CHITRADURGA NEWS | 11 MARCH 2026
ಹೊಸದುರ್ಗ: ಕುಂಚಿಟಿಗರ ಮಠ ಮತ್ತು ಮಠಾಧೀಶರು ಜಾತ್ಯತೀತ ತತ್ವವನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಹೊಸದುರ್ಗ ಕನಕ ಗುರು ಪೀಠ ಶಾಖ ಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಸರ್ಕಾರಿ ಕಲಾ ಕಾಲೇಜಿನಲ್ಲಿ ಭಾರತೀಯ ಕಲೆ ಮತ್ತು ವಾಸ್ತುಶಿಲ್ಪ ಕುರಿತು ವಿಶೇಷ ಉಪನ್ಯಾಸ
ಹೊಸದುರ್ಗದ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದ ಆವರಣದಲ್ಲಿ ನಡೆದ ಸುಜ್ಞಾನ-ಸಂಗಮ, ಸರ್ವ ಸಮಾಜದ ಪದಾಧಿಕಾರಿಗಳಿಗೆ ಸನ್ಮಾನ ಹಾಗೂ ಅಧ್ಯಕ್ಷರಾದ ಕಲ್ಕೆರೆ ಶೇಖರಪ್ಪರವರ ಹುಟ್ಟು ಹಬ್ಬದ ನಿಮಿತ್ತ ನಡೆದ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು,
ಶಾಂತವೀರ ಶ್ರೀಗಳು ಶೂನ್ಯದಿಂದ ಶ್ರೀಮಠವನ್ನು ಆರ್ಥಿಕ ಸಬಲೀಕರಣ ಮಾಡಿ, ತನ್ನ ಜೊತೆ ಇರುವ ಇತರೆ ಸಮುದಾಯಗಳ ಏಳಿಗೆಗೆ ಕಳೆದ 15 ವರ್ಷಗಳಿಂದ ನೂರಾರು ಮಠಗಳ ಅಭಿವೃದ್ಧಿಗೆ ಸರ್ಕಾರಗಳಿಂದ ಅನುದಾನ, ಜಮೀನು ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ, ಹಿಂದುಳಿದ ಶೋಷಿತ ಸಮುದಾಯಗಳ ಗಟ್ಟಿ ಧ್ವನಿಯಾಗಿ ಕೆಲಸ ಮಾಡಿದ್ದಾರೆ.
ಕಳೆದ 15 ವರ್ಷಗಳಲ್ಲಿ 350 ಕೋಟಿಗೂ ಹೆಚ್ಚು ಹಣವನ್ನು ವಿವಿಧ ಮಠಗಳಿಗೆ ಕೊಡಿಸುವಲ್ಲಿ ಹಾಗೂ ಬೆಂಗಳೂರು ನಗರದಲ್ಲಿ 800 ಕೋಟಿ ಬೆಲೆಬಾಳುವ 53 ಎಕರೆ ಜಮೀನನ್ನು ಶೋಷಿತ ಸಮುದಾಯಗಳಿಗೆ ಕೊಡಿಸುವ ತಮ್ಮ ಕಾರ್ಯಕ್ಷಮತೆಯಲ್ಲಿ ಯಶಸ್ವಿಯಾಗಿದ್ದಾರೆ. ಅವರ ಗಟ್ಟಿ ನಿರ್ಧಾರ ಮತ್ತು ತಾಳ್ಮೆ ಎಲ್ಲಾ ಸರ್ಕಾರಗಳೊಂದಿಗೆ ಸಂಪರ್ಕ ಸೇತುವೆಯಾಗಿ ಸಾಧಿಸಿ ತೋರಿಸಿದ್ದಾರೆ.
