ಕ್ರೈಂ ಸುದ್ದಿ
National Highway: ಲಾರಿ-ಕಾರು ನಡುವೆ ಭೀಕರ ಅಪಘಾತ | ಇಬ್ಬರ ಸಾವು, ಓರ್ವ ಗಂಭೀರ

CHITRADURGA NEWS | 29 AUGUST 2024
ಚಿತ್ರದುರ್ಗ: ತಾಲೂಕಿನ ಚಿಕ್ಕಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ (National Highway)13 ರಲ್ಲಿ ಭೀಕರ ಅಪಘಾತ ನಡೆದಿದ್ದು, ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ.
ಚಿತ್ರದುರ್ಗ ತಾಲೂಕಿನ ಚಿಕ್ಕಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಲಾರಿ ನಡುವೆ ಅಪಘಾತ ನಡೆದಿದ್ದು, ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ದಿನ ಭವಿಷ್ಯ | ಆಗಸ್ಟ್ 29 | ಗುರುರಾಯರ ಕೃಪೆಯೊಂದಿಗೆ ಬಗೆಹರಿಯಲಿವೆ ಧೀರ್ಘಾವಧಿ ಸಮಸ್ಯೆ
ಮೃತರನ್ನು ದಾವಣಗೆರೆ ಜಿಲ್ಲೆ ಜಗಳೂರು ಮೂಲದ ಫಯಾಜ್(30) ಹಾಗೂ ಅಶ್ರಫ್(30) ಎಂದು ಗುರುತಿಸಲಾಗಿದೆ.
ಇನ್ನಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಡರಾತ್ರಿ 1 ಗಂಟೆ ವೇಳೆಗೆ ಚಿತ್ರದುರ್ಗ ಕಡೆಯಿಂದ ಜಗಳೂರಿಗೆ ಹೋಗುವಾಗ ಚಿಕ್ಕಗೊಂಡನಹಳ್ಳಿ ಬಳಿ ಲಾರಿಯನ್ನು ಓವರ್‍ಟೇಕ್ ಮಾಡಲು ಹೋದಾಗ ಲಾರಿಯ ಹಿಂಭಾಗಕ್ಕೆ ಕಾರು ಡಿಕ್ಕಿಯಾಗಿದೆ.
ಇದನ್ನೂ ಓದಿ: ಗೌರಸಮುದ್ರ ಮಾರಮ್ಮನ ಹುಂಡಿಯಲ್ಲಿ 10.66 ಲಕ್ಷ | ಎಲ್ಲಿ ಜಮೆ ಆಯ್ತು ಗೊತ್ತಾ
ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತಕ್ಕೆ ಕಾರಣವಾದ ಲಾರಿ ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ
ಸ್ಥಳಕ್ಕೆ ತುರುವನೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
