CHITRADURGA NEWS | 13 JULY 2024
ಚಿತ್ರದುರ್ಗ: ನಗರದ sc,st ಹಾಸ್ಟೆಲ್ ನಲ್ಲಿ ದಿನ ನಿತ್ಯ ಕಳಪೆ ಆಹಾರ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: Lokayukta raid : ಜಗದೀಶ್, ರವೀಂದ್ರ ಮನೆ ಮೇಲೆ ಲೋಕಾಯುಕ್ತ ದಾಳಿ | ಪತ್ತೆಯಾದ ಆಸ್ತಿ ಎಷ್ಟು ಗೊತ್ತಾ ?
1 ತಿಂಗಳಿಂದ ವಿದ್ಯಾರ್ಥಿ ನಿಲಯದಲ್ಲಿ ದಿನ ನಿತ್ಯ ಊಟದಲ್ಲಿ ಹುಳು, ಕೊಳೆತ ತರಕಾರಿ ಹಾಕಿ ಅಡುಗೆ ಮಾಡುತ್ತಾರೆ, ಕೇಳಿದರೆ ನಮಗೆ ಬೈಯುತ್ತಾರೆ ಎಂದು ಹಾಸ್ಟೇಲ್ ವಾರ್ಡನ್ ವಿರುದ್ಧ ಆರೋಪಿಸಿದರು.
180 ಜನ ವಿದ್ಯಾರ್ಥಿಗಳಿಗೆ 3 ಶೌಚಾಲಯಗಳಿದ್ದು, ಅವುಗಳನ್ನು ಸ್ವಚ್ಛತೆ ಮಾಡದೆ ಬೇಜವಾಬ್ದಾರಿತನ ತೋರುತ್ತಿದ್ದಾರೆ.
ಕೂಡಲೇ ಹಾಸ್ಟೆಲ್ ವಾರ್ಡನ್ ನಾಗರಾಜ್ ಅವರನ್ನು ಅಮಾನತುಗೊಳಿಸಿ, ವಿದ್ಯಾರ್ಥಿಗಳಿಗೆ ಸರಿಯಾದ ಊಟದ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಹಾಸ್ಟೆಲ್ ವಿದ್ಯಾರ್ಥಿಗಳಾದ ನಾಗರಾಜ್, ಕಿರಣ್ ಕುಮಾರ್, ರಘು, ಮಣಿಕಂಠ, ಭಾನುಪ್ರಕಾಶ್, ಸುದರ್ಶನ್, ಮಲ್ಲಿಕಾ, ಹರೀಶ್, ಭರತ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
