
CHITRADURGA NEWS | 16 AUGUST 2024
ಚಿತ್ರದುರ್ಗ: ಯಾರನ್ನೋ ಸಮಾಧಾನ ಮಾಡಿ, ಒಳ್ಳೆಯವನಾಗಲು ನಾನು ಬಂದಿಲ್ಲ. ನಿಮ್ಮ ಮತ್ತು ಸಹನ ಅವರ ಕಣ್ಣೀರು ನೋಡಿ ಬೇಸರವಾಯಿತು. ಮಾನವೀಯತೆ ಆಧಾರದ ಮೇಲೆ ಭೇಟಿ ಮಾಡಲು ಬಂದಿದ್ದೇನೆ ಎಂದು ನಟ ಒಳ್ಳೆ ಹುಡುಗ ಪ್ರಥಮ್ ತಿಳಿಸಿದರು.
ನಗರದ ರೇಣುಕಾಸ್ವಾಮಿ ನಿವಾಸಕ್ಕೆ ಗುರುವಾರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ, ‘ನಿಮ್ಮ ಮಗನ ಪ್ರಾಣ ಹೋಗಿದೆ. ನಾನು ಏನೇ ಕೊಟ್ಟರು ಮಗನ ಪ್ರಾಣ ವಾಪಾಸ್ಸು ಕೊಡಲು ಆಗುವುದಿಲ್ಲ. ನಿಮ್ಮನ್ನು ಸಮಾಧಾನ ಮಾಡಿ ಇನ್ಯಾರನ್ನೋ ಸಮರ್ಥನೆ ಮಾಡುವ ಸಣ್ಣ ವ್ಯಕ್ತಿತ್ವ ನನಗಿಲ್ಲ’ ಎಂದರು.
‘ನಿಮಗೆ ಈಗ ಇನ್ನೊಬ್ಬ ಮಗಳಿದ್ದಾರೆ, ಅದು ನಿಮ್ಮ ಗಮದಲ್ಲಿರಲಿ. ನೀವು ಇನ್ನೂ 25 ವರ್ಷಗಳ ಕಾಲ ಆರೋಗ್ಯವಾಗಿದ್ದು ಬದುಕಬೇಕು. ಅವರ ಭವಿಷ್ಯ ಗಟ್ಟಿ ಮಾಡಬೇಕು. ನಿಮಗೆ ಮೊದಲಿಗಿಂತ ಈಗ ಜವಬ್ದಾರಿ ಇನ್ನೂ ಹೆಚ್ಚಿದೆ’ ಎಂದರು.

ಕ್ಲಿಕ್ ಮಾಡಿ ಓದಿ:ಕರ್ನಾಟಕಕ್ಕೆ ಚಿತ್ರದುರ್ಗವೇ ನಂ.1 | ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್
‘ನನ್ನ ಮಗ ಏನು ಮಾಡಿದ್ದಾನೋ ನಮಗೆ ಗೊತ್ತಿಲ್ಲ, ಅದಕ್ಕೆ ಸಾವೇ ಪರಿಹಾರವೇ. ನನ್ನ ಮಗನ ಸಾವಿಗೆ ನಮಗೆ ನ್ಯಾಯ ಸಿಗಬೇಕು. ಕಾನೂನು ಮೂಲಕ ತಪ್ಪಿತಸ್ಥರನ್ನು ಕಂಡು ಹಿಡಿದು ಶಿಕ್ಷೆ ಕೊಡಿಸಿದರೆ ನಮಗೆ ಸಮಾಧಾನ. ಅವರು ಎಂಥವರೇ ಆರೋಪಿ ಇದ್ದರು ಅವರಿಗೆ ಶಿಕ್ಷೆ ಆಗಬೇಕು. ಯಾರನ್ನೂ ಬಿಡಬಾರದು’ ಎಂದು ಶಿವನಗೌಡ್ರು ಮನವಿ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಥಮ್, ‘ನಾನು ಯಾರನ್ನೂ ಓಲೈಸಲು ಬಂದಿಲ್ಲ, ನನಗನ್ನಿಸಿದ್ದನ್ನು ಮಾಡುತ್ತೇನೆ. ನಾನು ವೈಯಕ್ತಿಕವಾಗಿ ನೋಡಿದಂತೆ ಸಿದ್ದರಾಮಣ್ಣ ಹಾಗೆಲ್ಲ ಮಾಡಲ್ಲ. ಪ್ರಕರಣವನ್ನು ಮುಚ್ಚಿ ಹಾಕಬೇಕು ಎಂದು ಇದ್ದಿದ್ದರೇ ಇಷ್ಟು ದೊಡ್ಡದಾಗುತ್ತಿರಲಿಲ್ಲ. ಅದರೇ ಸಿಎಂ ಹಾಗಲ್ಲ, ಅವರು ಇಷ್ಟು ಫ್ರೀಹ್ಯಾಂಡ್ ಕೊಡದಿದ್ದರೆ ಸತ್ಯ ಹೊರಗೆ ಬರುತ್ತಿರಲಿಲ್ಲ. ಅದಕ್ಕೆ ನಾವೇಲ್ಲ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೌರವಿಸಬೇಕು’ ಎಂದರು.
ಕ್ಲಿಕ್ ಮಾಡಿ ಓದಿ: ಬೆಂಗಳೂರಿನ ಒಡಲು ಸೇರಲಿದೆ ವಾಣಿ ವಿಲಾಸ ಸಾಗರ | ಮುನ್ಸೂಚನೆ ನೀಡಿದ ಸಚಿವ ಸುಧಾಕರ್
‘ಬೇರೆ ಯಾರೇ ಆಗಿದ್ದರು ಈ ವೇಳೆ ಬಗ್ಗಿ ಬಿಡೋರು, ಕಷ್ಟ ಆಗುತ್ತಿತ್ತು. ಆದರೆ ಸಿದ್ದರಾಮಯ್ಯ ಬಗ್ಗೋದಿಲ್ಲ. ಖಂಡಿತ ಇಡೀ ಕುಟುಂಬಕ್ಕೆ ನ್ಯಾಯ ಸಿಗಲಿದೆ’ ಎಂದು ತಿಳಿಸಿದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
