ಮುಖ್ಯ ಸುದ್ದಿ
ನನಗೆ ನನ್ನ ಪತಿ ಬೇಕು | ಅವರ ಸಾವಿಗೆ ನ್ಯಾಯ ಕೊಡಿ | ರೇಣುಕಾಸ್ವಾಮಿ ಪತ್ನಿಯ ಆಕ್ರಂಧನ
Published on
CHITRADURGA NEWS | 11 JUNE 2024
ಚಿತ್ರದುರ್ಗ: ನನ್ನ ಪತಿ ಮನೆಯಿಂದ ಹೋಗುವಾಗ ಏನೂ ಹೇಳಿರಲಿಲ್ಲ, ಈಗ ನೋಡಿದರೆ ಅವರ ಹತ್ಯೆಯಾಗಿದೆ. ಈಗ ನಾನು ಹೇಗಿರಲಿ, ಮುಂದೇನು ಮಾಡಲಿ ಎಂದು ಕೊಲೆಯಾದ ರೇಣುಕಾಸ್ವಾಮಿ ಪತ್ನಿ ಸಹನಾ ಕಣ್ಣೀರಿಟ್ಟರು.
ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾವಿಬ್ಬರು ಮದುವೆಯಾಗಿ ಒಂದು ವರ್ಷವಾಗಿದೆ. ನಾನೀಗ ಗರ್ಭಿಣಿ. ನಾನು ಗರ್ಭಿಣಿ, ತಾಯಿಯಾಗುತ್ತಿದ್ದೇನೆ. ಆದರೆ, ಪತಿಯೇ ಇಲ್ಲ. ಅವರ ಸಾವಿಗೆ ನ್ಯಾಯ ಕೊಡಿಸಿ ಎಂದು ದುಃಖಿಸಿದರು.
ಇದನ್ನೂ ಓದಿ: ಮಧ್ಯಾಹ್ನ ಊಟ ಬೇಡ ಎಂದು ಹೇಳಿ ಹೋದ ಮಗ ಶವವಾಗಿ ವಾಪಾಸು | ರೇಣುಕಾಸ್ವಾಮಿ ಕೊಲೆಗೆ ಮರುಗಿದ ಚಿತ್ರದುರ್ಗ
ನನ್ನ ಪತಿ ರೇಣುಕಾಸ್ವಾಮಿ ದರ್ಶನ್ ಅವರ ಅಭಿಮಾನಿ ಆಗಿರಲಿಲ್ಲ. ಅವರು ತಪ್ಪು ಮಾಡಿದ್ದರೆ ಎಚ್ಚರಿಕೆ ಕೊಡಬೇಕಿತ್ತು. ಜೀವವನ್ನೇ ಯಾಕೆ ತೆಗೆದಿದ್ದಾರೆ. ನನಗೆ ನನ್ನ ಗಂಡ ಬೇಕು ಎಂದರು.
ಸಹನಾ ಅವರ ಮಾತುಗಳನ್ನು ಕೇಳುತ್ತಿದ್ದಂತೆ ನೆರೆದವರು ಕಣ್ಣಾಲಿಗಳು ತೇವಗೊಂಡವು.
Continue Reading
Related Topics:Actor Darshan, Bangalore, Challenging Star, Chitradurga, Kannada News, Murder Case, Renukaswamy, ಕನ್ನಡ ಸುದ್ದಿ, ಕೊಲೆ ಪ್ರಕರಣ, ಚಾಲೆಂಜಿಂಗ್ ಸ್ಟಾರ್, ಚಿತ್ರದುರ್ಗ, ನಟ ದರ್ಶನ್, ಬೆಂಗಳೂರು, ರೇಣುಕಾಸ್ವಾಮಿ
Click to comment