By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ತಾಲೂಕು ಮಟ್ಟದ ದಸರಾ ಕ್ರೀಡಾಕೂಟ | ಆನ್‌ಲೈನ್ ನೋಂದಣಿ ಕಡ್ಡಾಯ
    2 hours ago
    ನಾಳೆಯಿಂದ ಅಂತರ ಕಾಲೇಜು ಬಾಸ್ಕೆಟ್‌ಬಾಲ್ ಪಂದ್ಯಾವಳಿ
    2 hours ago
    ಚಿತ್ರದುರ್ಗ ಶಾಖಾ ಕಾಲುವೆ
    ಭದ್ರ ಹರಿವು ಮತ್ತೆ ಆರಂಭ | ಸಮಸ್ಯೆ ಬಗೆಹರಿಸಿದ ಸಚಿವ ಟಿ.ರಘುಮೂರ್ತಿ
    2 hours ago
    ಮಂಟೇಸ್ವಾಮಿ ಅವರ ಜೀವನ ಹಾಗೂ ಸಾಧನೆ ಕುರಿತು ಡಾ. ಪಿ.ಎಸ್. ಶಂಕರ್ ಮಾತನಾಡಿದರು
    ಮಂಟೇಸ್ವಾಮಿಯವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು | ಡಾ.ಪಿ.ಎಸ್. ಶಂಕರ್
    13 hours ago
    ಟೌನ್ ಕೋ-ಆಪರೇಟಿವ್ ಸೊಸೈಟಿ ವಾರ್ಷಿಕ ಸಾಮಾನ್ಯ ಮಹಾಸಭೆ
    ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಗೆ ₹22.11 ಲಕ್ಷ ನಿವ್ವಳ ಲಾಭ
    1 day ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    ಖಾಸಗಿ ಬಸ್ ಪಲ್ಟಿ | ಸ್ಥಳದಲ್ಲೇ ಮೂವರ ಸಾವು | 15ಕ್ಕೂ ಹೆಚ್ಚು ಮಂದಿಗೆ ಗಾಯ
    3 weeks ago
    ಚಲಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಲಾರಿ ಡಿಕ್ಕಿ | ಇಬ್ಬರು ಸಾವು
    3 weeks ago
    ನಾಯಿ ತಪ್ಪಿಸಲು ಹೋಗಿ ರಸ್ತೆ ಬದಿ ನಿಂತಿದ್ದವರಿಗೆ ಕಾರು ಡಿಕ್ಕಿ | ಸ್ಥಳದಲ್ಲೇ ಓರ್ವ ಸಾವು
    2 months ago
    LOHITH NITHYASHREE
    ಭೀಕರ ಅಪಘಾತ ಮಾರುತಿ ಗ್ಯಾಸ್‌ನ ಲೋಹಿತ್‌ ಪ್ರಸಾದ್‌ ದಂಪತಿ ಸಾವು | ಹೊಳಲ್ಕೆರೆ ಕಣಿವೆ ಬಳಿ ಕಾರು ಲಾರಿ ನಡುವೆ ಅಪಘಾತ
    2 months ago
    ಲಾರಿ-ಬಸ್ ನಡುವೆ ಭೀಕರ ಅಪಘಾತ | 12ಕ್ಕೂ ಹೆಚ್ಚು ಮಂದಿಗೆ ಗಾಯ
    2 months ago
  • ತಾಲೂಕು
    ತಾಲೂಕುShow More
    ಮಾರಿಕಾಂಭ ದೇವಿಯ ಪರವು ಆಚರಣೆ
    ಮಾರಿಕಾಂಭ ದೇವಿಯ ಪರವು ಆಚರಣೆ | ಶತಮಾನದ ಪರಂಪರೆ ಮುಂದುವರಿಕೆ
    3 days ago
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    2 weeks ago
    ವಿದ್ಯುತ್ ಸ್ಪರ್ಶಿಸಿ ನವಿಲು, ಚಿರತೆ ಸಾವು
    4 weeks ago
    ಸಾಣೇಹಳ್ಳಿ ಶ್ರೀಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ
    ಬದುಕು ಬದಲಿಸುವ ಶಕ್ತಿ ಇಷ್ಟಲಿಂಗ ದೀಕ್ಷೆಗಿದೆ | ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ
    1 month ago
    ಚಳ್ಳಕೆರೆ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ
    ಜವಾಬ್ದಾರಿ ಅರಿತವರು ಮಾತ್ರ ಪತ್ರಕರ್ತರಾಗಲು ಸಾಧ್ಯ | ಶಾಸಕ ಟಿ.ರಘುಮೂರ್ತಿ
    2 months ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    arecanut price list
    ಅಡಿಕೆ ಧಾರಣೆ | 7 ಸೆಪ್ಟಂಬರ್‌ | ಇಂದಿನ ಅಡಿಕೆ ರೇಟ್‌
    19 minutes ago
    arecanut price list
    ಅಡಿಕೆ ಧಾರಣೆ | ಸೆಪ್ಟಂಬರ್‌ 4 | ಯಾವ ಅಡಿಕೆಗೆ ಎಷ್ಟು ರೇಟ್‌
