ಮುಖ್ಯ ಸುದ್ದಿ
ಅನಂತ ಕುಮಾರ್ ಹೆಗಡೆ ಒಬ್ಬ ಹುಚ್ಚ | ಮಾಜಿ ಸಚಿವ ಎಚ್.ಆಂಜನೇಯ ಏಕವಚನದಲ್ಲೇ ವಾಗ್ದಾಳಿ

CHITRADURGA NEWS | 15 JANUARY 2024
ಚಿತ್ರದುರ್ಗ (CHITRADURGA): ರಾಮರಾಜ್ಯದ ಕನಸು ಅನಾವರಣ ಮಾಡಿ ಕಾರ್ಯರೂಪಕ್ಕೆ ತಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ಅನಂತ ಕುಮಾರ್ ಹೆಗಡೆ ಒಬ್ಬ ಮನುಷ್ಯನಾ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಪ್ರಶ್ನಿಸಿದರು.
‘ಅನಂತ ಕುಮಾರ್ ಒಬ್ಬ ಹುಚ್ಚ. ಹುಚ್ಚರ ಬಗ್ಗೆ ಯಾರಾದರೂ ಮಾತಾಡ್ತಾರಾ?. ಅವನ ಬಗ್ಗೆ ಮಾತಾಡಲ್ಲ. ಅವನ ಬಗ್ಗೆ ಮಾತಾಡಿ ದೊಡ್ಡವನನ್ನಾಗಿಸಿದಂತೆ ಆಗುತ್ತದೆ’ ಎಂದು ಸೋಮವಾರ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
‘ಅವನು ಬೆಳೆದ ಹಿನ್ನೆಲೆ, ಸಂಸ್ಕೃತಿ ಅದೇ ರೀತಿ ಇರಬೇಕು. ಹೀಗಾಗಿ ಅವನು ಆ ರೀತಿ ವರ್ತನೆ ಮಾಡುತ್ತಾನೆ. ನಾವು ಆ ರೀತಿ ಅಲ್ಲ, ನಾನು ಸಹ ಏಕವಚನ ಬಳಸಬಾರದು. ಆದರೆ ಅವನಿಗೆ ಯಾವ ಭಾಷೆ ಬಳಸಿದರೂ ಕೂಡ ಸಾಲದು’ ಎಂದು ಕಿಡಿಕಾರಿದರು.

ಇದನ್ನೂ ಓದಿ: ಕೋಟೆನಾಡಿನಲ್ಲಿ ದೇಗುಲಗಳ ಸ್ವಚ್ಛತೆ ಮಾಡಿದ ಬಿಜೆಪಿ ಕಾರ್ಯಕರ್ತರು
ಕಾಂಗ್ರೆಸ್ ಸರ್ಕಾರ ಹಿಂದೂ ಧರ್ಮ, ಶ್ರೀರಾಮನ ವಿರೋಧಿ ಎಂಬ ಸಂಸದ ಮುನಿಸ್ವಾಮಿ ಹೇಳಿಕೆಗೆ, ‘ಬಹಳಷ್ಟು ಜನ ಹಿಂದೂಗಳಿರುವುದೇ ಕಾಂಗ್ರೆಸ್ ಪಕ್ಷದಲ್ಲಿ. ಹಿಂದೂ ಧರ್ಮ, ರಾಮ ಪೂಜೆ ಮಾಡುವವರು ಹೆಚ್ಚಿರುವುದು ಕಾಂಗ್ರೆಸ್ ಪಕ್ಷದಲ್ಲಿ. ರಾಮನ ಹೆಸರಿನಲ್ಲಿ ಮತಕ್ಕಾಗಿ ವ್ಯಾಪಾರ ಮಾಡುವವರು ಕಾಂಗ್ರೆಸ್ಸಿಗರಲ್ಲ. ಕೋಟ್ಯಾಂತರ ಕಾಂಗ್ರೆಸ್ಸಿಗರ ಹೃದಯದಲ್ಲಿ ರಾಮನಿದ್ದಾನೆ. ಆಂಜನೇಯನ ಹೃದಯದಲ್ಲಿ ರಾಮನಿದ್ದಂತೆ ಕಾಂಗ್ರೆಸ್ಸಿಗರ ಹೃದಯದಲ್ಲಿ ರಾಮ’ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: ಜನರ ನೆಮ್ಮದಿ ಕೆಡಿಸಿದ ಚಿರತೆ | ಆಹಾರಕ್ಕೆ ಕುರಿಹಟ್ಟಿಗಳ ಮೇಲೆ ದಾಳಿ
‘ಕಾಂಗ್ರೆಸ್ ರಾಮನ ವಿರೋಧಿ ಅಲ್ಲ, ಹಿಂದೂಗಳ ವಿರೋಧಿ ಅಲ್ಲ. ಹಿಂದೂಗಳ ಪರ, ಮುಸ್ಲಿಂರ ಪರ ಎಲ್ಲಾ ಧರ್ಮಗಳ ಜನರ ಪರವಿದ್ದೇವೆ’ ಎಂದರು.
