
CHITRADURGA NEWS | 7 JUNE 2026
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ ಮುಂಗಾರು ಮಳೆ ಭರ್ಜರಿಯಾಗಿ ಕಾಲಿಟ್ಟಿದೆ.
ಜಿಲ್ಲೆಯಲ್ಲಿ ಬಹುತೇಕ ಕಡೆಗಳಲ್ಲಿ ವಾರಾಂತ್ಯ ಭಾನುವಾರ ಸಂಜೆ ಹದವಾದ ಮಳೆಯಾಗಿದೆ.
ಇದನ್ನೂ ಓದಿ:ಜಿಲ್ಲಾಸ್ಪತ್ರೆ | ಜೂನ್ 09ರಂದು ಉಚಿತ ಗ್ಯಾಸ್ಟ್ರೋ ಶಿಬಿರ
ರೋಹಿಣಿ ಮಳೆ ಇಂದಿಗೆ ಕೊನೆಯಾಗಲಿದ್ದು, ನಾಳೆಯಿಂದ ಮೃಗಶಿರಾ ಮಳೆ ಪದಾರ್ಪಣೆ ಮಾಡಲಿದೆ.
ರೋಹಿಣಿ ಮಳೆ ಕೊನೆಯಾಗುವ ದಿನ ಭರ್ಜರಿಯಾಗಿ ಸುರಿದಿದ್ದು, ಜಿಲ್ಲೆಯ ರೈತರು ಖುಷಿಯಾಗಿದ್ದಾರೆ.
ಇದನ್ನೂ ಓದಿ:ಸಾವಯುವ ಕೃಷಿ ಪದ್ದತಿಯಿಂದ ಮುಂದಿನ ಪೀಳಿಗೆ ದಾರಿದೀಪ | ಸಹಾಯಕ ಕೃಷಿ ನಿರ್ದೇಶಕ ರಜನೀಕಾಂತ
ಕಳೆದೊಂದು ತಿಂಗಳಿಂದ ಆಗಾಗ ಮಳೆ ಬರುತ್ತಿದ್ದರೂ, ಇಂದು ಸುರಿದ ಮಳೆ ತುಸು ಹೆಚ್ಚು ಅನ್ನಿಸುವಷ್ಟೇ ಸುರಿದಿದೆ.
ಅಡಿಕೆ ತೋಟಗಳ ರೈತರು ಇನ್ನೂ ಹದಿನೈದು – ಇಪ್ಪತ್ತು ದಿನಗಳ ಕಾಲ ಚಿಂತೆ ಇಲ್ಲ. ಇನ್ನೇನಿದ್ದರೂ ಕೆರೆ ಕಟ್ಟೆ ತುಂಬುವಂತೆ ಮಳೆ ಬರಬೇಕು ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ:ರುಡ್‍ಸೆಟ್ | ಉಚಿತ ಸಮಗ್ರ ಕೃಷಿ ತರಬೇತಿ
ಈಗಾಗಲೇ ಬಿತ್ತನೆ ಕಾರ್ಯವೂ ಚುರುಕಾಗಿದ್ದು, ಮಳೆ ಬಂದಿದ್ದರಿಂದ ಹೊಲಗಳನ್ನು ಹದ ಮಾಡಿಕೊಳ್ಳಲು ಮತ್ತಷ್ಟು ಅನುಕೂಲ ಮಾಡಿಕೊಟ್ಟಿದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
