CHITRADURGA NEWS | 26 AUGUST 2025
ಹೊಸದುರ್ಗ: ಹೊಸದುರ್ಗ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಇಬ್ಬರು ಬೈಕ್ ಕಳ್ಳರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ದಿನ ಭವಿಷ್ಯ | ಆಗಸ್ಟ್ 26 |ಉದ್ಯೋಗಿಗಳಿಗೆ ಬಡ್ತಿ, ಆರ್ಥಿಕ ಪ್ರಗತಿ, ಹಠಾತ್ ಪ್ರಯಾಣ ಸೂಚನೆ
ಬಂಧಿತರುಂದ ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ ಹಾಗೂ ದಾವಣಗೆರೆ ವ್ಯಾಪ್ತಿಯಲ್ಲಿ ಕಳುವಾದ ಒಟ್ಟು 11 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡಿರುವ ಎಲ್ಲ ಬೈಕುಗಳ ಒಟ್ಟು ಮೌಲ್ಯ 7 ಲಕ್ಷವಾಗಿದೆ.
30 ಜೂನ್ 2025 ರಂದು ಹೊಸದುರ್ಗ ಟೌನ್ ಕೊಬ್ಬರಿಪೇಟೆಯ ಇಸ್ಮಾಯಿಲ್ ಮನೆಯ ಮುಂಬಾಗದಲ್ಲಿ ನಿಂತಿದ್ದ ಹೊಂಡ ಡಿಯೋ ಸ್ಕೂಟಿ ಕಳುವಾದ ಬಗ್ಗೆ ದೂರು ದಾಖಲಾಗಿತ್ತು.
ಆರೋಪಿಗಳ ಪತ್ತೆಗೆ ಹಿರಿಯೂರು Dysp ಟಿ.ಎಂ.ಶಿವಕುಮಾರ್ ಉಸ್ತುವಾರಿಯಲ್ಲಿ, ಹೊಸದುರ್ಗ PI ಕೆ.ಟಿ.ರಮೇಶ್ ನೇತೃತ್ವದಲ್ಲಿ PSI ಮಹೇಶ್ ಕುಮಾರ್, ಸಿಬ್ಬಂದಿಯವರಾದ ಉಮೇಶ, ಕುಮಾರ, ಗಂಗಾಧರ, ರಾಜಣ್ಣ, ಚಿದಾನಂದ, ಮಧು ಚಾಲಕ ಜಗದೀಶ್ ಹಾಗೂ ತಾಂತ್ರಿಕ ಸಿಬ್ಬಂದಿಗಳಾದ ಸತೀಶ, ಪ್ರಕಾಶ ತಂಡ ರಚಿಸಲಾಗಿತ್ತು.
ಆರೋಪಿತರ ಬಗ್ಗೆ ಗುಪ್ತ ಮಾಹಿತಿ ಸಂಗ್ರಹಿಸಿ ಆಗಸ್ಟ್ 24 ರಂದು ಹೊಸದುರ್ಗ ಟೌನ್ KSRTC ಬಸ್ ನಿಲ್ದಾಣದ ಬಳಿ ಚಿತ್ರದುರ್ಗದ ಮಠದ ರಸ್ತೆ ಕಾವಾಡಿಗರಹಟ್ಟಿ ನಿವಾಸಿಗಳಾದ ಆರೋಪಿ ದಾದಪೀರ್ @ ದಾದು ಹಾಗೂ ಆಗಸ್ಟ್ 25 ರಂದು ನಬೀ @ ನಬೀವುಲ್ಲಾ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಬ್ಯಾಕ್‍ಲಾಗ್ ಹುದ್ದೆಗಳ ನೇಮಕಕ್ಕೆ ಒತ್ತಾಯ
ಆರೋಪಿಗಳಿಂದ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ 4 ಮೋಟಾರು ಬೈಕ್ ಕಳವು ಪ್ರಕರಣ, ಚಿತ್ರದುರ್ಗ ಟೌನ್ ಕೊಟೆ ಪೊಲೀಸ್ ಠಾಣೆಯಲ್ಲಿ 3 ಪ್ರಕರಣ, ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ, ಭರಮಸಾಗರ ಪೊಲೀಸ್ ಠಾಣೆಯ 1 ಪ್ರಕರಣ, ಹಿರಿಯೂರು ಪೊಲೀಸ್ ಠಾಣೆಯ ಒಂದು ಪ್ರಕರಣ, ಹಾಗೂ ದಾವಣಗೆರೆ ಜಿಲ್ಲೆ ಕೆಟಿಜೆ ನಗರ ಠಾಣೆಯ 1 ಪ್ರಕರಣಗಳಲ್ಲಿ ಒಟ್ಟು 7 ಲಕ್ಷ ರೂ ಮೌಲ್ಯದ 11 ಮೋಟಾರು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪತ್ತೆ ಕಾರ್ಯವನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಶ್ಲಾಘಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
