
CHITRADURGA NEWS | 09 December 2025
ಚಿತ್ರದುರ್ಗ: ಸೋಮವಾರ ಬೆಳಗಾವಿ ಸುವರ್ಣ ವಿಧಾನಸೌಧ ಚಳಿಗಾಲದ ಅಧಿವೇಶನದ ವಿಧಾನ ಪರಿಷತ್ ಕಲಾಪದಲ್ಲಿ ನಿಯಮ 330 ರಲ್ಲಿ ವಿಷಯ ಪ್ರಸ್ತಾಪಿಸಿ ಚರ್ಚೆ
ಎನ್.ರವಿಕುಮಾರ್ ಮಾತನಾಡಿ, ರಾಜ್ಯದಲ್ಲಿ ಮದ್ಯಪಾನ ಸೇವನೆ ಮಾಡುವ ಶೇ.2.74 ರಷ್ಟು ಜನರು ಲಿವರ್ ಸಿರೋಸಿಸ್ ಹಾಗೂ ಜಾಂಡಿಸ್‌ನಿಂದ ಬಳಲುತ್ತಿದ್ದಾರೆ. ಸರ್ಕಾರ 2025-26ರಲ್ಲಿ ರೂ.43,000 ಕೋಟಿ ಅಬಕಾರಿ ಆದಾಯ ಗುರಿ ನಿಗದಿ ಮಾಡಿದೆ. ನವೆಂಬರ್ ವರೆಗೆ ರೂ.26,615 ಕೋಟಿ ಅಬಕಾರಿ ಆದಾಯ ಸಂಗ್ರಹವಾಗಿದೆ.

ಇದನ್ನೂ ಓದಿ: ಅಡಿಕೆ ಧಾರಣೆ | ಭೀಮಸಮುದ್ರ, ಚನ್ನಗಿರಿ ಅಡಿಕೆ ಮಾರುಕಟ್ಟೆ ರೇಟ್
ಪ್ರತಿ ವರ್ಷ ವಿಶ್ವದಲ್ಲಿ 15 ಲಕ್ಷ ಜನ ಲಿವರ್ ಸಿರೋಸಿಸ್ ಮೃತಪಟ್ಟರೆ, ಇದರಲ್ಲಿ 10 ಲಕ್ಷ ಜನರು ಭಾರತದವರೇ ಆಗಿರುವುದು ದುರ್ದೈವದ ಸಂಗತಿಯಾಗಿದೆ. ಸರ್ಕಾರ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕದ ಅಡಿ ಮಾತ್ರ ಲಿವರ್ ಸಿರೋಸಿಸ್‌ಗೆ ಚಿಕಿತ್ಸೆ ನೀಡದೇ, ಮದ್ಯಪಾನದಿಂದ ಉಂಟಾದ ರೋಗಗಳಿಗೆ ಪ್ರತ್ಯೇಕವಾಗಿ ಅಬಕಾರಿ ಆದಾಯ ಶೇ.20 ರಷ್ಟನ್ನು ಈ ಖಾಯಿಲೆಗಳ ಚಿಕಿತ್ಸೆಗೆ ಮೀಸಲು ಇರಿಸಬೇಕು ಎಂದರು.

ಶಾಸಕ ಕೆ.ಎಸ್.ನವೀನ್ ಮಾತನಾಡಿ, ಮದ್ಯಪಾನ ಸಾಮಾಜಿಕ ಪಿಡುಗಾಗಿ ಬದಲಾಗಿದೆ. ದೇಶದ ಜನಸಂಖ್ಯೆಯಲ್ಲಿ 9ನೇ ಸ್ಥಾನದಲ್ಲಿರುವ ರಾಜ್ಯ, ಹಾರ್ಡ್ ಲಿಕ್ಕರ್ ಸೇವನೆಯಲ್ಲಿ ದೇಶಕ್ಕೆ ಮೊದಲನೆ ಸ್ಥಾನದಲ್ಲಿದೆ. ರಾಜ್ಯದಲಿ 6.88 ಕೋಟಿ ಕೇಸ್ ಹಾರ್ಡ್ ಲಿಕ್ಕರ್ ಬಿಕರಿಯಾಗುತ್ತಿದೆ. ಹಳ್ಳಿಗಳಲ್ಲಿ ಅಂಗಡಿಗಳಲ್ಲಿ ಮದ್ಯದೊರೆಯತ್ತಿದೆ.
