
CHITRADURGA NEWS | 23 APRIL 2026
ದೇಹವನ್ನು ಆರೋಗ್ಯಕರವಾಗಿ ಮತ್ತು ಸದೃಢವಾಗಿಡಲು ಹಲವಾರು ಜೀವಸತ್ವಗಳು ಮತ್ತು ಖನಿಜಗಳು ಬೇಕಾಗುತ್ತವೆ. ಇವುಗಳನ್ನು ನಾವು ನಮ್ಮ ಆಹಾರದ ಮೂಲಕ ಪೂರೈಸುತ್ತೇವೆ. ಆದರೆ ಜೀವಸತ್ವಗಳ ಕೊರತೆಯಾದರೆ ದೇಹವು ತನ್ನ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಿಲ್ಲ. ಹಾಗೇ ಇವುಗಳ ಮಟ್ಟ ಹೆಚ್ಚಾದರೂ ಕೂಡ ದೇಹಕ್ಕೆ ಅಪಾಯ ತಪ್ಪಿದಲ್ಲ. ಅದರಲ್ಲೂ ಈ ಐದು ಅಗತ್ಯ ಜೀವಸತ್ವಗಳು ದೇಹಕ್ಕೆ ಅಗತ್ಯವಾಗಿ ಬೇಕಾಗುತ್ತದೆ. ಆದರೆ ಇವುಗಳ ಮಟ್ಟ ಹೆಚ್ಚಾದರೆ ದೇಹಕ್ಕೆ ಏನೆಲ್ಲಾ ಹಾನಿಯಾಗುತ್ತದೆ ಮತ್ತು ಆ ಜೀವಸತ್ವಗಳು ಯಾವುದೆಂಬುದನ್ನು ತಿಳಿದುಕೊಳ್ಳೋಣ.
ಕಬ್ಬಿಣ:

ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಅತ್ಯಗತ್ಯ. ಇದು ಅನೇಕ ಕಿಣ್ವಗಳ ಪ್ರಮುಖ ಅಂಶವಾಗಿದೆ ಮತ್ತು ಆ್ಯಂಟಿ ಆಕ್ಸಿಡೆಂಟ್‍ಗಳಾಗಿ ಕಾರ್ಯನಿರ್ವಹಿಸುತ್ತದೆ. ಇದು ಟ್ಯೂನ್ ಫಿಶ್, ಸೊಪ್ಪುಗಳು, ಮಸೂರ, ಬೀನ್ಸ್ ಮತ್ತು ಗೋಡಂಬಿಯಲ್ಲಿ ಹೇರಳವಾಗಿ ಕಂಡುಬರುತ್ತದೆ. ಆದರೆ ಇದರ ಮಿತಿಮೀರಿದ ಸೇವನೆಯು ಮಲಬದ್ಧತೆಗೆ ಕಾರಣವಾಗಬಹುದು ಮತ್ತು ಬಹು ಅಂಗಾಂಗ ಹಾನಿಯ ಅಪಾಯವನ್ನು ಹೆಚ್ಚಿಸುತ್ತದೆ.
ಸತು:
ಇದು ದೇಹದ ರೋಗನಿರೋಧಕ ವ್ಯವಸ್ಥೆಗೆ ಅಗತ್ಯವಾಗಿದೆ ಮತ್ತು ಅನೇಕ ಕಿಣ್ವಗಳ ಪ್ರಮುಖ ಅಂಶವಾಗಿದೆ. ಹಾಲು, ಬೇಯಿಸಿದ ಬೀನ್ಸ್ ಮತ್ತು ಕಡಲೆಗಳು ಪ್ರಮುಖ ಮೂಲಗಳಾಗಿವೆ. ಅತಿಯಾದ ಸತುವಿನ ಮಟ್ಟಗಳು ತಾಮ್ರದ ಕೊರತೆಗೆ ಕಾರಣವಾಗಬಹುದು.
ವಿಟಮಿನ್ ಎ:
ಈ ವಿಟಮಿನ್ ಆರೋಗ್ಯಕರ ಚರ್ಮ, ಕಣ್ಣುಗಳು ಮತ್ತು ಲೋಳೆಯ ಪೊರೆಗಳಿಗೆ ಅತ್ಯಗತ್ಯ. ಕ್ಯಾರೆಟ್, ಕುಂಬಳಕಾಯಿ, ಪಾಲಕ್, ಸಿಹಿ ಗೆಣಸು ಉತ್ತಮ ಮೂಲಗಳಾಗಿವೆ. ಅತಿಯಾದ ಪ್ರಮಾಣವು ನಿಮ್ಮ ಚರ್ಮ ಮತ್ತು ಮೂಳೆಗಳಿಗೆ ಹಾನಿಕಾರಕವಾಗಿದೆ.
ವಿಟಮಿನ್ ಸಿ:
ಸಂಯೋಜಕ ಅಂಗಾಂಶಗಳು, ಮೂಳೆಗಳು, ಸ್ನಾಯುರಜ್ಜುಗಳು ಮತ್ತು ಅಸ್ಥಿರಜ್ಜುಗಳಿಗೆ ವಿಟಮಿನ್ ಸಿ ಅಗತ್ಯವಾಗಿದೆ . ಇದು ಆ್ಯಂಟಿ ಆಕ್ಸಿಡೆಂಟ್‍ಗಳಾಗಿಯೂ ಕಾರ್ಯನಿರ್ವಹಿಸುತ್ತದೆ. ಕಿತ್ತಳೆ, ದ್ರಾಕ್ಷಿಹಣ್ಣು ಮತ್ತು ಸ್ಟ್ರಾಬೆರಿಗಳಂತಹ ಹಣ್ಣುಗಳು ಮತ್ತು ಬ್ರೊಕೊಲಿ ಮತ್ತು ಟೊಮೆಟೊಗಳಂತಹ ತರಕಾರಿಗಳು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿವೆ. ಅತಿಯಾದ ವಿಟಮಿನ್ ಸಿ ಸೇವನೆಯು ಕ್ಯಾಲ್ಸಿಯಂ ಆಕ್ಸಲೇಟ್ ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ.
ಕ್ಯಾಲ್ಸಿಯಂ:
ಸಾಮಾನ್ಯ ಹೃದಯ ಬಡಿತ ಮತ್ತು ಸಾಮಾನ್ಯ ನರ ಮತ್ತು ಸ್ನಾಯುಗಳ ಕಾರ್ಯವನ್ನು ಕಾಪಾಡಿಕೊಳ್ಳಲು ಕ್ಯಾಲ್ಸಿಯಂ ಅತ್ಯಗತ್ಯ. ಹಾಗೇ ಇದು ಮೂಳೆಗಳ ಬೆಳವಣಿಗೆಗೂ ಅತ್ಯಗತ್ಯ. ಹಾಲು, ಚೀಸ್ ಮತ್ತು ಮೊಸರಿನಂತಹ ಡೈರಿ ಉತ್ಪನ್ನಗಳು ಮತ್ತು ಬ್ರೊಕೊಲಿಯಂತಹ ತರಕಾರಿಗಳು ಉತ್ತಮ ಮೂಲಗಳಾಗಿವೆ. ಅತಿಯಾದ ಕ್ಯಾಲ್ಸಿಯಂ ಮೂತ್ರಪಿಂಡದ ಕಾರ್ಯವನ್ನು ದುರ್ಬಲಗೊಳಿಸುತ್ತದೆ ಮತ್ತು ಅನೇಕ ಖನಿಜಗಳನ್ನು ಹೀರಿಕೊಳ್ಳುವಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