    3 days ago
    arecanut price list
    ಅಡಿಕೆ ಧಾರಣೆ | ಸೆ.3 | ಚನ್ನಗಿರಿ, ತೀರ್ಥಹಳ್ಳಿ ಸೇರಿ ರಾಜ್ಯದ ಅಡಿಕೆ ವಹಿವಾಟು
    4 days ago
    arecanut price list
    ಅಡಿಕೆ ಧಾರಣೆ | ಅಡಿಕೆ ಬೆಲೆಯಲ್ಲಿ ಕುಸಿತ
    2 months ago
    ARECANUT RATE
    ಅಡಿಕೆ ಧಾರಣೆ | 8 ಜೂನ್‌ | ಇಂದಿನ ಅಡಿಕೆ ರೇಟ್‌
    3 months ago
  • Dina Bhavishya
    Dina BhavishyaShow More
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 07 | ಉದ್ಯೋಗದಲ್ಲಿ ಅಧಿಕಾರಿಗಳಿಂದ ಬೆಂಬಲ, ಅರೋಗ್ಯದಲ್ಲಿ ಎಚ್ಚರ
    13 hours ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 06 | ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬ, ಹಠಾತ್ ಆರ್ಥಿಕ ಲಾಭದ ಸೂಚನೆ
    2 days ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 05 | ಶ್ರಮಕ್ಕೆ ತಕ್ಕ ಫಲಿತಾಂಶ ಅರೋಗ್ಯದಲ್ಲಿ ಜಾಗೃತಿ ವಹಿಸಿ
    3 days ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 04 | ಉದ್ಯೋಗಗಳಲ್ಲಿ ಕೆಲಸದ ಒತ್ತಡ, ದೂರದ ಪ್ರಯಾಣ ಬೇಡ
    4 days ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 03 | ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳು, ಉದ್ಯೋಗದಲ್ಲಿ ಗೊಂದಲದ ಪರಿಸ್ಥಿತಿ
    5 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 07 | ಮೆಕ್ಕೆಜೋಳ, ರಾಗಿ, ಶೇಂಗಾ ರೇಟ್ ಎಷ್ಟಿದೆ?
    6 hours ago
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 05 | ಹತ್ತಿ ರೇಟ್ ಎಷ್ಟಿದೆ?
    2 days ago
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 04 | ರಾಗಿ, ಶೇಂಗಾ ರೇಟ್…..
    3 days ago
    ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
    4 days ago
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 02 | ಮೆಕ್ಕೆಜೋಳ, ರಾಗಿ ರೇಟ್ ಎಷ್ಟಿದೆ?
    5 days ago
  • ಹೊಳಲ್ಕೆರೆ
    ಹೊಳಲ್ಕೆರೆShow More
    Inauguration of Teachers' Day Celebrations
    ಗುರು ಸ್ಥಾನ ಪರಮ ಪವಿತ್ರ | ಮಕ್ಕಳ ಭವಿಷ್ಯ ರೂಪಿಸುವ ಹೊಣೆ ಶಿಕ್ಷಕರದ್ದು | ಶಾಸಕ ಎಂ.ಚಂದ್ರಪ್ಪ
    2 days ago
    Inauguration of the Public Service Movement meeting
    ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ | ಶಾಸಕ ಚಂದ್ರಪ್ಪ
    2 days ago
    ತಾಳಿಕಟ್ಟೆ–ದೊಗ್ಗನಾಳ್ ರಸ್ತೆ ಅಭಿವೃದ್ಧಿಗೆ ₹12 ಕೋಟಿ | ಶಾಸಕ ಎಂ.ಚಂದ್ರಪ್ಪ
    1 week ago
    ಹೊಳಲ್ಕೆರೆ ಪಟ್ಟಣದ ಕ್ರೀಡಾಂಗಣದಲ್ಲಿ 80ನೇ ಸ್ವಾತಂತ್ರ್ಯೋತ್ಸವ
    ಹಿರಿಯರ ತ್ಯಾಗದ ಮಾರ್ಗದರ್ಶನದಲ್ಲಿ ಮುನ್ನಡೆಯೋಣ | ಶಾಸಕ ಡಾ.ಎಂ.ಚಂದ್ರಪ್ಪ
