
ಚಿತ್ರದುರ್ಗ ನ್ಯೂಸ್.ಕಾಂ: ಬಹು ಸಂಸ್ಕೃತಿಯ ನೆಲೆಯಾದ ಬೃಹತ್ ಭಾರತ ದೇಶಕ್ಕೆ ಸಾಮಾಜಿಕ, ಕೌಟುಂಬಿಕ, ಧಾರ್ಮಿಕ, ರಾಜಕೀಯ, ಆಧ್ಯಾತ್ಮಿಕ ಮೌಲ್ಯಗಳನ್ನು ರೂಪಿಸಿದ ಮಹರ್ಷಿ ವಾಲ್ಮೀಕಿ ಭಾರತೀಯ ಸಂಸ್ಕೃತಿಯ ಹರಿಕಾರ ಎಂದು ಬೆಳಗಟ್ಟ ಶ್ರೀಗುರು ಕರಿಬಸವೇಶ್ವರ ಅಜ್ಜಯ್ಯ ಸ್ವಾಮಿ ಮಠದ ಸಂಸ್ಥಾಪಕ ಅಧ್ಯಕ್ಷರಾದ ಅಮ್ಮ ಮಹದೇವಮ್ಮ ಅಭಿಪ್ರಾಯಪಟ್ಟರು.
ಬೆಳಗಟ್ಟದಲ್ಲಿರುವ ಶ್ರೀ ಮಠದಲ್ಲಿ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾಡಿದರು.
ವಾಲ್ಮೀಕಿ ಮಹರ್ಷಿಗಳು ಆದರ್ಶ ರಾಜ, ಸತಿ, ಭಕ್ತ, ಸಹೋದರತ್ವದ ಮೌಲ್ಯಗಳ ನಿಧಿಗಳಾದ ರಾಮ, ಸೀತೆ, ಆಂಜನೇಯ, ಲಕ್ಷ್ಮಣ್, ಭರತ ಪಾತ್ರಗಳ ಮೂಲಕ ಉತ್ಕøಷ್ಟ ಭಾರತೀಯ ಸಂಸ್ಕೃತಿಯನ್ನು ಲೋಕಕ್ಕೆ ಸಾರಿದ ಮಹಾತ್ಮ ಎಂದು ತಿಳಿಸಿದರು.
ಇದನ್ನೂ ಓದಿ: ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಭವ್ಯ ಮೆರವಣಿಗೆ
ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ತಮ್ಮ ವಿಶೇಷ ಉಪನ್ಯಾಸದಲ್ಲಿ, ಮಹರ್ಷಿ ವಾಲ್ಮೀಕಿ ಅಮರ ಕವಿ. ವ್ಯಕ್ತಿ ಮತ್ತು ಸಮಾಜ ಹೇಗಿರಬೇಕೆಂಬ ನೀತಿಯ ಚೌಕಟ್ಟನ್ನು ರೂಪಿಸಿದ ಮಹಾ ಪುರುಷರು ಎಂದು ಬಣ್ಣಿಸಿದರು.
ಮಹರ್ಷಿ ವಾಲ್ಮೀಕಿ ಮನುಕುಲದ ದೀಪ. ಜ್ಞಾನದ ಬೆಳಕನ್ನು ಬಿತ್ತಿ ಬೆಳೆದ ಬೆಳೆಗಾರರು ಎಂದು ಅಭಿಪ್ರಾಯ ಪಟ್ಟರು.
ಶ್ರೀ ಮಠದ ಭಕ್ತರಾದ ಅನಿತಾ ಪ್ರಾರ್ಥನೆ ಸಲ್ಲಿಸಿದರು. ಅಪಾರ ಭಕ್ತರು ಹಾಗೂ ಗ್ರಾಮಸ್ಥರು ಹಾಜರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
