CHITRADURGA NEWS | 06 JUNE 2025
ಚಿತ್ರದುರ್ಗ: ಸೀಬಾರ ಬಳಿಯಿರುವ ಮುರುಘಾ ಮಠದ 25 ಎಕರೆ ಜಾಗದಲ್ಲಿ ತೋಟ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
ವಿಶ್ವ ಪರಿಸರ ದಿನಾಚರಣೆ ವೇಳೆ ಮುರುಘಾ ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಇದನ್ನೂ ಓದಿ: ಮುರುಘಾ ಮಠದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ | 5 ಅಂತರ್ಜಾತಿ ಸೇರಿ 26 ಜೋಡಿಗಳು ದಾಂಪತ್ಯಕ್ಕೆ ಪದಾರ್ಪಣೆ
ಸೀಬಾರ ಸಣ್ಣ ಗುರುಪಾದ ಸ್ವಾಮಿಗಳು ನೆಲೆಸಿರುವ ಸ್ಥಳ. ಈ ಸ್ಥಳದಲ್ಲಿ 25 ಎಕರೆ ಭೂಮಿ ಇದೆ. ಇಲ್ಲಿ 5 ಬೋರ್‌ವೆಲ್ ಕೊರೆಸಲಾಗಿದ್ದು, ಎಲ್ಲ ಕೊಳವೆ ಬಾವಿಗಳಲ್ಲೂ 4 ಇಂಚು ನೀರು ಸಿಕ್ಕಿದೆ.
ಮುಂದಿನ ದಿನಗಳಲ್ಲಿ ಚಿತ್ರದುರ್ಗ ಸುತ್ತಾಮುತ್ತಾ ಮುರುಘಾ ಮಠದಿಂದ 200 ಎಕರೆಯಷ್ಟು ವಿಸ್ತೀರ್ಣದ ತೋಟ ಮಾಡುವ ಚಿಂತನೆ ಇದೆ ಎಂದು ಶ್ರೀಗಳು ಹೇಳಿದ್ದಾರೆ.
ಇದನ್ನೂ ಓದಿ: ಭೀಮಸಮುದ್ರ ಸೇರಿ ವಿವಿಧ ಅಡಿಕೆ ಮಾರುಕಟ್ಟೆಗಳ ಧಾರಣೆ
ಅಡಿಕೆ, ತೆಂಗಿನ ತೋಟ ನಿರ್ಮಾಣಕ್ಕೆ ಆಸಕ್ತಿ ತೋರಿದ್ದು, ಇಂದಿನಿಂದ ಸಸಿ ನೆಡುವ ಕಾರ್ಯ ಪ್ರಾರಂಭವಾಗಲಿದೆ.
ಮುರುಘಾ ಮಠ ಹಾಗೂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ ಮಾತನಾಡಿ, ಬರಡು ಭೂಮಿಯನ್ನು ಉತ್ತಮ ತೋಟ ಮಾಡಲು ಕ್ರಮ ವಹಿಸಲಾಗಿದೆ. ಪರಿಸರ ನಾಶವಾಗದಂತೆ ಹಸಿರು ಹಸಿರಾಗೇ ಉಳಿಯುವಂತೆ ಸರ್ಕಾರಗಳು ಅನೇಕ ಯೋಜನೆ ಮಾಡಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಇದನ್ನೂ ಓದಿ: ವಿದ್ಯಾರ್ಥಿ ಬಸ್ ಪಾಸ್ ವಿತರಣೆ | ಎಲ್ಲೆಲ್ಲಿ ಅರ್ಜಿ ಸಲ್ಲಿಸಬಹುದು, ಇಲ್ಲಿದೆ ಮಾಹಿತಿ…
ಶ್ರೀ ಬಸವ ಮಾದಾರ ಚೆನ್ನಯ್ಯ ಸ್ವಾಮಿಗಳು ಮಾತನಾಡಿದರು. ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಶ್ರೀ ಬಸವಚೇತನ ಸ್ವಾಮಿಗಳು, ಶ್ರೀ ಬಸವ ನಾಗಿದೇವ ಸ್ವಾಮಿಗಳು, ಶ್ರೀಮಠದ ಆಡಳಿತ ಮಂಡಳಿ ಸದಸ್ಯ ಎಸ್.ಎನ್. ಚಂದ್ರಶೇಖರ್, ಕೃಷ್ಣಮೂರ್ತಿ, ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಸಿಇಓ ಎಂ.ಸಿ. ರಘುಚಂದನ್, ಉಪಅರಣ್ಯ ಸಂರಕ್ಷಣಾಧಿಕಾರಿ ಹರೀಶ್ ಕೆ., ವಲಯ ಅರಣ್ಯಾಧಿಕಾರಿ ಉಷಾರಾಣಿ, ಮಹಂತೇಶ್ ಎಸ್., ಕಾರ್ತಿಕ್, ರಾಘವೇಂದ್ರ, ವಕೀಲರಾದ ಫಾತ್ಯರಾಜನ್, ಎಸ್.ವಿ. ನಾಗರಾಜಪ್ಪ ಸಿದ್ದಾಪುರ, ಕೆಇಬಿ ಷಣ್ಮುಖಪ್ಪ, ಗುತ್ತಿನಾಡು ಪ್ರಕಾಶ್ ಮೊದಲಾದವರಿದ್ದರು.
ಇದನ್ನೂ ಓದಿ: ಸಾಹಿತ್ಯ ಕೃತಿಗಳಿಗೆ ಬಹುಮಾನ | ಅರ್ಜಿ ಅಹ್ವಾನ
ಉಮೇಶ್ ಪತ್ತಾರ್ ಪ್ರಾರ್ಥಿಸಿದರು. ಶಿಕ್ಷಕಿ ಅನಿತಾ ನಿರೂಪಿಸಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
