
CHITRADURGA NEWS | 16 FEBRUARY 2026
ಆಕಾಶದಲ್ಲಿ ಅಪರೂಪವಾಗಿ ಕಾಣಿಸುವ ಖಗೋಳ ಘಟನೆಗಳಲ್ಲಿ ಒಂದಾದ ಕಂಕಣ ಸೂರ್ಯಗ್ರಹಣ ಇದೇ ಫಬ್ರವರಿ 17 ರ ಮಂಗಳವಾರ ಮಧ್ಯಾಹ್ನ 3.26 ರಿಂದ ಸಂಜೆ 7.57 ರವರೆಗೆ ಜರುಗಲಿರುವ ಈ ಅಪರೂಪದ ಖಗೋಳ ಘಟನೆಯ ದೃಶ್ಯ ಕೆಲವೇ ದೇಶಗಳಲ್ಲಿ ಮಾತ್ರ ಗೋಚರಿಸಲಿದೆ. ಅನೇಕರು ತುಂಬಾ ಆಸಕ್ತಿಯಿಂದ ಕಾಯುತ್ತಿರುವ ವಿಶೇಷ ಕ್ಷಣವಾಗಲಿದೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಫೆಬ್ರವರಿ 16 | ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್ ಎಷ್ಟಿದೆ?

ಈ ಗ್ರಹಣವು ಸುಮಾರು 4 ಗಂಟೆ 30 ನಿಮಿಷಗಳ ನಡೆಯಲಿದ್ದು, 2 ನಿಮಿಷ 20 ಸೆಕೆಂಡ್ ಗಳ ಕಾಲ ಚಂದ್ರನು ಸೂರ್ಯನ ಮದ್ಯಭಾಗವನ್ನು ಮರೆಮಾಡುವ ಮೂಲಕ ವಿಶೇಷ ದೃಶ್ಯ ಮೂಡುತ್ತದೆ. ಆದರೆ ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ.
ಚಂದ್ರನು ಭೂಮಿಯಿಂದ ದೂರದಲ್ಲಿರುವುದರಿಂದ ಸೂರ್ಯನನ್ನು ಸಂಪೂರ್ಣವಾಗಿ ಮರೆಮಾಡಲು ಸಾಧ್ಯವಾಗದೆ, ಅದರ ಸುತ್ತಲೂ ಬೆಳಕಿನ ಉಂಗುರದಂತೆ ಕಾಣುತ್ತದೆ. ಇದನ್ನು ಕಂಕಣ ಸೂರ್ಯಗ್ರಹಣ ಎನ್ನುವರು.
ಇದನ್ನೂ ಓದಿ: ಕಣ್ಣಿನ ಕ್ಯಾನ್ಸರ್ ಆರಂಭಿಕ ಲಕ್ಷಣಗಳನ್ನು ಹೇಗೆ ಗುರುತಿಸುವುದು?
ಇದು ಅಂಟಾರ್ಟಿಕಾ, ದಕ್ಷಿಣ ಆಫ್ರಿಕಾ, ತಾಂಜಾನಿಯಾ, ಜಾಂಬಿಯಾ, ಜಿಂಬಾಬ್ವೆ ಮುಂತಾದ ದೇಶಗಳಲ್ಲಿ ಮಾತ್ರ ಈ ಅದ್ಭುತವನ್ನು ವಿಶೇಷ ಉಪಕರಣಗಳ ಮೂಲಕ ನೋಡಿ ಕಣ್ತುಂಬಿ ಕೊಳ್ಳಬಹುದು ಎಂದು ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್. ಟಿ.ಸ್ವಾಮಿ ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
