
CHITRADURGA NEWS | 16 FEBRUARY 2026
ಚಿತ್ರದುರ್ಗ: ಆರು ವರ್ಷಗಳ ನಂತರ ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ಫೆ.17, 18 ರಂದು ಜರುಗುವ 18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ಅಂತಿಮ ಹಂತದಲ್ಲಿವೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಫೆಬ್ರವರಿ 16 | ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್ ಎಷ್ಟಿದೆ?

ಸಮ್ಮೇಳನವು ನಗರದ ಸ್ಟೇಡಿಯಂ ರಸ್ತೆಯ ಜಿ.ಜಿ. ಸಮುದಾಯ ಭವನದಲ್ಲಿ ಜರುಗಲಿದೆ. ನಗರದ ಪ್ರಮುಖ ಬೀದಿಗಳು ಹಳದಿ, ಕೆಂಪು ಬಾವುಟಗಳು, ಬಂಟಿಗ್ಸ್ ಗಳಿಂದ ಕಂಗೊಳಿಸುತ್ತಿವೆ.
15 ಕ್ಕೂ ಹೆಚ್ಚು ಮಾರಾಟ ಮಳಿಗೆಗಳು
ಸಮುದಾಯ ಭವನದ ಒಳಭಾಗದಲ್ಲಿ 15 ಪುಸ್ತಕದ ಮಾರಾಟ ಅಂಗಡಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸಪ್ನ ಬುಕ್ ಸ್ಟಾಲ್ ಸೇರಿದಂತೆ ಹಲವಾರು ಪುಸ್ತಕದ ಮಳಿಗೆಗಳು ಈಗಾಗಲೇ ನೊಂದಾಯಿಸಿವೆ.
ಸಮುದಾಯ ಭವನದ ಹೊರಭಾಗದಲ್ಲಿ ಕೃಷಿ, ಖಾತಿ ಸೇರಿದಂತೆ ನಾನಾ ವಾಣಿಜ್ಯ ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಸದಸ್ಯತ್ವ ನೊಂದಣಿಗೆ ಪ್ರತ್ಯೇಕ ಕೌಂಟರ್ ತೆರೆಯಲಾಗುವುದು.
ಇದನ್ನೂ ಓದಿ: ನೀಲಕಂಠೇಶ್ವರ ದೇವರ ದರ್ಶನಕ್ಕೆ ಭಕ್ತರ ಸಾಲು | ಶಿವರಾತ್ರಿಯಲ್ಲಿ ಮಿಂದೆದ್ದ ಕೋಟೆನಾಡು
ನೊಂದಾಯಿಸಿದವರಿಗೆ ಕಿಟ್ ನೀಡಲಾಗುತ್ತಿದೆ. ಇದರಲ್ಲಿ ಟ್ರಾವೆಲ್ ಬ್ಯಾಗ್, ಕನ್ನಡ ಶಾಲು, ಕಿರು ಪುಸ್ತಕ, ವಿಶೇಷ ನಮೂನೆಯ ಬ್ಯಾಡ್ಜ್, ಮೊಬೈಲ್ ಮತ್ತು ಕಂಪ್ಯೂಟರ್‌ಗೆ ಬಳಕೆಯಾಗುವ ಸಾಫ್ಟ್ ಹೆಡ್ ಹೊಂದಿರುವ ಲೋಹದ ಪೆನ್ನು ಕಿಟ್ ನಲ್ಲಿದೆ.