ಇದನ್ನೂ ಓದಿ: ಅಂಬೇಡ್ಕರ್, ಬಾಬು ಜಗಜೀವನ್ ರಾಂ ಪ್ರಶಸ್ತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಅವರಲ್ಲಿ ಪಕ್ಷಾತೀತ ಜಾತ್ಯತೀತ ಮನೋಭಾವವನ್ನು ಕಾಣಬಹುದು.ಯಾವುದೇ ಮಠಾಧೀಶ ಸಂಕಷ್ಟದಲ್ಲಿದ್ದರೆ ತಕ್ಷಣ ತನ್ನ ಸಹೋದರರಂತೆ ಸ್ಪಂದಿಸುವ ಅವರ ಗುಣ ಇತರೆ ಮಠಾಧೀಶರಿಗೆ ಆದರ್ಶ. ಕೇವಲ ಆದರ್ಶದ ಮಾತುಗಳನ್ನು ಆಶೀರ್ವಚನದಲ್ಲಿ ನೀಡುವ ಸ್ವಾಮಿಗಳಿಗೆ ಅವರ ನಡವಳಿಕೆ ನಿರ್ಧಾರ ಸಹಾಯ ಮನೋಭಾವ ಅನುಕರಣೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು, ಶಾಂತವೀರ ಶ್ರೀಗಳು ಕಳೆದ 29 ವರ್ಷಗಳಿಂದ ಕುಂಚಿಟಿಗ ಸಮಾಜದ ಸಂಘಟನೆ ಮತ್ತು ಮಠದ ಅಭಿವೃದ್ಧಿಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ತಾವೊಬ್ಬರೇ ಬೆಳೆಯಬೇಕೆಂಬ ಸ್ವಾರ್ಥ ಮನೋಭಾವ ಅವರಲ್ಲಿ ಕಾಣುವುದಿಲ್ಲ. ತಮ್ಮೊಟ್ಟಿಗೆ ಇತರೆ ಸಮುದಾಯದ ಮಠಗಳು ಮತ್ತು ಮಠಾಧೀಶರ ಅಭಿವೃದ್ಧಿಯನ್ನು ಬಯಸುವ ಮಠಾಧೀಶರಾಗಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಭಗಿರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ಕುಂಚಿಟಿಗ ಸಮಾಜ ಜಗದ್ಗುರುಳಾಗಿ ಬಂದಂತಹ ಶಾಂತವೀರ ಶ್ರೀಗಳು ಸರ್ವ ಸಮಾಜದ ಜಗದ್ಗುರುಗಳಾಗಿ, ಸರ್ವ ಸಮಾಜದ ಮಠಾಧೀಶರೊಂದಿಗೆ, ಭಕ್ತಾದಿಗಳೊಂದಿಗೆ ಅತ್ಯಂತ ಆತ್ಮೀಯವಾಗಿ ಸರಳ ಸಜ್ಜನಿಕೆಯ ಅವರ ನಡವಳಿಕೆಯ ಮೂಲಕ ಮಠಾಧೀಶರ ಮತ್ತು ಭಕ್ತರ ಹೃದಯವನ್ನು ಗೆದ್ದಿದ್ದಾರೆ.
ಇದನ್ನೂ ಓದಿ: ಮತದಾರರ ಪಟ್ಟಿ ಮ್ಯಾಪಿಂಗ್ | ಮಾರ್ಚ್ 20ರ ಗಡುವು | ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ | ಡಿಸಿ
ಅವರಲ್ಲಿರುವ ತುಡಿತ ತಾನು ಬೆಳೆಯಬೇಕು. ತನ್ನೊಟ್ಟಿಗೆ ಎಲ್ಲರೂ ಬೆಳೆಯಬೇಕೆಂಬ ಅದಮ್ಯ ಅಪೇಕ್ಷೆ. ಕಳೆದ 28 ವರ್ಷಗಳಿಂದ ಅತ್ಯಂತ ಸಮೀಪದಿಂದ ನೋಡಿದ್ದೇವೆ. ಅವರ ಆದರ್ಶದ ನಡವಳಿಕೆಯ ಮೂಲಕ ಹಿಂದುಳಿದ ದಲಿತ ಮಠಾಧೀಶ್ವರರ ದಿವ್ಯಶಕ್ತಿಯಾಗಿ, ಯಾವುದೇ ಸರ್ಕಾರ ಬಂದರೂ ನಮ್ಮೆಲ್ಲರಿಗೂ ಅನುದಾನ ಜಮೀನು ಹಾಗೂ ಶ್ರೀಮಠದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅವರ ತ್ಯಾಗ ನಿರಂತರ ಶ್ರಮ.
ಎಲ್ಲ ಮಠಗಳಿಗೆ ಮತ್ತು ಮಠಾಧೀಶರಿಗೆ ತಾವು ಸಹಾಯ ಮಾಡಿದ್ದನ್ನು ಹೇಳಿಕೊಳ್ಳದೆ ಸಹಾಯದ ಹಸ್ತ ಚಾಚುವ ಮಠಾಧೀಶರು ನಮ್ಮೊಂದಿಗಿರುವುದು ಸಂತಸದ ವಿಚಾರ. ಸಂಘಟನೆಯ ನೆಲೆ ಇಲ್ಲದ ಸಮಾಜಕ್ಕೆ ಸಂಘಟನೆಯ ಸ್ವರೂಪ ನೀಡಿ, ಸಮಾಜವನ್ನು ಸಾಂಸ್ಕೃತಿಕವಾಗಿ ಸಂಸ್ಕಾರ ನೀಡಿ ಆರ್ಥಿಕ ಸಬಲೀಕರಣದತ್ತ ಕೊಂಡೊಯ್ಯುವ ಮೂಲಕ ಒಬ್ಬ ರೈತನಾಗಿ, ಹೋರಾಟಗಾರನಾಗಿ, ಮಾತೃ ಹೃದಯ ಆಗಿರುವುದು ಹೆಮ್ಮೆಯ ವಿಷಯ ಎಂದರು.
