
CHITRADURGA NEWS | 27 FEBRUARY 2026
ಚಿತ್ರದುರ್ಗ: ತಾಲ್ಲೂಕಿನ ಹಿರೇಗುಂಟನೂರು ಹೋಬಳಿಯ ಭೀಮಸಮುದ್ರ ಬಸವಾಪುರದ ಶ್ರೀ ಮಾವಿನಹಳ್ಳಿ ಬಸವೇಶ್ವರ ಸ್ವಾಮಿಯ ರಥೋತ್ಸವವು ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಇದನ್ನೂ ಓದಿ: ಭೀಕರ ಅಪಘಾತ | ಮೂರು ಮಂದಿ ಸ್ಥಳದಲ್ಲೇ ಸಾವು | ನಜ್ಜುಗುಜ್ಜಾದ ಕಾರು

ಬೆಳಿಗ್ಗೆ ರುದ್ರಾಭೀಷೇಕ, ಸಹಸ್ರ ಬಿಲ್ವಾರ್ಚನೆ ಕಾರ್ಯಕ್ರಮ ನಡೆದಿದ್ದು, ಸಂಜೆ 4 ಗಂಟೆಗೆ ಹೂವಿನ ಪಲ್ಲಕ್ಕಿ ಉತ್ಸವದ ನಂತರ ರಥೋತ್ಸವ ನಡೆಸಲಾಯಿತು.
ರಥೋತ್ಸವದ ಅಂಗವಾಗಿ ರಾಜ್ಯದ ವಿವಿಧೆಗಳಿಂದ ಆಗಮಿಸಿದ್ದ ಭಕ್ತ ಸಮೂಹ ಸಕ್ರಿಯ ಭಾಗವಹಿಸಿ ರಥವನ್ನು ಭಕ್ತಿಯಿಂದ ಎಳೆಯುವುದರ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾದರು.
ರಥೋತ್ಸವದ ಅಂಗವಾಗಿ ಕಂಕಣಧಾರಣೆ, ಆಶ್ವೋತ್ಸವ, ವೃಷಭೋತ್ಸವ ಕೆಂಡಾರ್ಚನೆ ನಡೆಸಲಾಯಿತು.
ಜಾತ್ರೆಯ ಅಂಗವಾಗಿ ದೇವಾಲಯದ ಆವರಣದ ಸುತ್ತಾ-ಮುತ್ತಲ್ಲಿನ ಪ್ರದೇಶದಲ್ಲಿ ವಿವಿಧ ರೀತಿಯ ಆಟ ಸಾಮಾನು ಬೆಂಡು ಬೆತ್ತಾಸಿನ ಅಂಗಡಿಗಳನ್ನು ನಿರ್ಮಾಣ ಮಾಡಲಾಗಿತು.
ಹೂಸದಾಗಿ ಮದುವೆಯಾದ ಜೋಡಿಗಳು ರಥದ ಕಲಶವನ್ನು ನೋಡಬೇಕು ಎನ್ನುವ ಪ್ರತೀತಿ ಇರುವುದರಿಂದ ಹಲವಾರು ಜೋಡಿಗಳೊಂದಿಗೆ ಮಕ್ಕಳು, ವಯೋವೃದ್ದರು, ಮಧ್ಯವಯಸ್ಕನವರು, ಮಹಿಳೆಯರು, ಪುರುಷರು ರಥೋತ್ಸವದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಅಡಿಕೆ ಧಾರಣೆ | 26 ಫೆಬ್ರವರಿ | 57 ಸಾವಿರ ದಾಟಿದ ರಾಶಿ ಅಡಿಕೆ ಬೆಲೆ
ಸಂಜೆಯಾಗುತ್ತಿದ್ದಯೇ ಹೂವಿನ ಪಲ್ಲಕ್ಕಿಯಲ್ಲಿ ಕುಳ್ಳರಿಸಿ ದೇವಾಲಯದ ಆವರಣದಲ್ಲಿ ಮೂರು ಸುತ್ತು ಹಾಕುವುದರ ಮೂಲಕ, ನಂತರ ರಥದಲ್ಲಿ ಕುಳ್ಳರಿಸಿದಾಗ ಆಗಮಿಸಿದ್ದ ಭಕ್ತಾಧಿಗಳು ರಥವನ್ನು ಎಳೆಯುವುದರ ಮೂಲಕ ರಥೋತ್ಸವವನ್ನು ಶ್ರದ್ದಾ ಭಕ್ತಿಯಿಂದ ನೇರವೇರಿಸಿದರು.
ಸ್ವಾಮಿಯ ರಥೋತ್ಸವದ ಅಂಗವಾಗಿ ಫೆ.27 ರ ಸಂಜೆ 5ಕ್ಕೆ ಕಂಕಣ ವಿಸರ್ಜನೆ ಹಾಗೂ ಮಹಾ ಮಹಾಮಂಗಳಾರತಿಯೊಂದಿಗೆ ಸ್ವಾಮಿಯ ಸೇವಾ ಕಾರ್ಯಕ್ರಮ ಮುಕ್ತಾಯವಾಗಲಿದೆ.
ಈ ಭಾರಿಯ ಭಾವುತಾ, ಎಕ್ಕೆಹಾರ, ಗುಲಾಬಿ ಹಾರ, ಪತ್ರೆ ಹಾರ, ಸೇಬಿನ ಹಾರ ಹರಾಜಾಯಿತು. ಸ್ವಾಮಿಯ ಹತ್ತು ಹಾರಗಳನ್ನು ಹರಾಜು ಮಾಡಲಾಯಿತು.
ಚಿತ್ರದುರ್ಗ ಬೃಹನ್ಮಠದ ಶ್ರೀ ಬಸವಪ್ರಭು ಶ್ರೀಗಳು, ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್, ಬಿಜೆಪಿ ಮುಖಂಡರಾದ ಅನಿತ್ ಕುಮಾರ್ ಸೇರಿದಂತೆ ಶ್ರೀ ಮಾವಿನಹಳ್ಳಿ ಬಸವೇಶ್ವರ ಸ್ವಾಮಿಯ ಟ್ರಸ್ಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಎರಡು ದಿನ ಚಿತ್ರದುರ್ಗಕ್ಕೆ ನೀರು ಸ್ಥಗಿತ | ಸೂಳೆಕೆರೆ ಮುಖ್ಯ ಕಾಲುವೆ ಕಾಮಗಾರಿ ಹಿನ್ನೆಲೆ
ರಥೋತ್ಸವಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ನೆರಳಿನ ವ್ಯವಸ್ಥೆಯನ್ನು ಮಾಡಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲಿಸ್ ಬಿಗಿ ಭದ್ರತೆಯನ್ನು ಮಾಡಲಾಗಿತ್ತು. ಚಿತ್ರದುರ್ಗ ಜಿಲ್ಲೆ ಅಲ್ಲದೆ ರಾಜ್ಯದ ವಿವಿದೆ ಜಿಲ್ಲೆ ಹಾಗೂ ನೆರೆ ರಾಜ್ಯದಿಂದಲೂ ಸಹಾ ಭಕ್ತಾಧಿಗಳು ಆಗಮಿಸುವುದರ ಮೂಲಕ ರಥೋತ್ಸವದಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