    3 weeks ago
    ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
    ಮನೆ ಮನೆಗೆ ಶುದ್ಧ ಕುಡಿಯುವ ನೀರು, ಮಕ್ಕಳಿಗೆ ಉಚಿತ ಶಿಕ್ಷಣ–ಸೌಲಭ್ಯ | ಶಾಸಕ ಚಂದ್ರಪ್ಪ
    4 weeks ago
  • ಹಿರಿಯೂರು
    ಹಿರಿಯೂರುShow More
    Power outage on May 1
    ಜೂನ್ 23 ರಂದು ಹಿರಿಯೂರು ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ
    3 months ago
    ವೈಷ್ಣವ
    ನಾಲ್ಕು ವರ್ಷದ ಬಾಲಕ ಸಾವು | ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಪುತ್ರ
    3 months ago
    Babburu Horticulture college
    ಕೃಷಿ ಪ್ರಾಯೋಗಿಕ ಮರು ಪರೀಕ್ಷೆ ಜೂನ್ 1ಕ್ಕೆ ನಿಗದಿ
    4 months ago
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    5 months ago
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    7 months ago
  • ಹೊಸದುರ್ಗ
    ಹೊಸದುರ್ಗShow More
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    2 weeks ago
    ವಿದ್ಯುತ್ ಸ್ಪರ್ಶಿಸಿ ನವಿಲು, ಚಿರತೆ ಸಾವು
    4 weeks ago
    ಸಾಣೇಹಳ್ಳಿ ಶ್ರೀಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ
    ಬದುಕು ಬದಲಿಸುವ ಶಕ್ತಿ ಇಷ್ಟಲಿಂಗ ದೀಕ್ಷೆಗಿದೆ | ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ
    1 month ago
    ಉಪನ್ಯಾಸ ಹಾಗೂ ಸ್ವಾಗತ ಸಮಾರಂಭ
    ಬಡತನ ನಿರ್ಮೂಲನೆಗೆ ಶಿಕ್ಷಣವೇ ಬ್ರಹ್ಮಾಸ್ತ್ರ | ಶಾಂತವೀರ ಶ್ರೀ
    2 months ago
    ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ | 4 ಬೈಕುಗಳು ವಶಕ್ಕೆ
    3 months ago
  • Life Style
    Life StyleShow More
    Women's breasts
    ಮಹಿಳೆಯರು ಸ್ತನಗಳನ್ನು ಆರೋಗ್ಯವಾಗಿಡಲು ಪ್ರತಿದಿನ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ
    12 hours ago
    Pineapple
    ಅನಾನಸ್‌ನ ಹಣ್ಣಿನ ಮಧ್ಯದಲ್ಲಿರುವ ಗಟ್ಟಿ ಭಾಗ ತಿಂದರೆ ಏನಾಗುತ್ತದೆ ಗೊತ್ತಾ?
    13 hours ago
    white and blue conch flowers
    ಬಿಳಿ ಮತ್ತು ನೀಲಿ ಶಂಖಪುಷ್ಪ ಹೂಗಳಲ್ಲಿ ಸೇವಿಸಲು ಯಾವುದು ಉತ್ತಮ?
    2 days ago
    coconut oil to your hair
    ಕೂದಲಿಗೆ ತೆಂಗಿನ ಎಣ್ಣೆ ಹಚ್ಚುವಾಗ ಈ ತಪ್ಪು ಮಾಡಿದರೆ ನಿಮ್ಮ ಕೂದಲಿಗೆ ಹಾನಿಯಾಗಬಹುದು
    2 days ago
    PCOS
    ಪಿಸಿಓಎಸ್‍ನಿಂದ ಬಳಲುತ್ತಿರುವವರು ಈ ಹಣ್ಣುಗಳನ್ನು ತಿನ್ನಿ
    3 days ago
Reading: ಶರಣ ಸಂಸ್ಕೃತಿ ಉತ್ಸವದಲ್ಲಿ ಕೃಷಿಮೇಳ, ವಸ್ತು ಪ್ರದರ್ಶನ | ಮುರುಘಾಮಠದಲ್ಲಿ ಪೂರ್ವ ಸಿದ್ದತಾ ಸಭೆ
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಮುಖ್ಯ ಸುದ್ದಿ

