CHITRADURGA NEWS | 02 MAY 2025
ಮೊಣಕಾಲು ನೋವಿನ ಸಮಸ್ಯೆ ವಯಸ್ಸಾದ ಮೇಲೆ ಎಲ್ಲರನ್ನೂ ಸಾಮಾನ್ಯವಾಗಿ ಕಾಡುವಂತಹ ಸಮಸ್ಯೆಯಾಗಿದೆ. ಇದರಿಂದ ನಡೆಯಲು, ಕುಳಿತುಕೊಳ್ಳಲು ಕಷ್ಟವಾಗುತ್ತದೆ. ಬಾಲಿವುಡ್‍ನ ಖ್ಯಾತ ನಟ ಪರೇಶ್ ರಾವಲ್ ಕೂಡ ಈ ಸಮಸ್ಯೆಯಿಂದ ಬಳಲುತ್ತಿದ್ದರು.
ಆದರೆ ಈ ಸಮಸ್ಯೆಯಿಂದ ಚೇತರಿಸಿಕೊಳ್ಳಲು ಅವರು ಯಾವ ಮದ್ದು ಸೇವಿಸಿದ್ದಾರೆ ಎಂಬುದನ್ನು ತಿಳಿದರೆ ನೀವೇ ಶಾಕ್ ಆಗ್ತೀರಾ. ಹೌದು. ಅವರು ಮೊಣಕಾಲಿನ ಸಮಸ್ಯೆಯಿಂದ ಚೇತರಿಸಿಕೊಳ್ಳಲು ತಮ್ಮ ಮೂತ್ರವನ್ನು ತಾವೇ ಹಿಡಿದು ಕುಡಿಯುತ್ತಿದ್ದಾರಂತೆ.

ಈ ವಿಚಾರವನ್ನು ಅವರು ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಹಾಗಾದ್ರೆ ಈ ರೀತಿ ಮೂತ್ರ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ? ಕೆಟ್ಟದೇ? ಎಂಬುದನ್ನು ತಿಳಿಯಿರಿ.
ಅವರು ನಾನಾವತಿ ಆಸ್ಪತ್ರೆಯಲ್ಲಿದ್ದಾಗ, ವೀರು ದೇವಗನ್ ಅವರನ್ನು ಭೇಟಿಯಾಗಲು ಬಂದಿದ್ದಾರಂತೆ. ಆಗ ಮೊಣಕಾಲಿನ ಸಮಸ್ಯೆ ಬಗ್ಗೆ ಹೇಳಿದಕ್ಕೆ ಅವರು ಬೆಳಿಗ್ಗೆ ಮೂತ್ರವನ್ನು ಕುಡಿಯಲು ಹೇಳಿದ್ದಾರಂತೆ. ಹಾಗೂ ಆಲ್ಕೋಹಾಲ್, ಮಟನ್ ಅಥವಾ ತಂಬಾಕಿನಿಂದ ದೂರವಿರಲು ಅವರಿಗೆ ಸಲಹೆ ನೀಡಿದ್ದಾರಂತೆ.
ವೀರು ದೇವಗನ್ ಅವರ ಸಲಹೆಯ ಮೇರೆಗೆ ಪರೇಶ್ ರಾವಲ್ ಮೂತ್ರ ಕುಡಿಯಲು ಶುರುಮಾಡಿದ್ದಾರಂತೆ. ಅವರು ಇದನ್ನು 15 ದಿನಗಳ ಕಾಲ ಮಾಡಿ ನಂತರ ಎಕ್ಸ್-ರೇ ವರದಿ ಬಂದಾಗ, ಅದನ್ನು ಕಂಡು ವೈದ್ಯರೇ ದಂಗಾಗಿದ್ದಾರಂತೆ. ಯಾಕೆಂದರೆ ಮೊಣಕಾಲಿನ ಸಮಸ್ಯೆ ವಾಸಿಯಾಗಿತ್ತಂತೆ.
ಮೂತ್ರ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ?
