
CHITRADURGA NEWS | 16 JUNE 2024
ಚಿತ್ರದುರ್ಗ: ನಟ ದರ್ಶನ ಮತ್ತು ಆತನ ನಟೋರಿಯಸ್ ಗ್ಯಾಂಗ್‌ನಿಂದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಅನು ಕುಮಾರ್ ತಂದೆ ಚಂದ್ರಣ್ಣ (60) ಅವರ ಅಂತ್ಯಕ್ರಿಯೆ ಶನಿವಾರ ಮಧ್ಯರಾತ್ರಿ ಹೊಳಲ್ಕೆರೆ ರಸ್ತೆಯ ರುದ್ರಭೂಮಿಯಲ್ಲಿ ನೆರವೇರಿತು.
ನ್ಯಾಯಾಲಯದ ಆದೇಶದಂತೆ ಅಂತ್ಯಕ್ರಿಯೆಗೆ ಬೆಂಗಳೂರಿನಿಂದ ಪೊಲೀಸರು ತಡರಾತ್ರಿ ಆರೋಪಿ ಅನುಕುಮಾರ್‌ನನ್ನ ಹೊಳಲ್ಕೆರೆ ರಸ್ತೆಯ ರುದ್ರಭೂಮಿಗೆ ಕರೆತಂದಿದ್ದರು. ತಂದೆಯ ಶವ ನೋಡುತ್ತಿದ್ದಂತೆ, ನನ್ನಿಂದ ಹೀಗೆ ಆಗೊಯ್ತಲ್ಲ…ಎಂದು ಆರೋಪಿ ಅನು ಕುಮಾರ್ ಕಣ್ಣೀರಿಟ್ಟರು.ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಗನನ್ನು ಕಂಡು ತಾಯಿ ಕಣ್ಣೀರಿಟ್ಟರು.
ಕ್ಲಿಕ್ ಮಾಡಿ ಓದಿ: ರೇಣುಕಾಸ್ವಾಮಿ ಪ್ರಕರಣದಲ್ಲಿ ಯಾರನ್ನು ರಕ್ಷಿಸುವ ಮಾತಿಲ್ಲ | ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ7 ಅನುಕುಮಾರ್ ಬಂಧಿತರಾಗಿದ್ದನ್ನು ತಿಳಿದು ಅವರ ತಂದೆ ಚಂದ್ರಣ್ಣ ಆಘಾತಕ್ಕೊಳಗಾಗಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಆದರೆ ಮಗನನ್ನು ಕರೆತರುವ ತನಕ ಅಂತ್ಯಕ್ರಿಯೆ ನೆರವೇರಿಸುವುದಿಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದರು. ಚಂದ್ರಪ್ಪ ಸಾವನ್ನಪ್ಪಿ 24 ಗಂಟೆ ಕಳೆದರೂ ಅಂತ್ಯಕ್ರಿಯೆ ನೆರವೇರಿಸಿರಲ್ಲಿಲ್ಲ.
ಮಗ ಬರುವ ನೀರಿಕ್ಷೆಯಲ್ಲಿ ಅಂತ್ಯಕ್ರಿಯೆಗೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ನ್ಯಾಯಾಧೀಶರ ಮುಂದೆ ಅನು ಕುಮಾರ್ ಹಾಜರುಪಡಿಸಿ, ಪೊಲೀಸರು ಅನುಗೆ ತಂದೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಟ್ಟಿದ್ದರು. ಅದರಂತೆಯೇ ಚಿತ್ರದುರ್ಗಕ್ಕೆ ಕರೆದುತಂದಿದ್ದರು.
ಕ್ಲಿಕ್ ಮಾಡಿ ಓದಿ: ರೇಣುಕಾಸ್ವಾಮಿ ಕುಟುಂಬದ ಜತೆ ನಾವಿದ್ದೇವೆ | ಚಲನಚಿತ್ರ ವಾಣಿಜ್ಯ ಮಂಡಳಿ
ರೇಣುಕಾಸ್ವಾಮಿಯನ್ನು ಅಪಹರಿಸಿದ್ದ ನಾಲ್ವರು ಆರೋಪಿಗಳು ಎ4 ರಘು, ಎ6 ಜಗದೀಶ್, ಎ7 ಅನು, ಎ8 ರವಿಯನ್ನು ಪೊಲೀಸರು ಚಿತ್ರದುರ್ಗಕ್ಕೆ ಶನಿವಾರ ರಾತ್ರಿ ಕರೆತಂದಿದ್ದಾರೆ. ಅಂತ್ಯಕ್ರಿಯೆ ನೆರವೇರಿದ ಬಳಿಕ ಪೊಲೀಸರು ಸ್ಥಳ ಮಹಜರು ನಡೆಸಿದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