ಶರಣ ಸಂಸ್ಕೃತಿ ಉತ್ಸವದಲ್ಲಿ ಕೃಷಿಮೇಳ, ವಸ್ತು ಪ್ರದರ್ಶನ | ಮುರುಘಾಮಠದಲ್ಲಿ ಪೂರ್ವ ಸಿದ್ದತಾ ಸಭೆ

News Desk Chitradurga News
Last updated: 5 September 2025 19:39
News Desk Chitradurga News
1 year ago
Share
ಶರಣ ಸಂಸ್ಕೃತಿ ಉತ್ಸವದಲ್ಲಿ ಕೃಷಿಮೇಳ, ವಸ್ತು ಪ್ರದರ್ಶನ | ಮುರುಘಾಮಠದಲ್ಲಿ ಪೂರ್ವ ಸಿದ್ದತಾ ಸಭೆ
SHARE

CHITRADURGA NEWS | 05 SEPTEMBER 2025

ಚಿತ್ರದುರ್ಗ: ಮುರುಘಾಮಠದ ವತಿಯಿಂದ ಇದೇ ತಿಂಗಳು ಕೊನೆ ವಾರದಲ್ಲಿ ಆರಂಭವಾಗುವ ಶರಣಸಂಸ್ಕೃತಿ ಉತ್ಸವದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೃಷಿಮೇಳ ಮತ್ತು ವಸ್ತುಪ್ರದರ್ಶನ ಆಯೋಜಿಸಿದ್ದು. ಅದರ ಸಿದ್ಧತೆಗಾಗಿ ರೈತಪರ ಸಂಘಟನೆಗಳ ಸಲಹೆಗಳನ್ನು ಪಡೆಯಲು ಗುರುವಾರ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಪೂರ್ವಸಿದ್ಧತಾ ಸಭೆ ಕರೆಯಲಾಗಿತ್ತು.