ಮೆರವಣಿಗೆ:
ಸಮ್ಮೇಳನಾಧ್ಯಕ್ಷರಾದ ಡಾ.ಕೆ.ಆರ್.ಸಂಧ್ಯಾರೆಡ್ಡಿಯವರ ಮತ್ತು ಕಲಾತಂಡಗಳ ಮೆರವಣಿಗೆಯಲ್ಲಿ ಹತ್ತಕ್ಕೂ ಹೆಚ್ಚು ಕಲಾತಂಡಗಳು ಪಾಲ್ಗೊಳ್ಳಲಿವೆ. ಕನ್ನಡಾಂಬೆ, ಭಾರತಾಂಬೆ, ಗೋಮಾತೆ, ಡೊಳ್ಳು, ವೀರಗಾಸೆ, ಕಹಳೆ,ಟ್ರಾಷ್, ಬೃಹತ್ ಬೊಂಬೆ ಸೇರಿದಂತೆ ನಾನಾ ಕಲಾತಂಡಗಳು ಭಾಗವಹಿಸಲಿವೆ.
ಬೆಳಗ್ಗೆ 9ಕ್ಕೆ ಎಸ್ಪಿ ರಂಜಿತ್ ಕುಮಾರ್ ಭಂಡಾರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸಮ್ಮೇಳನಾಧ್ಯಕ್ಷರಿಗೆ ಗೌರವ ಸಮರ್ಪಿಸಲಿದ್ದಾರೆ.
ಇದನ್ನೂ ಓದಿ: ಕಂಕಣ ಸೂರ್ಯಗ್ರಹಣ ನಾಳೆ
ಮೆರವಣಿಗೆ ನೀಲಕಂಠೇಶ್ವರ ದೇವಾಲಯದಿಂದ ಆರಂಭಗೊಂಡು ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಮದಕರಿ ವೃತ್ತದ ಮೂಲಕ ಹಾದು ಜೋಗಿಮಟ್ಟಿ ರಸ್ತೆಯಲ್ಲಿ ಹಾದು ಜಿ.ಜಿ.ಸಮುದಾಯ ಭವನ ತಲುಪಲಿದೆ.
ಗೋಷ್ಟಿಗಳು:
ಸಮ್ಮೇಳನದಲ್ಲಿ ಒಟ್ಟು ಐದು ಗೋಷ್ಟಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಜೀವಾಳ ಭದ್ರೆಯ ಭವಿಷ್ಯ ಮತ್ತು ಕೃಷಿ, ಕೋಟೆನಾಡಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ, ಮಠಮಾನ್ಯಗಳ ಸಾಂಸ್ಕೃತಿಕ ಅನನ್ಯತೆ, ಪುಸ್ತಕೋದ್ಯಮ ಮತ್ತು ಕನ್ನಡ ಭಾಷಾಭಿವೃದ್ಧಿ ಹಾಗೂ ಕವಿಗೋಷ್ಟಿಗಳು ಸಮ್ಮೇಳನದಲ್ಲಿವೆ.
ಸಮ್ಮೇಳನವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸ್ಮರಣ ಸಂಚಿಕೆಯ ಮುಖಪುಟ ಬಿಡುಗಡೆಗೊಳಿಸಲಿದ್ದಾರೆ. ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಇದನ್ನೂ ಓದಿ: ಸಂತ ಸೇವಾಲಾಲ್ ಮಹಾರಾಜರು ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ | AC ಕಾಂತರಾಜ್
ಎರಡನೆ ದಿನದ ಕಾರ್ಯಕ್ರಮದಲ್ಲಿ ಸಾಮಾಜಿಕ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಸಮಾರೋಪ ಭಾಷಣ ಮಾಡಲಿದ್ದಾರೆ. ಎರಡು ದಿನಗಳ ಕಾಲ ತಿಂಡಿ ಮತ್ತು ಊಟದ ವ್ಯವಸ್ಥೆ ಒದಗಿಸಲಾಗಿದೆ. ಮೆರವಣಿಗೆ ಸೇರಿದಂತೆ ನಾನಾ ಸಮಿತಿಗಳು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸಮ್ಮೇಳನದಲ್ಲಿ ಆಸಕ್ತ ನೌಕರರು ಭಾಗವಹಿಸುವಂತೆ ಎರಡು ದಿನಗಳ ಒಒಡಿ ಸೌಲಭ್ಯ ಒದಗಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
