By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: Lok Sabha: ಲೋಕಸಭೆ ಅಧಿವೇಶನದಲ್ಲಿ ಕೇಂದ್ರೀಯ ವಿದ್ಯಾಲಯ ಸದ್ದು | ಮೊದಲ ದಿನ ಮೊದಲ ಪ್ರಶ್ನೆ ಕೇಳಿದ ಸಂಸದ ಗೋವಿಂದ ಎಂ.ಕಾರಜೋಳ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » Lok Sabha: ಲೋಕಸಭೆ ಅಧಿವೇಶನದಲ್ಲಿ ಕೇಂದ್ರೀಯ ವಿದ್ಯಾಲಯ ಸದ್ದು | ಮೊದಲ ದಿನ ಮೊದಲ ಪ್ರಶ್ನೆ ಕೇಳಿದ ಸಂಸದ ಗೋವಿಂದ ಎಂ.ಕಾರಜೋಳ

ಮುಖ್ಯ ಸುದ್ದಿ

Lok Sabha: ಲೋಕಸಭೆ ಅಧಿವೇಶನದಲ್ಲಿ ಕೇಂದ್ರೀಯ ವಿದ್ಯಾಲಯ ಸದ್ದು | ಮೊದಲ ದಿನ ಮೊದಲ ಪ್ರಶ್ನೆ ಕೇಳಿದ ಸಂಸದ ಗೋವಿಂದ ಎಂ.ಕಾರಜೋಳ

News Desk Chitradurga News
Last updated: 22 July 2024 13:20
News Desk Chitradurga News
11 months ago
Share
mp govida karajola
18ನೇ ಲೋಕಸಭಾ ಅಧಿವೇಶದಲ್ಲಿ ಮಾತನಾಡಿದ ಸಂಸದ ಗೋವಿಂದ ಎಂ.ಕಾರಜೋಳ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 22 JULY 2024
ಚಿತ್ರದುರ್ಗ: ಕೋಟೆನಾಡಿನ ಜನರ ಬಹುನಿರೀಕ್ಷಿತ ಕೇಂದ್ರೀಯ ವಿದ್ಯಾಲಯದ ಕನಸು ನನಸಾಗುವ ಕಾಲ ಬಂದಿದೆ. 18ನೇ ಲೋಕಸಭಾ ಅಧಿವೇಶದ ಮೊದಲ ದಿನವೇ ಜಿಲ್ಲೆಯ ಅಭಿವೃದ್ಧಿಯ ಹೆಬ್ಬಾಗಿಲು ತೆರೆದಂತಾಗಿದೆ. ಅಧಿವೇಶದ ಮೊದಲ ದಿನದ ಮೊದಲನೇ ಪ್ರಶ್ನೆ ಚಿತ್ರದುರ್ಗ ಜಿಲ್ಲೆಯದ್ದಾಗಿತ್ತು ಎಂಬುದು ವಿಶೇಷ.

ಸಂಸದ ಗೋವಿಂದ ಎಂ.ಕಾರಜೋಳರವರು, ಚಿತ್ರದುರ್ಗಕ್ಕೆ ಕೇಂದ್ರೀಯ ವಿದ್ಯಾಲಯ ಶಾಲೆ ಕುರಿತಂತೆ ಧ್ವನಿ ಎತ್ತಿದರು. ‘ನನ್ನ ಕ್ಷೇತ್ರ ಚಿತ್ರದುರ್ಗದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಪರಿಶಿಷ್ಟ ಜಾತಿ, ಪಂಗಡ, ಕಾಡುಗೊಲ್ಲ ಸಮಾಜಗಳ ಜನರು ಶೇ. 52 ಕ್ಕೂ ಅಧಿಕವಿದ್ದಾರೆ. ಅಂಕಿ ಅಂಶಗಳ ಪ್ರಕಾರ ನಮ್ಮದು ದೇಶದಲ್ಲೇ ಅತೀ ಹಿಂದುಳಿದ ಜಿಲ್ಲೆಯಾಗಿದೆ. ಹಾಗಾಗಿ ಜಿಲ್ಲೆಯಲ್ಲಿನ ಬಡಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಕಾರಣದಿಂದ ಶಿಕ್ಷಣ ಸಚಿವರು ಚಿತ್ರದುರ್ಗದಲ್ಲಿ ಕೇಂದ್ರೀಯ ವಿದ್ಯಾಲಯದ ಸ್ಥಾಪನೆ ಬಗ್ಗೆ ಸೂಕ್ತವಾಗಿ ಶೀಘ್ರ ಕ್ರಮ ಕೈಗೊಳ್ಳಬೇಕಿದೆ’ ಎಂದು ಮನವಿ ಮಾಡಿದರು.

