
CHITRADURGA NEWS | 23 AUGUST 2025
ಚಳ್ಳಕೆರೆ: ಬಹಳ ವರ್ಷಗಳ ನಂತರ ಸಿರಿಯಜ್ಜಿಯ ಸಾಹಿತ್ಯ ಸೇವೆಯನ್ನು ಗೌರವಿಸುವ ಸಲುವಾಗಿ ಅವರ ಹುಟ್ಟೂರಿನಲ್ಲಿ ದಾನಿಗಳು ಹಾಗೂ ಟ್ರಸ್ಟ್‌ವತಿಯಿಂದ ವಿಶೇಷ ಸ್ಮಾರಕ ನಿರ್ಮಿಸಿ ಆ.24ರ ಭಾನುವಾರ ಬೆಳಗ್ಗೆ 11ಕ್ಕೆ ಸಾವಿರಾರು ಅಭಿಮಾನಿಗಳ ಸಮಕ್ಷಮದಲ್ಲಿ ಸಿರಿಯಜ್ಜಿಯ ಸ್ಮಾರಕ ಲೋಕರ್ಪಣೆಯಾಗಲಿದೆ ಎಂದು ನಿವೃತ್ತ ಭಾರತೀಯ ಅರಣ್ಯ ಸೇವಾಧಿಕಾರಿ ಡಾ.ಬಿ.ಚಿಕ್ಕಪ್ಪಯ್ಯ ತಿಳಿಸಿದ್ಧಾರೆ.
ಇದನ್ನೂ ಓದಿ: 3 ತಿಂಗಳೊಳಗೆ ಹೊಳಲ್ಕೆರೆ ತಾಲೂಕಿನ ಕೆರೆಗಳಿಗೆ ಭದ್ರಾ ನೀರು | ಶಾಸಕ ಎಂ.ಚಂದ್ರಪ್ಪ
ಅವರು ಈ ಬಗ್ಗೆ ಮಾಹಿತಿ ನೀಡಿ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಚಳ್ಳಕೆರೆ ತಾಲ್ಲೂಕಿನ ಕೊಡುಗೆ ಅಪಾರ ಹಾಗೂ ಅಮೋಘ. ತಳುಕಿನ ತರಾಸು, ಬೆಳಗೆರೆ ಕೃಷ್ಣಶಾಸ್ತ್ರಿ, ಜಾನಕಮ್ಮ ಸೇರಿದಂತೆ ಹಲವಾರು ಧೀಮಂತರು ಸಾಹಿತ್ಯ ಹಾಗೂ ಜಾನಪದ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ಧಾರೆ.
ಇದರ ಬೆನ್ನಹಿಂದೆಯೇ ಯಲಗಟ್ಟೆಗೊಲ್ಲರಹಟ್ಟಿಯ ಜಾನಪದ ಸಿರಿ ಸಿರಿಯಜ್ಜಿ ತನ್ನ ಅಮೋಘ ಕಂಠದಿಂದ ಹತ್ತಾರು ಸಾವಿರ ಜಾನಪದ ಪದಗಳನ್ನು ಹಾಡುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತನ್ನ ಕೊಡುಗೆ ದಾಖಲಿಸಿ, ಹಲವಾರು ಬಿರುದು ಪಡೆದಿದ್ಧಾರೆ.
ಮೈಸೂರಿನ ಶ್ರೀಲಕ್ಷೀನರಸಿಂಹ ಚಾರಿಟಬಲ್ ಟ್ರಸ್ಟ್, ತುಮಕೂರಿನ ಬಿ.ವಿ.ರಾಜೇಶ್ವರಿ, ಡಾ.ಬಿ.ಚಿಕ್ಕಪ್ಪಯ್ಯ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಮಿತಿ ಸಹಯೋಗದೊಂದಿಗೆ ಈ ಭಾಗದ ನಾಡೋಜ ಸಿರಿಯಜ್ಜಿಯ ಬಂಧುಗಳು ಹಾಗೂ ಸಮುದಾಯದ ಹಿರಿಯ ಮುಖಂಡರೊಂದಿಗೆ ಚರ್ಚಿಸಿ ಸ್ಮಾರಕ ಭವನವನ್ನು ನಿರ್ಮಿಸಲಾಗಿದೆ.