ಇದನ್ನೂ ಓದಿ: ಗುರುಭವನ ನಿರ್ಮಾಣಕ್ಕೆ ರೂ.2 ಕೋಟಿ | ಶಿಕ್ಷಕರ ದಿನಾಚರಣೆಯಲ್ಲಿ ಸಚಿವ ಡಿ.ಸುಧಾಕರ್ ಭರವಸೆ 

ಸಭೆಯ ಸಾನ್ನಿಧ್ಯ ವಹಿಸಿದ್ದ ಬಹನ್ಮಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ಮಾತನಾಡಿ, ಶ್ರೀಮಠವು ಕಳೆದ 3 ದಶಕಗಳಿಂದ ಕೃಷಿ ಮತ್ತು ರೈತರ ಅಭಿವದ್ಧಿಯ ಪರವಾಗಿ ಕೆಲಸ ಮಾಡುತ್ತಿದೆ. ಬರೀ ಹೇಳೋದು ಕೇಳೋದು ಆಗಬಾರದು. ಒಂದು ಬದ್ಧತೆಯ ಕೆಲಸ ಆಗಬೇಕು. 

ಈ ಮೇಳಕ್ಕೆ ಒತ್ತಾಯಪೂರ್ವಕವಾಗಿ ಬರಬಾರದು. ಎಲ್ಲಾ ರೈೆತರು ಒಟ್ಟಾಗಿ ಬರಬೇಕು. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಶ್ರೀಮಠ ಮಾಡುತ್ತದೆ. ಯಾವುದು ಅಗತ್ಯವೋ ಯಾವುದು ಅನಿವಾರ್ಯವೋ ಅದನ್ನು ಮಾಡೋಣ. ಎಲ್ಲದಕ್ಕಿಂತ ಮುಖ್ಯವಾಗಿ ಜಿಲ್ಲೆಯ ರೈತರು ಒಗ್ಗೂಡಿ ಬರುವ ಕೆಲಸವಾಗಬೇಕೆಂದರು.

ರೈತಮುಖಂಡ ಈಚಘಟ್ಟದ ಸಿದ್ಧವೀರಪ್ಪ ಮಾತನಾಡಿ, ಪದೇ ಪದೇ ಸಮಾರಂಭ ಮಾಡುತ್ತೇವೆ. ಆದರೆ ಅದರಲ್ಲಿ ಪ್ರಸ್ತಾಪಿಸುವ ಮಂಡಿಸುವ ವಿಚಾರಗಳು ಅನುಷ್ಠಾನಕ್ಕೆ ಬರಬೇಕು. ಅದು ಒಂದೇ ವಿಚಾರವಿರಲಿ ಅದು ಜಾರಿಯಾದಾಗ ಮಾತ್ರ ಅದಕ್ಕೆ ಮಹತ್ವ ಬರುತ್ತದೆ. 

