
CHITRADURGA NEWS | 14 SEPTEMBER 2025
ಚಿತ್ರದುರ್ಗ: ವಿಶ್ವಹಿಂದೂ ಪರಿಷತ್, ಬಜರಂಗದಳ ಪ್ರತಿಷ್ಠಾಪನೆ ಮಾಡಿದ್ದ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಅದ್ದೂರಿ ತೆರೆ ಬಿದ್ದಿದೆ.
ಇದನ್ನೂ ಓದಿ: ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಅದ್ದೂರಿ ಚಾಲನೆ | ರಾಜ ಗಾಂಭೀರ್ಯದಿಂದ ಸಾಗುತ್ತಿರುವ ಗಣಪ
ಶನಿವಾರ ಇಡೀ ದಿನ ಬೋರ್ಗರೆವ ನದಿಯಂತೆ ಭಾಸವಾಗಿದ್ದ ಲಕ್ಷಾಂತರ ಜನಸ್ತೋಮದ ನಡುವೆ ರಾಜಗಾಂಭೀರ್ಯದಲ್ಲಿ ಸಾಹಿ ಬಂದ ಗಣಪನನ್ನು ರಾತ್ರಿ 11.50 ರ ಸುಮಾರಿಗೆ ಚಂದ್ರವಳ್ಳಿ ಬಳಿ ನಿರ್ಮಿಸಿರುವ ಬಾವಿಯಲ್ಲಿ ವಿಸರ್ಜನೆ ಮಾಡಲಾಯಿತು.
ಆರು ಡಿಜೆ ಮಾದರಿಯ ಸೌಂಡ್ ಸಿಸ್ಟಂ ಸದ್ದಿಗೆ ಲಕ್ಷಾಂತರ ಯುವಕರು ಕುಣಿದು ಕುಪ್ಪಳಿಸಿದರು. ಮಹಿಳೆಯರು, ಮಕ್ಕಳು ವೃದ್ಧರು ಕೂಡಾ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.

ಮಧ್ಯಾಹ್ನ 2.30ಕ್ಕೆ ಪ್ರಾರಂಭವಾದ ಶೋಭಾಯಾತ್ರೆ ಮುಗಿಯುವುದು ತಡರಾತ್ರಿ ಆಗಲಿದೆ ಎಂದು ಅಮದಾಜಿಸಲಾಗಿತ್ತು. ಆದರೆ, ಸಂಘಟಕರು, ಪೊಲೀಸರ ಜಾಣ್ಮೆಯಿಂದ ಮೆರವಣಿಗೆ ತುಸು ವೇಗವಾಗಿಯೇ ಸಾಗಿತು.
ಸಂಜೆ 7.30 ರ ಹೊತ್ತಿಗೆ ಡಿಜೆ ಸಿಸ್ಟಂ ಬಂದ್ ಮಾಡಿಸಲಾಯಿತು. ಈ ವೇಳೆ ಸಾಕಷ್ಟು ಜನ ಮನೆ ಕಡೆ ಹೆಜ್ಜೆ ಹಾಕಿದರು.
ಇದನ್ನೂ ಓದಿ: ಹಿಂದೂ ಮಹಾಗಣಪತಿ ಭಗವಾಧ್ವಜ ದಾಖಲೆ ಮೊತ್ತಕ್ಕೆ ಹರಾಜು| ಬಿಜೆಪಿ ಮುಖಂಡ ಹನುಮಂತೇಗೌಡ ಪಾಲು
ಕನಕ ವೃತ್ತ ತಲುಪಿದಾಗ ರಾತ್ರಿ 9 ಗಂಟೆಯಾಗಿತ್ತು. ಇಲ್ಲಿಂದ ಚಂದ್ರವಳ್ಳಿ ಬಳಿ 10.30 ರ ಹೊತ್ತಿಗೆ ಗಣಪತಿ ಆಗಮಿಸಿತು.
ವಿಸರ್ಜನೆಗೂ ಮುನ್ನಾ ಪೂಜೆ ಸಲ್ಲಿಸಿ, ಟ್ರ್ಯಾಕ್ಟರ್ ನಲ್ಲಿದ್ದ ಗಣಪತಿನ್ನು ಬಾವಿಗೆ ಇಳಿಸುವಾಗ ತುಸು ತಡವಾಯಿತು. ಅಂತಿಮವಾಗಿ ರಾತ್ರಿ 11.50 ರ ವೇಳೆಗೆ ಗಣಪನ ವಿಸರ್ಜನೆ ನಡೆಯಿತು.
ಹಿಂದೂ ಮಹಾಗಣಪತಿ ಸಂಘಟಕರು, ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು, ಸಾವಿರಾರು ಭಕ್ತರು ಸಾಕ್ಷಿಯಾದರು. ಒಟ್ಟಾರೆ 19ನೇ ವರ್ಷದ ಹಿಂದೂ ಮಹಾಗಣಪತಿ ಉತ್ಸವ ವಿಜೃಂಭಣೆಯಿಂದ ಜರುಗಿದ್ದು, ಅದ್ದೂರಿ ತೆರೆ ಕಂಡಿತು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