ಇದನ್ನೂ ಓದಿ: ಗಣೇಶ ಹಬ್ಬ | ಶಾಂತಿ, ಸೌಹಾರ್ದತೆಯಿಂದ ಆಚರಿಸಿ | ಡಿಸಿ ವೆಂಕಟೇಶ್
ಜಾನಪದ ಸಿರಿ ಸಿರಿಯಜ್ಜಿ 2004ರಲ್ಲಿ ಹಂಪಿ ವಿಶ್ವವಿದ್ಯಾಲಯದ ಪ್ರತಿಷ್ಠಿತ ನಾಡೋಜ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುತ್ತಾರೆ. ಸ್ಮಾರಕದ ಉದ್ಘಾಟನಾಸಮಾರಂಭಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಲಿದ್ದು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಕನ್ನಡ ಸಾಹಿತ್ಯಾಭಿಮಾನಿಗಳು ಆಗಮಿಸಿ ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದ್ಧಾರೆ.
ಸಿರಿಯಜ್ಜಿ ವಿಶೇಷ :
ಅನಕ್ಷರಸ್ಥೆ ಸಿರಿಯಜ್ಜಿಯ ಜಾನಪದ, ಸೋಬಾನ, ದೇವರಪದಗಳನ್ನು ಕೇಳಿದ ಖ್ಯಾತ ಸಾಹಿತಿ ದಿವಂಗತ ಬೆಳಗೆರೆ ಕೃಷ್ಣಶಾಸ್ತ್ರಿ ಅನಕ್ಷರಸ್ತರಾದರೂ ಸಿರಿಯಜ್ಜಿ ತನ್ನ ಮಧುರಕಂಠದಿಂದ ಗ್ರಾಮೀಣ ಭಾಗದ ಶೈಲಿಯಲ್ಲೇ 16 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ಧಾರೆ. ಇವರನ್ನು ಸಮಾಜಕ್ಕೆ ಪರಿಚಯಿಸಿ ಅವರ ಜಾನಪದ ಕಲೆಯನ್ನು ಎಲ್ಲೆಡೆ ಪ್ರಸಾದ ಮಾಡುವಲ್ಲಿ ಶಾಸ್ತ್ರಿಯವರ ಪಾತ್ರ ಅಪಾರ.
ಇದನ್ನೂ ಓದಿ: ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಇ.ಡಿ.ವಶಕ್ಕೆ
ಅವರೂ ಸಹ ಸಿರಿಯಜ್ಜಿಯ ಸ್ಮಾರಕವಾಗಬೇಕೆಂಬ ಮಹದಾಸೆಯನ್ನು ಹೊಂದಿದ್ದು ಅದು ಈಡೇರುವ ಕಾಲ ಕೂಡಿಬಂದಿದೆ. ಜಾನಪದ ಕೋಗಿಲೆ, ಜಾನಪದ ಸಿರಿ ಎಂಬ ಬಿರುದು ಇವರದ್ದು. ಸಾಹಿತಿ ಕೃಷ್ಣಮೂರ್ತಿ ಆನೂರು ಸಿರಿಯಜ್ಜಿಯ ಹಾಡುಗಳನ್ನು ಸಂಗ್ರಹಿಸಿ ʼಸಾವಿರ ಸಿರಿ ಬೆಳಗುʼ ಕೃತಿ ಬಿಡುಗಡೆಗೊಳಿಸಿ ಸಿರಿಯಜ್ಜಿಯ ಕೊಡುಗೆಯನ್ನು ಎಲ್ಲರೂ ಸ್ಮರಿಸುವಂತೆ ಮಾಡಿದ್ಧಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