ಸರ್ಕಾರ ಬಾರ್ ಲೈಸೆನ್ಸ್ ಕಡಿವಾಣ ಹಾಕಬೇಕು. ಅಕ್ರಮವಾಗಿ ಮದ್ಯಮಾರಟ ಮಾಡಿದವರ ಲೈಸೆನ್ಸ್ ರದ್ದು ಮಾಡಬೇಕು. ಮದ್ಯಪಾನ ಚಟದಿಂದ 30 ರಿಂದ 40 ವಯಸ್ಸಿನ ಗಂಡುಮಕ್ಕಳಲ್ಲಿ ಲಿವರ್ ಸಿರೋಸಿಸ್ ಖಾಯಿಲೆ ಹೆಚ್ಚಾಗಿ ಕಂಡುಬರುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮದ್ಯವರ್ಜನ ಕೇಂದ್ರದಲ್ಲಿ 1200 ಜನ ಮದ್ಯವಸನಿಗಳಲ್ಲಿ 600 ಜನರಿಗೆ ಲಿವರ್ ಸಿರೋಸಿಸ್ ಖಾಯಿಲೆ ಕಂಡುಬಂದಿದೆ. ಮದ್ಯ ವಯಸ್ಕರ ಚಿಕ್ಕ ಪುಟ್ಟ ಮಕ್ಕಳನ್ನು ಅನಾಥರಾಗಿಸಿ ಸಾವನಪ್ಪುತ್ತಿದ್ದಾರೆ. ಒಂದೇ ಗ್ರಾಮದಲ್ಲಿ 6 ಜನರು ಲಿವರ್ ಸಿರೋಸಿಸ್‌ನಿಂದ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಉದ್ದ ಜಿಗಿತ | ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಎಲ್.ಎಚ್.ಅಭಿ
ಈ ಖಾಯಿಲೆಗೆ ಚಿಕಿತ್ಸೆ ಪಡೆಯಲು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ ಲಭಿಸುತ್ತಿದೆ. ರಾಜ್ಯದಲ್ಲಿ ಆರೋಗ್ಯ ಇಲಾಖೆಯಲ್ಲಿ 30 ಗ್ಯಾಸ್ಟ್ರೋಅಂಟಲಾಜಿಸ್ಟ್ ಮಾತ್ರ ಕೆಲಸ ಮಾಡುತ್ತಿದ್ದಾರೆ. ಖಾಯಿಲೆಯಿಂದ ಬಳಲುತ್ತಿರುವರರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಮೃತರಾಗುತ್ತಿದ್ದಾರೆ. ಸರ್ಕಾರ ಮದ್ಯಮಾರಾಟ ಆದಾಯ ಗುರಿ ಹೆಚ್ಚು ಮಾಡುವ ಮೂಲಕ ಜನರನ್ನು ಮೃತ್ಯುಕೂಪಕ್ಕೆ ತಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಾಂಧೀಜಿ ಮದ್ಯಪಾನದ ನಿಷೇಧಕ್ಕೆ ಒತ್ತು ನೀಡಿದ್ದಾರೆ. ಸರ್ಕಾರ ಮದ್ಯಪಾನದ ಸೇವನೆಯ ಜಾಗೃತಿ ಮೂಡಿಸಬೇಕು. ಮದ್ಯಪಾನದಿಂದ ಲಿವರ್ ಸಿರೋಸಿಸ್ ಅಥವಾ ಜಾಂಡೀಸ್‌ನಿಂದ ಮೃತಪಟ್ಟ ಮದ್ಯ ವಯಸ್ಕರ ಮಕ್ಕಳ ಭವಿಷ್ಯಕ್ಕಾಗಿ ಹಣ ನೀಡಬೇಕು. ಅಬಕಾರಿ ಆದಾಯದಲ್ಲಿ ಖಾಯಿಲೆಗಳ ಚಿಕಿತ್ಸೆಗೆ ಹಣ ಮೀಸಲು ಇಡಬೇಕು ಎಂದು ಕೋರಿದರು.
ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಹಾಗೂ ವಿಧಾನ ಪರಿಷತ್ ಸಭಾನಾಯಕ ಹಾಗೂ ಬೋಸರಾಜು ಮಾತನಾಡಿ, ಮದ್ಯಪಾನದ ಬಗ್ಗೆ ಸರ್ಕಾರದಿಂದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಹೊರ ರಾಜ್ಯದಿಂದ ವಿಮಾನದಲ್ಲಿ ದುಬಾರಿ ಮದ್ಯ ಸಾಗಟ ಮಾಡುವುದನ್ನು ತಪ್ಪಿಸಲು ಬೇರೆ ರಾಜ್ಯಗಳಿಗೆ ಹೊಲಿಸಿ ಮದ್ಯದ ದರ ಹೆಚ್ಚಿಸಲಾಗಿದೆ.
ಇದನ್ನೂ ಓದಿ: ಪೋಲಿಯೊ ಲಸಿಕೆಯಿಂದ ಮಕ್ಕಳು ವಂಚಿತರಾಗದಿರಲಿ | ADC ಬಿ.ಟಿ.ಕುಮಾರಸ್ವಾಮಿ
ಆರೋಗ್ಯ ಇಲಾಖೆಯಿಂದ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸಲು ಕ್ರಮಕೈಗೊಳ್ಳಾಗಿದೆ. ಜಿಲ್ಲಾ ಮಟ್ಟದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲಾಗಿದೆ. ಮದ್ಯಪಾನದಿಂದ ಮೃತಪಟ್ಟವರ ಕುಟುಂದವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಸಹಾಯ ನೀಡಲು ಕ್ರಮವಹಿಸುವುದಾಗಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ಹರಿಪ್ರಸಾದ್, ಸಿ.ಟಿ.ರವಿ, ಶಿವಕುಮಾರ್, ರಮೇಶ್ ಬಾಬು, ಭಾರತಿ ಶೆಟ್ಟಿ, ಹೇಮಲತಾನಾಯ್ಕ್ ವಿಷಯದ ಕುರಿತು ಮಾತನಾಡಿದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
