CHITRADURGA NEWS | 09 JULY 2024
ಚಿತ್ರದುರ್ಗ: ಅಖಿಲ ಭಾರತ ವೀರಶೈವ ಮಹಾಸಭಾದ ಮೊಳಕಾಲ್ಮುರು ತಾಲ್ಲೂಕು ಘಟಕದ ಅಧ್ಯಕ್ಷರಾಗಿ ರಾಂಪುರದ ಡಿ.ಕೆ.ಆರ್.ಗ್ರೂಪ್ ಮಾಲೀಕ ಎಂ.ಡಿ.ಮಂಜುನಾಥ್ ಅವಿರೋಧ ಆಯ್ಕೆಯಾಗಿದ್ದಾರೆ.
ಮೊಳಕಾಲ್ಮುರು ಪಟ್ಟಣದ ಟಿಎಪಿಎಂಎಸ್ ಸೊಸೈಟಿ ಆವರಣದಲ್ಲಿ ಸೋಮವಾರ ಆಯ್ಕೆ ಸಭೆ ನಡೆಯಿತು.ಈ ವೇಳೆ ಅವಿರೋಧ ಆಯ್ಕೆ ಘೋಷಿಸಲಾಯಿತು.
ಕ್ಲಿಕ್ ಮಾಡಿ ಓದಿ: ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷರಾಗಿ ಮಹಡಿ ಶಿವಮೂರ್ತಿ ಅವಿರೋಧ ಆಯ್ಕೆ
ನಿರ್ದೇಶಕರಾಗಿ ವಿ.ವೇದಾವತಿ, ಸಿ.ರಂಜಿತಾ, ಎ.ಮಂಜುಳಾ, ಎ.ಟಿ.ಗುರುಶಾಂತಮ್ಮ, ಕೆ.ಸುನಂದಾ, ಪಿ.ಶ್ರುತಿ, ಆರ್.ಕೆ.ಗೌರಮ್ಮ, ಬಿ.ಟಿ.ಮನು, ಕೆ.ಎಂ.ಜಗದೀಶ್, ಎಂ.ಆರ್.ಚನ್ನಬಸಪ್ಪ, ಟಿ.ಎಂ.ರಾಜೇಶ್, ಜಿ.ಎಸ್.ಉಮಾಶಂಕರ್, ಎಂ.ಬಸವ ಕುಮಾರ್, ಜೆ.ಇ.ನಾಗರಾಜ್, ಎಚ್.ಎಂ.ರಾಜಶೇಖರ್, ಜಿ.ಎಸ್.ಸೋಮಶೇಖರ್, ಎನ್.ಚಂದ್ರಣ್ಣ, ಎ.ವಿಜಯ ಕುಮಾರ್, ಜಿ.ಉದಯ ಕುಮಾರ್, ಪಿ.ಕೆ.ರವಿಶಂಕರ್ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಶಿಕ್ಷಕ ಬಿ.ಎಸ್.ಮಂಜುನಾಥ್ ತಿಳಿಸಿದ್ದಾರೆ.
ಜುಲೈ 4 ರಿಂದ ಅಧ್ಯಕ್ಷರ ಆಯ್ಕೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಜುಲೈ 21ರಂದು ಮಹಾಸಭಾದ ರಾಜ್ಯ ಸಮಿತಿಗೆ ಚುನಾವಣೆ ನಡೆಯುತ್ತಿರುವ ಕಾರಣ ತಾಲ್ಲೂಕು ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಮುಂದಿನ 5 ವರ್ಷಕ್ಕೆ ಈ ಸಮಿತಿ ಅಸ್ಥಿತ್ವದಲ್ಲಿ ಇರಲಿದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