ಇದನ್ನೂ ಓದಿ: ಪರೀಕ್ಷೆಯಲ್ಲಿ ಕಡಿಮೆ ಅಂಕ | ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಆತ್ಮಹತ್ಯೆ

‘ಗೋವಿಂದ ಕಾರಜೋಳರವರು ಕೇಳಿರುವ ವಿಷಯ ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲಿಸಿ ಉತ್ತರ ಕೊಡುತ್ತೇನೆ’ ಎಂದು ರಾಜ್ಯ ಶಿಕ್ಷಣ ಸಚಿವ ಜಯಂತ್ ಚೌದರಿ ತಿಳಿಸಿದರು.

‘ಇಲ್ಲಿಗೆ ಆರಿಸಿ ಬಂದಿರುವ ಸದಸ್ಯರು ಪ್ರಶ್ನೋತ್ತರ ವೇಳೆಯಲ್ಲಿ ಬೇಡಿಕೆಗಳನ್ನು ಖಂಡಿತವಾಗಿ ಇಡುತ್ತಾರೆ. ಬೇಡಿಕೆಗಳ ಇಡದಿದ್ದ ಮೇಲೆ ಪ್ರಶ್ನೋತ್ತರ ವೇಳೆಯಲ್ಲಿ ಇನ್ನೇನು ಕೇಳಬೇಕು ಹೇಳಿ ?’ ಎಂದು ಸಭಾಪತಿ ಓಂ ಬಿರ್ಲಾ ಅವರು ನಗುತ್ತಲೇ ಶಿಕ್ಷಣ ಸಚಿವರಿಗೆ ಹೇಳಿದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:Kendriya VidyalayaLok SabhaMPquestionSessionSpeakerಅಧಿವೇಶನಕೇಂದ್ರೀಯ ವಿದ್ಯಾಲಯಪ್ರಶ್ನೆಲೋಕಸಭೆಸಭಾಪತಿಸಂಸದ
Share This Article
Facebook Email Print
Previous Article guru purnima Gurupurnima: ಎಸ್‌ಆರ್‌ಎಸ್‌ ಹೆರಿಟೇಜ್ ಶಾಲೆಯಲ್ಲಿ ಗುರುಪೂರ್ಣಿಮೆ ಆಚರಣೆ
Next Article ನ್ಯಾಯಾಧೀಶರಿಂದ ಅಂಗನವಾಡಿ ಭೇಟಿ ನ್ಯಾಯಾಧೀಶರಿಂದ ಅಂಗನವಾಡಿ ಭೇಟಿ | ಅವ್ಯವಸ್ಥೆ ಕಂಡು ಅಸಮಧಾನ
Leave a Comment

Leave a Reply Cancel reply

Your email address will not be published. Required fields are marked *

APMC: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಕಡಲೆಕಾಳು, ಶೇಂಗಾ ರೇಟ್ ಎಷ್ಟಿದೆ?
ಮಾರುಕಟ್ಟೆ ಧಾರಣೆ
ಲಿಫ್ಟ್ ಹತ್ತಿದ ತಕ್ಷಣ ತಲೆ ಸುತ್ತುವವರು ಒಮ್ಮೆ ಈ ವಿಚಾರ ತಿಳಿದಿರಿ
Life Style
ಮಳೆಗಾಲದಲ್ಲಿ ಶೀತ ಮತ್ತು ಕೆಮ್ಮು ಬಂದಾಗ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು? ಎಂಬುದನ್ನು ತಿಳಿಯಿರಿ
Life Style
ಹೆರಿಗೆಯ ನಂತರ ಬೇಗ ಚೇತರಿಸಿಕೊಳ್ಳಲು ಈ ಲಡ್ಡುಗಳನ್ನು ತಿನ್ನಿರಿ
Life Style
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up