
CHITRADURGA NEWS | 25 MAY 2025
ಚಿತ್ರದುರ್ಗ: ನಗರದ ಮದಕರಿ ಬಳಗದ ಗೆಳೆಯರು ಮಾಡಿಸಿರುವ ಸಿಂಹಾಸನರೂಢ ರಾಜಾವೀರ ಮದಕರಿ ನಾಯಕರ ಸಣ್ಣ ಪುತ್ಥಳಿಯನ್ನು ಖ್ಯಾತ ಸಾಹಿತಿ ಡಾ.ಬಿ.ಎಲ್.ವೇಣು ಅನಾವರಣ ಮಾಡಿದ್ದಾರೆ.
Also Read: ಈ ಯೋಗಾಸನಗಳು ಹೆರಿಗೆ ನೋವಿನಿಂದ ಪರಿಹಾರ ನೀಡುತ್ತವೆಯಂತೆ
ಮಹಾರಾಷ್ಟ್ರದ ಮುಂಬೈನಲ್ಲಿ ಈ ಪ್ರತಿಮೆ ತಯಾರಾಗಿದ್ದು, ಅತ್ಯಂತ ಸುಂದರವಾಗಿದೆ.
ಮದಕರಿ ಬಳಗದ ಗೆಳೆಯರಾದ ಗೋಪಾಲಸ್ವಾಮಿ ನಾಯಕ, ಅಜಯ್ ಮದಕರಿ, ಕೆ.ಸೋಮಶೇಖರ್ ಮತ್ತಿತರರು ಸಾಹಿತಿ ಬಿ.ಎಲ್.ವೇಣು ಅವರ ಮನೆಗೆ ಪ್ರತಿಮೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಿ ಅವರಿಂದ ಅನಾವರಣ ಮಾಡಿಸಿದ್ದಾರೆ.
ಮುಂದೆ ಇದೇ ಮಾದರಿಯ ದೊಡ್ಡ ಪ್ರತಿಮೆ ಮಾಡಿಸುವ ಉದ್ದೇಶವಿದ್ದು, ದುರ್ಗೋತ್ಸವ ಸೇರಿದಂತೆ ನಗರದಲ್ಲಿ ನಡೆಯುವ ದೊಡ್ಡ ಕಾರ್ಯಕ್ರಮಗಳಲ್ಲಿ ದೊರ್ಗದ ದೊರೆ ಮದಕರಿ ನಾಯಕರ ಸಿಂಹಾಸನರೂಢ ಪ್ರತಿಮೆ ತೆಗೆದುಕೊಂಡು ಬರುವ ಉದ್ದೇಶವಿದೆ.
Also Read: CET RESULT | SLV ಕಾಲೇಜಿಗೆ ಉತ್ತಮ ಫಲಿತಾಂಶ
9-10 ಅಡಿಯ ಇದೇ ಮಾದರಿಯ ಪ್ರತಿಮೆ ನಿರ್ಮಿಸುವ ಚಿಂತನೆ ಇದೆ ಎಂದು ಗೋಪಾಲಸ್ವಾಮಿ ನಾಯಕ ಉದಯವಾಣಿಗೆ ಮಾಹಿತಿ ನೀಡಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
