
CHITRADURGA NEWS | 05 JUNE 2025
ಚಿತ್ರದುರ್ಗ: 2025-26ನೇ ಸಾಲಿನ ಶಾಲಾ ಮತ್ತು ಪದವಿ ಪೂರ್ವ ಕಾಲೇಜುಗಳು ಆರಂಭವಾಗಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ರಿಯಾಯಿತಿ ದರದ ವಿದ್ಯಾರ್ಥಿ ಬಸ್ ಪಾಸ್ ಪಡೆಯಲ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಜೂನ್ 02 ರಿಂದಲೇ ಬಸ್ ಪಾಸ್‌ಗಳನ್ನು ವಿತರಣೆ ಮಾಡಲಾಗುವುದು.
Also Read: ಇಂದಿರಾ ಕ್ಯಾಂಟೀನ್ ಊಟದ ಮೆನು ವ್ಯತ್ಯಾಸ | ಹೆಚ್ಚುವರಿ ಹಣ | ಪರಿಶೀಲಿಸಿ ಅಮಾನತು ಸಚಿವ ರಹೀಂ ಖಾನ್

ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ. ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ರೂ.30 ಸೇವಾ ಶುಲ್ಕ ಪಾವತಿಸಬೇಕು.
ಅಗತ್ಯ ಇರುವ ವಿದ್ಯಾರ್ಥಿಗಳು ಸೇವಾ ಸಿಂಧು ಪೊರ್ಟಲ್ https://sevasindhuservices.
ವಿದ್ಯಾರ್ಥಿಗಳು ಅನುಮೋದನೆಗೊಂಡ ಪಾಸುಗಳನ್ನು ಪಡೆಯವ ಕೌಂಟರ್ ಹೆಸರು ವಿಳಾಸವನ್ನು ಅರ್ಜಿಯಲ್ಲಿ ನಮೂದಿಸಿದ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್ ಮೂಲಕ ಕಳುಹಿಸಲಾಗುವುದು. ಪಾಸು ಶುಲ್ಕವನ್ನು ನಗದು, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಯು.ಪಿ.ಐ ಮೂಲಕ ಪಾವತಿಸಿಬಹದು.
ಸರ್ಕಾರ ಶಕ್ತಿ ಯೋಜನೆಯಡಿ ಎಲ್ಲಾ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿದೆ. ಗಡಿಭಾಗದ ಮಾರ್ಗಗಳಲ್ಲಿ ವಿದ್ಯಾರ್ಥಿನಿಯರು ಬಸ್ ಪಡೆಯುವುದು ಅಗತ್ಯವಿದೆ.
Also Read: ಮುಖ ಸ್ವಚ್ಛಗೊಳಿಸಲು ತೆಂಗಿನ ಎಣ್ಣೆಯೊಂದಿಗೆ ಇದನ್ನು ಬೆರೆಸಿ ಹಚ್ಚಿ
ಸೇವಾ ಸಿಂಧು ಪೋರ್ಟ್ಲ್‌ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಸಂಬ0ಧಿಸಿದಂತೆ ದೂರವಾಣಿ ಸಂಖ್ಯೆ 080-24410574, ಇ ಮೇಲ್ ವಿಳಾಸ sevasindhu@karnataka.gov.ಇನ್, ಕಾರ್ಡ್ ಮುದ್ರಣ ಮತ್ತು ವಿತರಣೆಗೆ ಸಂಬಧಿಸಿದ ವಿಷಯಕ್ಕೆ ದೂರವಾಣಿ ಸಂಖ್ಯೆ 080-49203888 ಮೊಬೈಲ್ ಸಂಖ್ಯೆ 8904085030, ಈ ಮೇಲ್ onehelpdesk@karnataka.gov.in ಹಾಗೂ ಕ.ರಾ.ರ.ಸಾ.ನಿಗಮದ ಕಾಲ್ ಸೆಂಟ್‌ರ್ ದೂರವಾಣಿ ಸಂಖ್ಯೆ 080-26252625 ಇ-ಮೇಲ್ callcenter@ksrtc.org ಎಂದು ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