ಇದನ್ನೂ ಓದಿ: ಸಡಗರದ ಈದ್‍ಮಿಲಾದ್ ಹಬ್ಬ ಆಚರಣೆ | ಮುಸ್ಲಿಂ ಬಾಂಧವರಿಂದ ಮೆರವಣಿಗೆ

ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ಚಿಕ್ಕಮಕ್ಕಳಲ್ಲಿ ಮಧುಮೇಹ, ಸಣ್ಣ ವಯಸ್ಸಿನವರಿಗೆ ಹದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದನ್ನು ಕಾಣುತ್ತೇವೆ. ಇದಕ್ಕೆ ನಾವು ತಿನ್ನುವ ಆಹಾರ ಸಂಪೂರ್ಣ ವಿಷಯುಕ್ತವಾಗಿರುವುದು. ಆದ್ದರಿಂದ ಸಾವಯವ ಕೃಷಿಗೆ ಒತ್ತುಕೊಡುವ, ಸಾಧ್ಯವಾದಷ್ಟು ಮಠಗಳಲ್ಲಿ ಸಾವಯವ ಪದಾರ್ಥಗಳನ್ನು ಬಳಸುವಂತಾದರೆ ಅದಕ್ಕೆ ಹೆಚ್ಚಿನ ಮಹತ್ವ ಬರುತ್ತದೆ. ಹಾಗೆಯೇ ರಾಸುಗಳ ಪ್ರದರ್ಶನದಲ್ಲಿ ಸ್ಥಳೀಯ ರೈತರ ಜಾನುವಾರುಗಳು ಇರಲಿ. ಅವರ ಸಾಕುವಿಕೆಯ ಪ್ರಾಯೋಗಿಕ ಅನುಭವ ಅನಿಸಿಕೆ ಬೇರೆಯವರಿಗೆ ತಿಳಿಸುವಂತಾಗಬೇಕೆಂದು ಅಭಿಪ್ರಾಯಪಟ್ಟರು.

ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ದೇಶದ ರೈತನಿಗೆ ತಾನು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗಬೇಕು. ಸರ್ಕಾರಗಳು ರೈತರ ವಿಷಯದಲ್ಲಿ ಬೇಜವಾಬ್ದಾರಿ ನಡವಳಿಕೆ ಕೂಡದು. ರೈತರಿಗೆ ಸಕಾಲಕ್ಕೆ ಒಳ್ಳೆಯ ಬಿತ್ತನೆಬೀಜ, ಗೊಬ್ಬರ ದೊರಕುವಂತಾಗಬೇಕು. ಈ ಬಗ್ಗೆ ಕೃಷಿಮೇಳದಲ್ಲಿ ಧ್ವನಿ ಎತ್ತಿ ಸಹಕಾರಿಯಾಗಬೇಕಿದೆ ಎಂದು ತಿಳಿಸಿದರು.

ಧನಂಜಯ ಅವರು ಮಾತನಾಡಿ ರೈತಪರ ಹೋರಾಟಗಳಲ್ಲಿ ಮುಖಂಡರುಗಳು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳಿಕೆ, ಹೋರಾಟ ಮಾಡಿದರೆ ಅರ್ಥವಿಲ್ಲ. ಸಾಂಘಿಕ ಶಕ್ತಿ ಪ್ರದರ್ಶನದ ಅಗತ್ಯವಿದೆ. ಆರ್ಥಿಕವಾಗಿ ಸಬಲರಾಗಲು ರಾಸಾಯನಿಕ ಬಳಕೆಯ ಕೃಷಿಪದ್ಧತಿಯಿಂದ ಭೂಮಿತಾಯಿ ವಿಷಯುಕ್ತ ಆಗುತ್ತಿದ್ದು ಅದನ್ನು ಮುಂದುವರೆಸಲು ಬಿಡದೆ ಸಾವಯವ ಕೃಷಿಯತ್ತ ಪ್ರತಿ ರೈತರನ್ನು ಪ್ರೇರೇಪಿಸುವ ಕೆಲಸ ಆಗಬೇಕಿದೆ. ಹಾಗಾದಾಗ ಒಳ್ಳೆಯ ತಳಿಯ ವಿಷಮುಕ್ತ ಆಹಾರ ಸಿಗಲು ಸಾಧ್ಯ ಎಂದರು.

ಸಿದ್ಧರಾಮಪ್ಪ, ತಿಪ್ಪೇಸ್ವಾಮಿ ಮಾತನಾಡಿ, ಈಗಾಗಲೇ ಅಂತರ್ಜಲ ಮಟ್ಟ ಪಾತಾಳಕ್ಕೆ ಹೋಗಿದೆ. ಜಿಲ್ಲೆಯ ಪ್ರತಿ ತಾಲ್ಲೂಕಿನ ಕೆರೆಗಳನ್ನು ತುಂಬಿಸುವಂತಾದರೆ ಅಂತರ್ಜಲಕ್ಕೆ ಕಸುವು ಬರುತ್ತದೆ. ಆ ಬಗ್ಗೆಯೂ ಕಷಿ ಮೇಳದಲ್ಲಿ ಆದ್ಯತೆ ನೀಡಬೇಕು. ಕೃಷಿಗೆ ಸಂಬಂಧಪಟ್ಟ ವಸ್ತು ಪ್ರದರ್ಶನಗಳು ಗುಣಮಟ್ಟದ ಯೋಗ್ಯ ಬೆಲೆಗೆ ಸಿಗುವಂತಾಗಬೇಕೆಂದು ಸಲಹೆ ನೀಡಿದರು.

