
CHITRADURGA NEWS | 12 OCTOBER 2025
ಚಿತ್ರದುರ್ಗ: ರಾಷ್ಟ್ರೀಯ ಸ್ವಯಂಸೇವಕ ಸಂಘ(RSS) ಸ್ಥಾಪನೆಯಾಗಿ ಶತಮಾನ ಪೂರೈಸಿದ ಹಿನ್ನೆಲೆಯಲ್ಲಿ ಐತಿಹಾಸಿಕ ಕೋಟೆನಾಡು ಚಿತ್ರದುರ್ಗದಲ್ಲಿ ನೂರಾರು ಸ್ವಯಂಸೇವಕರು ಶಿಸ್ತುಬದ್ಧ ಪಥ ಸಂಚಲನ ನಡೆಸಿದರು.
ಇದನ್ನೂ ಓದಿ: ಬಸವಣ್ಣ ದಾರಿಯಲ್ಲಿ ಸಂಚರಿಸಲು ಸುಜ್ಞಾನ-ಸಂಗಮ | ಶಾಂತವೀರ ಶ್ರೀ

ಸಾಲು ಸಾಲು ಬೂಟು ಕಾಲು ನಡೆವ ಸೈನ್ಯ ಸಾಗರ ಎಂಬ ಸಂಘ ಗೀತೆಯಂತೆ ಚಿತ್ರದುರ್ಗದ ರಾಜ ಬೀದಿಯಲ್ಲಿ ಹೆಗಲ ಮೇಲೆ ದಂಡ ಹೊತ್ತು ಒಂದೇ ದಿಕ್ಕಿನತ್ತ ನೂರಾರು ಮಂದಿ ಸಾಗುವ ದೃಶ್ಯ ಮನಸೂರೆಗೊಳ್ಳುತ್ತಿತ್ತು.
ತೆರೆದ ಜೀಪಿನಲ್ಲಿ ಭಗವಾಧ್ವಜ ಹಾಗೂ ಆರೆಸ್ಸೆಸ್ಸ್ ಸಂಸ್ಥಾಪಕರಾ ಡಾ.ಕೇಶವ ಬಲಿರಾಮ್ ಹೆಡಗೇವಾರ್ ಹಾಗೂ ಶ್ರೀ ಸದಾಶಿವರಾವ್ ಗೋಳವಲ್ಕರ್ ಅವರ ಭಾವಚಿತ್ರ ಪ್ರತಿಷ್ಠಾಪಿಸಿ ಪಥಸಂಚಲನದಲ್ಲಿ ತೆಗೆದುಕೊಂಡು ಹೋಗಲಾಯಿತು.
ಪಥ ಸಂಚಲನ ಸ್ವಾಗತಿಸಲು ಅನೇಕ ಮನೆಗಳ ಮುಂದೆ ರಂಗೋಲಿ ಹಾಕಿ ಪುಷ್ಪಾರ್ಚನೆ ಮಾಡಿ, ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳು ಮೊಳಗಿದವು.
ಇದನ್ನೂ ಓದಿ: ಅಡಿಕೆ ಧಾರಣೆ | ತೀರ್ಥಹಳ್ಳಿ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್
ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ(RSS) ನೂರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶತಾಬ್ದಿ ವರ್ಷಾಚರಣೆ ಅಂಗವಾಗಿ ನಗರದಲ್ಲಿ ಪಥ ಸಂಚಲನ ಆಯೋಜಿಸಲಾಗಿತ್ತು.
ಸುಮಾರು 600 ಕ್ಕೂ ಅಧಿಕ ಗಣವೇಶದಾರಿ ಸ್ವಯಂಸೇವಕರು ಹೆಗಲ ಮೇಲೆ ದಂಡ ಇಟ್ಟುಕೊಂಡು ಸಂಚಲನದಲ್ಲಿ ಭಾಗವಹಿಸಿದ್ದರು.
ರಂಗಯ್ಯನ ಬಾಗಿಲು ಸಮೀಪದಲ್ಲಿರುವ ಸುರಕ್ಷಾ ನರ್ಸಿಂಗ್ ಕಾಲೇಜು ಬಳಿ ಭಗವಾಧ್ವಜಾರೋಹಣ, ಪ್ರಾರ್ಥನೆ ನಂತರ, ದೊಡ್ಡಪೇಟೆಯ ರಾಜಬೀದಿ ಮಾರ್ಗವಾಗಿ, ಉಚ್ಚೆಂಗೆಲ್ಲಮ್ಮ ದೇವಸ್ಥಾನ, ಏಕನಾಥೇಶ್ವರ ಪಾದಗುಡಿ, ಕೋಟೆ ಮುಂಭಾಗ, ಕಾಮನಬಾವಿ ಬಡಾವಣೆ, ಪೋಸ್ಟ್ ಆಫಿಸ್ ರಸ್ತೆ, ಕಬೀರಾನಂದಾಶ್ರಮದ ಮುಂಭಾಗದಿಂದ ಸಾಗಿ ಕರುವಿನಕಟ್ಟೆ ವೃತ್ತ, ಜೋಗಿಮಟ್ಟಿ ರಸ್ತೆ ಮೂಲಕ ಮತ್ತೆ ಸುರಕ್ಷಾ ಕಾಲೇಜು ಬಳಿ ಸಮಾರೋಪಗೊಂಡಿತು.
ಇದನ್ನೂ ಓದಿ: ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ | ಅರ್ಜಿ
ಆರೆಸ್ಸೆಸ್ಸ್ ಜಿಲ್ಲಾ ಸಂಘಚಾಲಕ ಜ.ರಾ.ನಾಗೇಶ್, ಜಿಲ್ಲಾ ಕಾರ್ಯವಾಹ ರಾಮಕಿರಣ್, ಜಿಲ್ಲಾ ಪ್ರಚಾರಕ ಶ್ರೀನಾಥ್, ಡಾ.ನಾಗರಾಜ್, ಪ್ರಮುಖರಾದ ರಾಜಕುಮಾರ್, ಲಿಂಗಪ್ಪ, ದೇವರಾಜ್, ನಾಗರಾಜ್, ಎಂಎಲ್ಸಿ ಕೆ.ಎಸ್.ನವೀನ್, ಬಿಜೆಪಿ ಜಿಲ್ಳಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಕುಡಾ ಮಾಜಿ ಅಧ್ಯಕ್ಷ ಟಿ.ಬದರೀನಾಥ್, ಬಜರಂಗದಳದ ಪ್ರಭಂಜನ್, ಮುಖಂಡರಾದ ಜಿ.ಎಂ.ಅನಿತ್, ಡಾ.ಸಿದ್ಧಾರ್ಥ್, ಉಮೇಶ್ ಕಾರಜೋಳ, ಜಿ.ಎಂ.ಸುರೇಶ್, ಟಿ.ಜಿ.ನರೇಂದ್ರನಾಥ್, ಸುರೇಶ್ ಸಿದ್ದಾಪುರ, ಜಿತೇಂದ್ರ ಎನ್.ಹುಲಿಕುಂಟೆ ಮತ್ತಿತರರು ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
