CHITRADURGA NEWS | 01 MARCH 2026
ಚಿತ್ರದುರ್ಗ: ಒಳಮೀಸಲಾತಿ ಜಾರಿ ಹಾಗೂ 56432 ಹುದ್ದೆ ನೇಮಕಾತಿ ವಿಚಾರದಲ್ಲಿ ಸರ್ಕಾರದ ತೀರ್ಮಾನ ಗೊಂದಲದಿಂದ ಕೂಡಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಪರಿಶಿಷ್ಟ ಸಮುದಾಯಕ್ಕೆ ಸ್ಪಷ್ಟತೆ ನೀಡಬೇಕು ಎಂದು ಬಸವಮೂರ್ತಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಒತ್ತಾಯಿಸಿದರು.
ಇದನ್ನೂ ಓದಿ: ವಿಶ್ವದ ಶಾಂತಿ, ನೆಮ್ಮದಿಗೆ ರೇಣುಕಾಚಾರ್ಯರ ಸೂತ್ರಗಳು ದಾರಿದೀಪ | ಉಪವಿಭಾಗಾಧಿಕಾರಿ ಕಾಂತರಾಜ್
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸರ್ಕಾರ ಖಾಲಿ ಹುದ್ದೆಗಳ ಭರ್ತಿಗೆ ತೀರ್ಮಾನ ತೆಗೆದುಕೊಂಡಿರುವುದು ಸ್ವಾಗತಾರ್ಹ. ಆದರೆ, ಈ ವಿಚಾರದಲ್ಲಿ ಉಂಟಾಗಿರುವ ಗೊಂದಲ ಬಗೆಹರಿಸಬೇಕು ಎಂದರು.
ಒಳಮೀಸಲಾತಿ ಜಾರಿ ಮಾಡಿ ಹುದ್ದೆ ಭರ್ತಿ ಮಾಡುವ ಸರ್ಕಾರದ ತೀರ್ಮಾನ ಸರಿಯಾಗಿದೆ. ನಿರುದ್ಯೋಗಿ ಯುವಕರ ಉದ್ಯೋಗದ ದೃಷ್ಟಿಯಿಂದ ಬಹಳ ಮುಖ್ಯ.ಆದರೆ, ರಾಜ್ಯ ಸರ್ಕಾರದ ತೀರ್ಮಾನ ಮಾದಿಗ ಸಮುದಾಯಕ್ಕೆ ಅಸ್ಪಷ್ಟವಾಗಿದೆ. ಒಳಮೀಸಲಾತಿ ಅನ್ವಯವೇ ಹುದ್ದೆ ಭರ್ತಿಯಾಗಬೇಕು ಎಂದು ಹೇಳಿದರು.
ಈಗ ಹೊಸದಾಗಿ ನೇಮಕಾತಿ ಮಾಡಿಕೊಳ್ಳುವ ಹುದೆಎಗಳಿಗೆ ಈ ಹಿಂದಿನಂತೆ ಶೇ.15 ರಷ್ಟು ಮೀಸಲಾತಿಯಂತೆ ನೇಮಕ ಮಾಡಿಕೊಳ್ಳಲಾಗುತ್ತದೆಯೋ ಅಥವಾ ಇಲ್ಲಿ ಒಳಮೀಸಲಾತಿ ಜಾರಿಯಾಗುತ್ತದೆಯೇ ಎನ್ನುವ ಬಗ್ಗೆ ಸ್ಪಷ್ಟತೆ ಬೇಕು ಎಂದು ಶ್ರೀಗಳು ಕೋರಿದರು.
ಇದನ್ನೂ ಓದಿ: ಇರಾನ್ – ಇಸ್ರೇಲ್ ಯುದ್ಧ | ಸಿಲುಕಿರುವ ಚಿತ್ರದುರ್ಗ ಜಿಲ್ಲೆಯವರ ನೆರವಿಗೆ ಸಹಾಯವಾಣಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಿಟ್ಟಿನಲ್ಲಿ ಕಾಳಜಿ ವಹಿಸಬೇಕು. ಪಕ್ಕದ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಅಲ್ಲಿನ ಸರ್ಕಾರಗಳ ಬದ್ಧತೆ ಕಾರಣಕ್ಕೆ ಪರಿಶಿಷ್ಟ ಸಮುದಾಯದ ಎಲ್ಲ ವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಳಮೀಸಲಾತಿ ಜಾರಿ ಮಾಡಲಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಎಸ್ಸಿ, ಎಸ್ಟಿ ಸಚಿವರ ಸಭೆ ಕರೆದು ಯಾರಿಗೂ ಗೊಂದಲ ಆಗದಂತೆ ಮನವರಿಕೆ ಮಾಡಿಕೊಡಬೇಕು.
