾರಿ ಎಂದು ಪರಿಗಣಿಸಿ ಸ್ವಾಧೀನ ಪಡಿಸಬೇಕು, ಮತ್ತು ಅದನ್ನು ಯಾರಿಗೂ ವಾಪಸ್ ಕೊಡದೆ ಸರಕಾರಿ ಗೋಶಾಲೆಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದರು.
ಸಣ್ಣ ಸಣ್ಣ ವಸ್ತುಗಳಾದ ಚಿನ್ನ ಕಳ್ಳತನ ಮಾಡುವವರನ್ನು ಬಂಧಿಸಲು ಸಾಧ್ಯ ಇರುವ ಠಾಣಾ ಪೋಲಿಸರಿಗೆ ಇಷ್ಟು ದೊಡ್ಡ ಜಾನುವಾರುಗಳ ಕಳ್ಳತನ, ಅಕ್ರಮ ಕಸಾಯಿಖಾನೆಗಳಲ್ಲಿ ವಧೆ ಮಾಡುವುದನ್ನು ತಡೆಯಲು ಖಂಡಿತ ಸಾಧ್ಯವಿದೆ.
ಇದನ್ನೂ ಓದಿ: ಗೌರವ ಸಮರ್ಪಣೆಯಲ್ಲಿ ಹಳೇ ನೆನಪುಗಳ ಮೆಲಕು ಹಾಕಿದ ನಿವೃತ್ತ IPS ಅಧಿಕಾರಿ ಗಗನ್‍ದೀಪ್
ಅಕ್ರಮ ಕಸಾಯಿಖಾನೆ ಜಾನುವಾರು ವಧೆಯ ಪ್ರತಿ ಪ್ರಕರಣಗಳ ಸಂಧರ್ಭದಲ್ಲಿ ಯಾವ ಕಾರಣಕ್ಕೆ ಬೀಟ್ ಪೋಲಿಸರಿಗೆ ಮಾಹಿತಿ ಸಿಗಲಿಲ್ಲ, ಪೊಲೀಸ್ ಇಲಾಖೆಗೆ ಮೊದಲೇ ತಡೆಯಲು ಸಾಧ್ಯವಾಗಲಿಲ್ಲ ಯಾಕೆ ಎಂದು ಇಲಾಖಾ ತನಿಖೆ ನಡೆಸಿ ವ್ಯವಸ್ಥೆಯೊಳಗಿನ ದೋಷಗಳನ್ನು ಗುರುತಿಸಿ ಸರಿಪಡಿಸಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳ ಬೇಕು ಎಂದು ಒತ್ತಾಯಿಸಲಾಯಿತು.
ಈ ಅಕ್ರಮ ಕಸಾಯಿಖಾನೆಗಳಲ್ಲಿ ಮಾಂಸ ಖರೀದಿಸುವವರನ್ನು ಅಪರಾಧಿ ಎಂದು ಪರಿಗಣಿಸಿ ಶಿಕ್ಷಿಸಬೇಕು. ಪ್ರತಿಯೊಂದು ಬೀಫ್ ಸ್ಟಾಲ್ ಗಳಲ್ಲಿ ಬೀಫ್ ಮಾರಾಟ ಆದಾಗ ತನಿಖೆ ನಡೆಸಬೇಕು.
ರಾಜ್ಯಾದ್ಯಂತ ಅಕ್ರಮ ಜಾನುವಾರು ಸಾಗಾಟ ನಡೆಯುತ್ತಿದ್ದು ಅದರ ಪ್ರಾರಂಭ ಸ್ಥಳಗಳಾದ ಜಾನುವಾರು ಸಂತೆ ಹಾಗೂ ಅದರ ಸುತ್ತಮುತ್ತಲು ಕನಿಷ್ಟ 10 ಕಿ.ಮೀ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ ಮಾಡಿ ಯಾವುದೇ ವಾಹನದಲ್ಲಿ ಕಾನೂನು ನಿಯಮಾವಳಿ ಮೀರಿ ಜಾನುವಾರು ಸಾಗಾಟ ಆಗದಂತೆ ತಡೆಯಲು ಈಗಿನಿಂದಲೇ 24 ಗಂಟೆ ಗಸ್ತು ಸ್ಕ್ವಾಡ್ ನಿಯೋಜಿಸಬೇಕು ಎಂದು ಒತ್ತಾಯಿಸಿದರು.
ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪ್ರಾಣಿ ದಯ ಸಂಘ ಒಳಗೊಂಡು ಎಲ್ಲ ಆಗತ್ಯದ ಇಲಾಖೆಗಳ ಸಮನ್ವಯ ಸಮಿತಿ ರಚಿಸಿ ಸಭೆ ಕರೆದು ಬಕ್ರೀದ್ ವೇಳೆ ಯಾವುದೇ ಜಾನುವಾರು ಬಲಿ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ವಿಎಚ್‌ಪಿ ಕಾರ್ಯಕರ್ತರು ಮನವಿಯಲ್ಲಿ ಉಲ್ಲೇಖಿಸಿ ಸಲ್ಲಿಸಿದರು.
ಇದನ್ನೂ ಓದಿ: ಜಿಲ್ಲಾಸ್ಪತ್ರೆಗೆ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ದಿಢೀರ್ ಭೇಟಿ | ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸಲಹೆ
ಬಜರಂಗದಳ ಶಿವಮೊಗ್ಗ ವಿಭಾಗ ಸಹ ಸಂಯೋಜಕ ಸಂದೀಪ್, ಜಿಲ್ಲಾ ಸಹ ಸಂಯೋಜಕ ರಾಮಾಂಜನೇಯ, ಜಿಲ್ಲಾ ಗೋರಕ್ಷಾ ಪ್ರಮುಖ್ ತೇಜೇಶ್ವರ್ ಎಂ ಜೆ ಮಠ್, ನಗರ ಸಹ ಸುರಕ್ಷಾ ಪ್ರಮುಖ್ ಪ್ರೇಮ್, ಗ್ರಾಮಾಂತರ ಸಂಯೋಜಕ ದರ್ಶನ್, ಗ್ರಾಮಾಂತರ ಗೋರಕ್ಷಾ ಮತ್ತು ಸಹ ಪ್ರಮುಖ್ ಸಿದ್ದಾರ್ಥ್, ನವೀನ್, ಗಿರೀಶ್, ಸಂತೋಷ ಇತರೆ ಬಜರಂಗದಳ ಕಾರ್ಯಕರ್ತರು ಇದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