ಇದನ್ನೂ ಓದಿ: ಶಿಕ್ಷಕರ ದಿನಾಚರಣೆ ವಿಶೇಷ ಲೇಖನ | ಅರಿವೆಂಬ ರವಿಯು ಮೂಡಲು | ಗೀತಾ ಭರಮಸಾಗರ

ದೇವಿಕುಮಾರಿ ವಿಶ್ವನಾಥ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೈತ ಅಡಿಕೆ ಬೆಳೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾನೆ. ಕಾರಣ ಬೇರೆ ಬೆಳೆಗಳನ್ನು ಬೆಳೆಯಲು ತಗಲುವ ಖರ್ಚುಗಳು ದುಬಾರಿಯಾಗಿರುವುದರಿಂದ ಮತ್ತು ಬೆಳೆಗೆ ತಕ್ಕನಾದ ಬೆಲೆ ಸಿಗದೇ ಇರುವುದರಿಂದ ಅತ್ತ ಹೋಗುವಂತಾಗಿದೆ. ಅಡಿಕೆ ಬೆಳೆಗೆ ತನ್ನದೇ ಆದ ವಿಧಾನ ಅಳವಡಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಿದರು.

ರಂಗೇಗೌಡ, ಹೊಳಲ್ಕೆರೆಯ ನೂರುಲ್ಲಾ ಅವರು, ಸಾವಯವ ಕೃಷಿಯಿಂದ ಯಾವ ಯಾವ ಬೆಳೆಗಳನ್ನು ಬೆಳೆಯುವ ವಿಧಾನಗಳನ್ನು ಹೇಳಿದರು. 

ಪ್ರತಿ ರೈತರು ದನಗಳನ್ನು ಕಟ್ಟಿ ಪಶುಸಂಗೋಪನೆ ಮಾಡಬೇಕು. ಅಂತ ವಾತಾವರಣವು ನಮ್ಮ ಪೂರ್ವಜರ ಸಮೃದ್ಧ ಜನಜೀವನವನ್ನು ನೆನಪಿಸುತ್ತವೆ ಎಂದರು.

ಪತ್ರಕರ್ತ ರೈತಮುಖಂಡ ಜಿ.ಎಸ್. ಉಜ್ಜಿನಪ್ಪ ಮಾತನಾಡಿ, ಕೃಷಿಮೇಳ ಅರ್ಥಪೂರ್ಣವಾಗಿ ಜರುಗಿ ಸರ್ಕಾರದ ಗಮನಸೆಳೆಯುವಂತಹ ಸಲಹೆಗಳನ್ನು ನೀಡುವುದು ಅತಿಮುಖ್ಯ. ನಾನು ರೈತಸಂಘದಲ್ಲಿದ್ದಾಗ ಅಲ್ಲಿನ ವ್ಯವಸ್ಥೆ ನೋಡಿ ಭ್ರಮನಿರಸನಗೊಂಡು ಹೊರಬಂದೆ ಎಂದು ಬೇಸರಿಸಿದರು.