ಈಗ ಭರ್ತಿ ಮಾಡುವ ಹುದ್ದೆಗಳಲ್ಲಿ ಯಾರಿಗೂ ತೊಂದರೆ ಆಗದಂತೆ ನೋಡಿಕೊಳ್ಳುವ ಸ್ಪಷ್ಟತೆ ಬೇಕು. ಮತ್ತೊಮ್ಮೆ ಒಳಮೀಸಲಾತಿ ಹೋರಾಟಗಾರರು ಬೀದಿಗಿಳಿಯುವ ತಯಾರಿ ನಡೆಸಿದ್ದಾರೆ. ಇದಕ್ಕೆಸಿಎಂ ಇತಿಶ್ರೀ ಹಾಡಬೇಕು ಎಂದರು.
ಆದಿಜಾಂಬವ ಮಠದ ಶ್ರೀ ಷಡಾಕ್ಷರಮುನಿ ಸ್ವಾಮೀಜಿ ಮಾತನಾಡಿ, ಸರ್ಕಾರ ಖಾಲಿ ಹುದ್ದೆಗಳ ಭರ್ತಿಗೆ ನಿರ್ಧಾರ ಮಾಡಿದೆ. ಈ ದಿಢೀರ್ ನಡೆ ನಮಗೆ ಅನ್ಯಾಯ ಮಾಡಿದಂತೆ ಆಗುತ್ತದೆ. ಪರಿಶಿಷ್ಟರ ಮೀಸಲಾತಿ ಕಡಿತ ಮಾಡದೆ ಒಳಮೀಸಲಾತಿ ಅನುಸರಿಸಿ ಭರ್ತಿ ಮಾಡಬೇಕು ಎಂದರು.
ಇದನ್ನೂ ಓದಿ: ಇಂದಿನ ವೇಗದ ಬದುಕಿನಲ್ಲಿ ವ್ಯಾಯಾಮ, ಓಟ, ನಡಿಗೆ ಮತ್ತು ಯೋಗ ಚಟುವಟಿಕೆಗಳು ಅತ್ಯಗತ್ಯ
ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿಯ ಅಗತ್ಯವಿದೆ. ಇದಕ್ಕಾಗಿ ಸಮುದಾಯ ಮೂರು ದಶಕಗಳಿಂದ ಹೋರಾಟ ನಡೆಸಿದೆ. ಈಗ ಸರ್ಕಾರ ತಾಯಿ ಸ್ಥಾನದಲ್ಲಿ ನಿಂತು ಆಲೋಚನೆ ಮಾಡಿ ನ್ಯಾಯ ಒದಗಿಸಬೇಕು. ಈ ಹಿನ್ನೆಲೆಯಲ್ಲಿ ಒಳಮೀಸಲಾತಿ ಜಾರಿ ಮಾಡಿ ಹುದ್ದೆ ಭರ್ತಿ ಮಾಡಲು ಅಡಿಯಿಟ್ಟರೆ ಸ್ವಾಗತಾರ್ಹ ಎಂದು ಹೇಳಿದರು.
ಖಾಲಿ ಹುದ್ದೆಗಳ ಭರ್ತಿ ಸ್ವಾಗತಾರ್ಹ. ಆದರೆ, ನಮ್ಮ ಬೇಡಿಕೆ ಕಡೆಗಣಿಸಬಾರದು. ಒಂದು ವೇಳೆ ಅನ್ಯಾಯವಾದರೆ ಹೋರಾಟಕ್ಕೆ ಮಠಾಧೀಶರು ಬೆಂಬಲ ಕೊಡುತ್ತೇವೆ. ಪಾದಯಾತ್ರೆ ಮಾಡಲು ಸಿದ್ಧ ಎಂದ ಅವರು, ಊಟ ಕೊಡುತ್ತೇವೆ ಎಂದು ಕರೆದು ತಟ್ಟೆಯನ್ನೇ ಕೊಡದಂತೆ ಕಳಿಸಿದರೆ ಹೇಗೆ ಎಂದು ಪ್ರಶ್ನಿಸಿದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
