CHITRADURGA NEWS | 19 MAY 2026
ಚಿತ್ರದುರ್ಗ: ಬಿಸಿಲ ಬೇಗೆಗೆ ಬೆಂದು ಹೋಗಿದ್ದ ಕೋಟೆನಾಡು ಚಿತ್ರದುರ್ಗ ಜಿಲ್ಲೆ ಮೇಲೆ ಮಳೆರಾಯ ಕೃಪೆ ತೋರಿಸಿದ್ದಾನೆ.
ಕಳೆದೊಂದು ವಾರದಿಂದ ಜಿಲ್ಲೆಯ ವಿವಿಧೆಡೆಗಳಲ್ಲಿ ಮಳೆಯಾಗುತ್ತಿದೆ. ಸೋಮವಾರ ರಾತ್ರಿ ಚಿತ್ರದುರ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಾಕಷ್ಟು ಮಳೆಯಾಗಿದೆ.
ಇದನ್ನೂ ಓದಿ:ನಾಳೆ ಚಿತ್ರದುರ್ಗ ನಗರದಲ್ಲಿ ವಿದ್ಯುತ್ ವ್ಯತ್ಯಯ | ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲ
ಚಿತ್ರದುರ್ಗ ನಗರದಲ್ಲಿ ಸುಮಾರು ಮುಕ್ಕಾಲು ಗಂಟೆ ಸತತ ಸುರಿದ ಮಳೆಯಿಂದ ಎಲ್ಲೆಲ್ಲೂ ನೀರು ಎನ್ನುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ನದಿಯಂತಾದ ಬಿ.ಡಿ.ರಸ್ತೆ:
ಚಿತ್ರದುರ್ಗ ನಗರದ ಮುಖ್ಯರಸ್ತೆ ಬಿ.ಡಿ.ರೋಡ್‌ನಲ್ಲಿ ರಾತ್ರಿ ಸುರಿದ ಮಳೆ ಅವಾಂತರವನ್ನೇ ಸೃಷ್ಟಿಸಿತ್ತು. ಈ ಹಿಂದೆ ಸಿ.ಸಿ ರಸ್ತೆ ನಿರ್ಮಾಣಕ್ಕೂ ಮೊದಲು ಸಣ್ಣ ಮಳೆಗೂ ಈ ರಸ್ತೆಯಲ್ಲಿ ನೀರು ನಿಂತು ರಸ್ತೆ ದಾಟುವುದೇ ಸಮಸ್ಯೆ ಆಗುತ್ತಿತ್ತು.
ಸಣ್ಣ ವಾಹನ ಹೋದರೂ ಅಕ್ಕಪಕ್ಕದ ಅಂಗಡಿ ಮಳಿಗೆಗಳಿಗೆ ನೀರು ನುಗ್ಗುತ್ತಿತ್ತು. ಸಾಕಷ್ಟು ಬಾರಿ ಅಂಗಡಿಗಳಿಗೆ ನೀರು ನುಗ್ಗೆ ನಷ್ಟ ಅನುಭವಿಸಿದ ಘಟನೆಗಳು ನಡೆದಿವೆ. ಈ ನಡುವೆ ನಗರದಲ್ಲಿ ಸಿ.ಸಿ.ರಸ್ತೆ ನಿರ್ಮಾಣವಾಯಿತು.
ಇದನ್ನೂ ಓದಿ: ಜಿಲ್ಲಾ ಯಾದವ ಗೊಲ್ಲರ ಸಂಘದ ಚುನಾವಣೆ | ನಿರ್ದೇಶಕರಾಗಿ 15 ಜನ ಆಯ್ಕೆ
ಬಿ.ಡಿ.ರಸ್ತೆಯಲ್ಲೂ ಭರ್ಜರಿಯಾಗಿ ಹೊಸ ರಸ್ತೆ ನಿರ್ಮಾಣವಾಗಿದೆ. ಅಕ್ಕಪಕ್ಕದಲ್ಲಿ ಚರಂಡಿಯೂ ನಿರ್ಮಾಣವಾಗಿದೆ ಆದರೆ, ನೀರು ಮಾತ್ರ ಚರಂಡಿಗೆ ಇಳಿಯುವಂತೆ ಕಾಣಿಸುತ್ತಿಲ್ಲ.
ಮಕ್ಕಳ ಸಮೇತ ನೀರಲ್ಲಿ ಬಿದ್ದ ದಂಪತಿ:
ರಾತ್ರಿ ಸುರಿದ ಭರ್ಜರಿ ಮಳೆ ತುಸು ಕಡಿಮೆಯಾಗುತ್ತಲೇ ಇಬ್ಬರು ಪುಟ್ಟ ಮಕ್ಕಳ ಸಮೇತ ಮನೆಗೆ ತೆರಳುತ್ತಿದ್ದ ಕುಟುಂಬ ಸ್ಕೂಟಿ ಸಮೇತ ನೀರಲ್ಲಿ ಬಿದ್ದ ಘಟನೆ ವೀಡಿಯೋದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:
ಮೊಳಕಾಲುದ್ದ ನೀರು ನಿಂತರೆ ವಾಹನಗಳು ಓಡಾಡುವುದಾದರೂ ಹೇಗೆ ಎಂದು ಚಿತ್ರದುರ್ಗ ನಿವಾಸಿಗಳು ನಗರಸಭೆ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಣ್ಣ ಮಳೆಗೂ ಹೀಗಾದರೆ ಮುಂದೇನು ಗತಿ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