ಮುಸ್ಲಿಂ ಸಮಾಜದ ಅಧ್ಯಕ್ಷರಾದ ಮುನ್ನ ಮಾತನಾಡಿ, ಶಾಂತವೀರ ಸ್ವಾಮೀಜಿ ಸೌಹಾರ್ದತೆ ಸಹಬಾಳ್ವೆ ಹೇಗೆ ನಡೆಸಬೇಕೆಂದು ನಮ್ಮೆಲ್ಲರಿಗೂ ದಾರಿದೀಪವಾಗಿದ್ದಾರೆ. ಅವರನ್ನು ಕಳೆದ 23 ಮೂರು ವರ್ಷಗಳಿಂದ ತುಂಬಾ ಹತ್ತಿರದಿಂದ ನೋಡುತ್ತಿದ್ದೇವೆ. ಎಲ್ಲರನ್ನೂ ಒಪ್ಪಿಕೊಳ್ಳುವ, ಎಲ್ಲರೊಂದಿಗೆ ಬೆರೆಯುವವರ ಗುಣ, ಸರ್ವರಿಗೂ ಆದರ್ಶಪ್ರಾಯವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಮಾಜಿ ಸಚಿವ ಎಚ್.ಆಂಜನೇಯ ಪತ್ರ | ಪತ್ರದ ಸಾರಾಂಶ ಇಲ್ಲಿದೆ
ಸಮಾರಂಭದಲ್ಲಿ ಕುಂಚಿಟಿಗ ಸಮಾಜದ ಅಧ್ಯಕ್ಷರಾದ ಕಲ್ಕೆರೆ ಶೇಖರಪ್ಪ ಮತ್ತು ಕುಟುಂಬದವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಜೈನ, ಮುಸ್ಲಿಂ, ಬ್ರಾಹ್ಮಣ, ವೈಶ್ಯ, ರೆಡ್ಡಿ, ಕಮ್ಮ, ಹಡಪದ, ಕುರುಬ, ನೂಳಂಬ ವೀರಶೈವ, ಸಾಧು ವೀರಶೈವ., ಜಂಗಮ ಸಮಾಜ, ಮಡಿವಾಳ, ಆರ್ಯವೈಶ್ಯ, ಕುಂಬಾರ, ಮಾದರ, ಭೋವಿ, ಚಲವಾದಿ, ಕೊರಚ, ಕೊರಮ ಸರ್ವ ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು. ಜೊತೆಗೆ ತಾಲೂಕಿನ 65 ಹಳ್ಳಿಗಳ ಪ್ರಮುಖರಿಗೆ ಸನ್ಮಾನಿಸಲಾಯಿತು.
ಶಾಂತವೀರ ಶ್ರೀಗಳು, ಬಿಜೆಪಿ ಮುಖಂಡ ಬಿ.ಸಿ.ಹನುಮಂತೇಗೌಡ, ಮುಖಂಡರಾದ ಲಿಂಗಮೂರ್ತಿ, ಹನುಮಂತಗೌಡ, ಕಲ್ಲೇಶಪ್ಪ, ದ್ಯಾಮಣ್ಣ, ತಮ್ಮಣ್ಣ, ತಣಿಗೇಕಲ್ಲು ಲೋಕಣ್ಣ, ಕೋಡಿಹಳ್ಳಿ ದರಣಪ್ಪ, ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸ್, ಎಸ್. ಕೆ.ಮಂಜು, ಬುಕ್ಕಸಾಗರ ರವಿ, ದೊಡ್ಡಘಟ್ಟದ ಮಹಾಂತೇಶ್, ಮಹೇಶ್ ಸಂಗಮ ಸೇರಿದಂತೆ ಕುಂಚಿಟಿಗ ಸಮಾಜದ ಪದಾಧಿಕಾರಿಗಳು ಭಾಗವಹಿಸಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