ತಜ್ಞರ ಪ್ರಕಾರ, ಮೂತ್ರವು ದೇಹದಿಂದ ತ್ಯಾಜ್ಯ ವಸ್ತುಗಳು ಮತ್ತು ಹೆಚ್ಚುವರಿ ನೀರನ್ನು ಹೊರಹಾಕಲು ಇರುವ ನೈಸರ್ಗಿಕ ಮಾರ್ಗವಾಗಿದೆ. ಇದು 95% ನೀರು ಮತ್ತು 5% ಇತರ ವಸ್ತುಗಳನ್ನು (ಯೂರಿಯಾ, ಕ್ರಿಯೇಟಿನೈನ್, ಎಲೆಕ್ಟ್ರೋಲೈಟ್‍ಗಳು ಮತ್ತು ಟಾಕ್ಸಿನ್‍ಗಳು) ಹೊಂದಿರುತ್ತದೆ. ಮೂತ್ರವನ್ನು ಹೊರಹಾಕುವ ಮೂಲಕ, ದೇಹವು ಹಾನಿಕಾರಕ ವಸ್ತುಗಳಿಂದ ಮುಕ್ತವಾಗುತ್ತದೆ.
ಆದರೆ ಯಾವುದೇ ವೈಜ್ಞಾನಿಕ ಅಧ್ಯಯನ ಅಥವಾ ವೈದ್ಯರು ಯಾವುದೇ ರೀತಿಯ ಕಾಯಿಲೆಗೆ ಮೂತ್ರವನ್ನು ಕುಡಿಯಲು ಶಿಫಾರಸು ಮಾಡುವುದಿಲ್ಲ. ನಿಮ್ಮ ಮೂತ್ರವನ್ನು ಕುಡಿಯುವುದರಿಂದ ಮೊಣಕಾಲು ಚೇತರಿಕೆಗೆ ಸಹಾಯ ಮಾಡುತ್ತದೆ ಎಂಬ ಕಲ್ಪನೆಯನ್ನು ಬೆಂಬಲಿಸುವ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಇದರಿಂದ ಅಂತಹ ವ್ಯಕ್ತಿ ಗಂಬೀರವಾದ ಅನಾರೋಗ್ಯಕ್ಕೆ ಒಳಗಾಗಬಹುದು ಎಂದು ತಜ್ಞರೊಬ್ಬರು ತಿಳಿಸಿದ್ದಾರೆ.
ಮೊಣಕಾಲು ಚೇತರಿಕೆಗೆ ಮೂತ್ರ ಕುಡಿಯುವುದು ಸರಿಯೇ?
ಮೊಣಕಾಲು ಗಾಯದಿಂದ ಚೇತರಿಸಿಕೊಳ್ಳಲು ಯಾವುದೇ ಮೂಳೆ ವೈದ್ಯರು ಮೂತ್ರವನ್ನು ಕುಡಿಯಲು ಶಿಫಾರಸು ಮಾಡುವುದಿಲ್ಲ. ಮೊಣಕಾಲು ಗಾಯವನ್ನು ನಿವಾರಿಸಲು, ವ್ಯಾಯಾಮಗಳು ಕ್ವಾಡ್ರಿಸೆಪ್ಸ್, ಸ್ನಾಯುಗಳು ಮತ್ತು ಸುತ್ತಮುತ್ತಲಿನ ಸ್ನಾಯುಗಳನ್ನು ಬಲಪಡಿಸುತ್ತವೆ ಎಂದು ಹೇಳಲಾಗುತ್ತದೆ. ಅದೇ ಸಮಯದಲ್ಲಿ, ಮೊಣಕಾಲು ಗಾಯದಲ್ಲಿ ನೋವು ಮತ್ತು ಊತವನ್ನು ಸ್ಟೀರಾಯ್ಡ್ ಅಲ್ಲದ ಉರಿಯೂತದ ಔಷಧಿಗಳೊಂದಿಗೆ (ಎನ್ಎಸ್ಎಐಡಿ) ಚಿಕಿತ್ಸೆ ನೀಡಲಾಗುತ್ತದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
