ಮುಖ್ಯ ಸುದ್ದಿ
Th. Ra. Subbaraya; ತರಾಸು ರಂಗಮಂದಿರ ನವೀಕರಣಕ್ಕೆ 80 ಲಕ್ಷ ಅನುದಾನ | ಸಚಿವ ಡಿ.ಸುಧಾಕರ್

CHITRADURGA NEWS | 02 SEPTEMBER 2024
ಚಿತ್ರದುರ್ಗ: ತರಾಸು(Th. Ra. Subbaraya) ರಂಗಮಂದಿರದಲ್ಲಿ ಅಗತ್ಯ ಇರುವ ರಂಗ ಚಟುವಟಿಕೆಗಳು ನಡೆಯಲು ನವೀಕರಣ ಹಾಗೂ ಬೆಳಕು, ದ್ವನಿ ವ್ಯವಸ್ಥೆ ಸರಿಪಡಿಸಲು 80 ಲಕ್ಷದ ಅನುದಾನ ನೀಡಲಾಗುವುದು ಎಂದು ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಭರವಸೆ ನೀಡಿದರು.
ಕ್ಲಿಕ್ ಮಾಡಿ ಓದಿ: Ex-CM: ಎಸ್.ನಿಜಲಿಂಗಪ್ಪ ಮನೆ ಖರೀಧಿಗೆ ಮುಂದಾದ ಕಾಂಗ್ರೆಸ್ | ಮನೆ ವೀಕ್ಷಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ ಸಂಜೆ ಲಂಕೇಶ್ ವಿಚಾರ ವೇದಿಕೆ, ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ನಾಡು ನುಡಿ ಬಳಗದ ಸಹಯೋಗದಲ್ಲಿ ಆಯೋಜಿಸಿದ್ದ ‘ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ’ ನಾಟಕ ಪ್ರದರ್ಶನ ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ರಂಗಭೂಮಿ ನಾಟಕ ಕಲೆ ನಶಿಸಿ ಹೋಗುತ್ತಿರುವ ಕಾಲಘಟ್ಟದಲ್ಲಿ ಇಂತಹ ಕಲೆ ಜೀವಂತವಾಗಿರಿಸಲು ಜನರ ಪ್ರೋತ್ಸಾಹ ಅತ್ಯಗತ್ಯ ಎಂದು ಅಭಿಪ್ರಾಯ ಪಟ್ಟರು.
ನಾವು ಚಿಕ್ಕವರಿದ್ದಾಗ ಸರ್ಕಸ್ ಸೇರಿದಂತೆ ನಾಟಕಗಳು ವ್ಯಾಪಕವಾಗಿ ಪ್ರದರ್ಶನ ಕಾಣುತ್ತಿದ್ದವು. ಬದಲಾದ ಕಾಲಘಟ್ಟದ ಸಂದರ್ಭದಲ್ಲಿ ರಂಗಭೂಮಿ ಚಟುವಟಿಕೆಗಳಿಗೆ ಪ್ರೇಕ್ಷಕರ ಹಾಗೂ ಜನಸಾಮಾನ್ಯರ ಪ್ರೋತ್ಸಾಹ ಬೇಕಾಗಿದೆ ಎಂದರು.
ಜೆಡಿಎಸ್ ರಾಜ್ಯ ಮುಖಂಡ ಬಿ. ಕಾಂತರಾಜ್ ನಾಟಕದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.
ಕ್ಲಿಕ್ ಮಾಡಿ ಓದಿ: Congress: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎದುರಿನಲ್ಲೇ ಕೈ ಕಾರ್ಯಕರ್ತರ ವಾಗ್ವಾದ
ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿದರು. ಕೋಡಿಹಳ್ಳಿ ಸಂತೋಷ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಧ್ಯಮ ಆಕಾಡೆಮಿ ಸದಸ್ಯ ಎಂ.ಎನ್. ಅಹೋಬಳಪತಿ ಅವರಿಗೆ ಅಭಿನಂದಿಸಲಾಯಿತು.
ಈ ವೇಳೆ ದಿನೇಶ್ ಗೌಡಗೆರೆ, ವಕೀಲ ದಾಸರಹಳ್ಳಿ ರಾಜು, ಕೃಷ್ಣ ದೇವರಾಯ ವಿವಿ ಸಿಂಡಿಕೇಟ್ ಸದಸ್ಯೆ ಕೆ. ಜೆ. ಜಯಲಕ್ಷ್ಮೀ, ದಾವಣಗೆರೆ ಅಪರ ಜಿಲ್ಲಾಧಿಕಾರಿ ಲೋಕೇಶ್, ಅಹೋಬಲ ಟಿವಿಎಸ್ ಶೋಂರೂಂ ಮಾಲೀಕ ಅರುಣ್ ಕುಮಾರ್, ಪತ್ರಕರ್ತ ವಿನಾಯಕ್ ತೊಡರನಾಳ್, ಪ್ರಕಾಶ್ ಯಾದಲಗಟ್ಟೆ ಉಪಸ್ಥಿತರಿದ್ದರು.
ರಾಜಶೇಖರ್ ಸ್ವಾಗತಿಸಿದರು. ಜಡೇಕುಂಟೆ ಮಂಜುನಾಥ್ ನಿರೂಪಿಸಿದರು.