ಇದನ್ನೂ ಓದಿ: ಬೆಸ್ಕಾಂ ಇಂಜಿನಿಯರ್ ತಿಮ್ಮರಾಯಪ್ಪ ಲೋಕಾಯುಕ್ತ ಬಲೆಗೆ

ಕೆ.ಪಿ. ಭೂತಯ್ಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಮಾತನಾಡಿ, ರೈತರಲ್ಲಿ ಬಣಗಳು ಬೇಡ. ಏಕಮುಖವಾಗಿ ಸಾಗಿದರೆ ಯಶಸ್ಸು ಕಾಣಲು ಸಾಧ್ಯ. ಈಗ ಅಸಲಿಗಿಂತ ನಕಲಿ ಗೊಬ್ಬರ ಬೀಜ ಔಷಧಿಗಳ ಹಾವಳಿ ಜಾಸ್ತಿ ಇದೆ. ತಡೆಗಟ್ಟಲು ಕೃಷಿಮೇಳ ತೀರ್ಮಾನ ಮಾಡಬೇಕೆಂದರು.

ಹೊರಕೇರಪ್ಪ, ಸುರೇಶ್‌ಬಾಬು ಸೇರಿದಂತೆ ಜಿಲ್ಲೆಯ ರೈತಮುಖಂಡರು ಭಾಗವಹಿಸಿದ್ದರು. 

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:Agricultural fairChitradurgaChitradurga newsExhibitionmeetingMuruga MathSharan Culture Festivalಕೃಷಿ ಮೇಳಚಿತ್ರದುರ್ಗಚಿತ್ರದುರ್ಗ ನ್ಯೂಸ್ಮುರುಘಾ ಮಠವಸ್ತು ಪ್ರದರ್ಶನಶರಣ ಸಂಸ್ಕೃತಿ ಉತ್ಸವಸಭೆ
Share This Article
Facebook Email Print
Previous Article ಗುರುಭವನ ನಿರ್ಮಾಣಕ್ಕೆ ರೂ.2 ಕೋಟಿ | ಶಿಕ್ಷಕರ ದಿನಾಚರಣೆಯಲ್ಲಿ ಸಚಿವ ಡಿ.ಸುಧಾಕರ್ ಭರವಸೆ 
Next Article ಉತ್ತಮ ಸಮಾಜ ನಿರ್ಮಾಣದ ಹೊಣೆಗಾರಿಕೆ ಶಿಕ್ಷಕರ ಮೇಲಿದೆ | ಶಾಸಕ ಡಾ.ಚಂದ್ರಪ್ಪ
Leave a Comment

Leave a Reply Cancel reply

Your email address will not be published. Required fields are marked *

arecanut price list
ಅಡಿಕೆ ಧಾರಣೆ | 7 ಸೆಪ್ಟಂಬರ್‌ | ಇಂದಿನ ಅಡಿಕೆ ರೇಟ್‌
ಅಡಕೆ ಧಾರಣೆ
ತಾಲೂಕು ಮಟ್ಟದ ದಸರಾ ಕ್ರೀಡಾಕೂಟ | ಆನ್‌ಲೈನ್ ನೋಂದಣಿ ಕಡ್ಡಾಯ
ಮುಖ್ಯ ಸುದ್ದಿ
ನಾಳೆಯಿಂದ ಅಂತರ ಕಾಲೇಜು ಬಾಸ್ಕೆಟ್‌ಬಾಲ್ ಪಂದ್ಯಾವಳಿ
ಮುಖ್ಯ ಸುದ್ದಿ
ಚಿತ್ರದುರ್ಗ ಶಾಖಾ ಕಾಲುವೆ
ಭದ್ರ ಹರಿವು ಮತ್ತೆ ಆರಂಭ | ಸಮಸ್ಯೆ ಬಗೆಹರಿಸಿದ ಸಚಿವ ಟಿ.ರಘುಮೂರ್ತಿ
ಮುಖ್ಯ ಸುದ್ದಿ
© Chitradurga News 2025 | Powered By Karnatakabest.com
Welcome Back!

Sign in to your account

Username or Email Address
Password

Lost your password?

Not a member? Sign Up