
CHITRADURGA NEWS | 22 JULY 2024
ಚಿತ್ರದುರ್ಗ: ನಗರದ ಎಸ್‌ಆರ್‌ಎಸ್ ಹೆರಿಟೇಜ್ ಶಾಲೆಯ ಅನಂತ ಕೃಷ್ಣ ಸಭಾಂಗಣದಲ್ಲಿ ಸೋಮವಾರ ಗುರುಪೂರ್ಣಿಮೆ ಆಚರಿಸಲಾಯಿತು.
ಎಸ್‌ಆರ್‌ಎಸ್ ಶಿಕ್ಷಣ ಸಮೂಹ ಸಂಸ್ಥೆ ಕಾರ್ಯದರ್ಶಿ ಸುಜಾತ ಲಿಂಗಾರೆಡ್ಡಿ ಹಾಗೂ ಮಾರ್ಗದರ್ಶಕಿ ಲಿಖಿತ ಅಮೋಘ್ ಅವರು ಗಣಪತಿ, ವೇದವ್ಯಾಸ ಮತ್ತು ಶಾರದ ಪೂಜೆ ನೆರವೇರಿಸಿದರು. ಮಕ್ಕಳು ತಮ್ಮ ಪೋಷಕರ ಪಾದಪೂಜೆ ಮಾಡುವ ಮೂಲಕ ಅವರ ಆಶೀರ್ವಾದ ಪಡೆದರು. ಸಂಸ್ಕೃತ ಶ್ಲೋಕಗಳನ್ನು ಮಕ್ಕಳು ಪಠಿಸಿದರು.
ಇದನ್ನೂ ಓದಿ: ಪರೀಕ್ಷೆಯಲ್ಲಿ ಕಡಿಮೆ ಅಂಕ | ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಆತ್ಮಹತ್ಯೆ

‘ಮನುಷ್ಯನ ಜೀವನದಲ್ಲಿ ಗುರುವಿನ ಪಾತ್ರ ಮಹತ್ವದ್ದು. ಭಾರತಿಯರಲ್ಲಿ ಗುರುಪೂರ್ಣಿಮೆಗೆ ಬಹಳ ಪ್ರಾಮುಖ್ಯತೆ ಇದೆ. ಆಷಾಢ ಮಾಸದ ಹುಣ್ಣಿಮೆಯಂದು ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಗುರುವನ್ನು ದೇವರಂತೆ ಪೂಜಿಸುವ ಸಂಸ್ಕೃತಿ ನಮ್ಮ ದೇಶದಲ್ಲಿದೆ’ ಎಂದು ಸುಜಾತ ಲಿಂಗಾರೆಡ್ಡಿ ತಿಳಿಸಿದರು.
ಇದನ್ನೂ ಓದಿ: ನನಸಾಗದ ನೆಲ್ಯಾಡಿ– ಚಿತ್ರದುರ್ಗ ಚತುಷ್ಪಥ ಹೆದ್ದಾರಿ | ಯೋಜನೆ ಕೈಬಿಟ್ಟ ಎನ್‌ಎಚ್‌ಎಐ
ಪ್ರಾಂಶುಪಾಲರಾದ ಎಂ.ಎಸ್.ಪ್ರಭಾಕರ್, ಎಂ.ಎಸ್.ಅರ್ಪಿತ, ಶೈಕಣಿಕ ಸಂಯೋಜಕರಾದ ಶಾಲಿನಿ, ಟಿ.ರೋಹಿನ, ಸಿಸಿಎ ಸಂಯೋಜಕರಾದ ಸುನೀಲ್ ಭಟ್, ಲುಬ್ನಾ ಕೌಸರ್, ಚಿತ್ರಕಲಾವಿಭಾಗದ ಟಿ.ಶ್ರೀನಿವಾಸ್, ಸ್ವಾಮಿ, ಮಾರುತಿ ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
