
CHITRADURGA NEWS | 05 JUNE 2025
ಚಿತ್ರದುರ್ಗ: ತಂಬಾಕು ಸೇವನೆಯಿಂದ ವಿಶ್ವದಾದ್ಯಂತ ಪ್ರತಿ ವರ್ಷ 60 ಲಕ್ಷಕ್ಕಿಂತ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆಂದು ಎಂದು ಡಾ.ಶ್ರೀನಿವಾಸ ಹೇಳಿದರು.
Also Read: ದ್ವಿತೀಯ PUC ಪರೀಕ್ಷೆ-3 ಜೂನ್ 9 ರಿಂದ 20ರವರೆಗೆ | ಜಿಲ್ಲೆಯ 06 ಪರೀಕ್ಷಾ ಕೇಂದ್ರಗಳಲ್ಲಿ 8658 ವಿದ್ಯಾರ್ಥಿಗಳು


ಜಿ.ಆರ್.ಹಳ್ಳಿ ಸ್ನಾತಕೋತ್ತರ ಕೇಂದ್ರದ ಜ್ಞಾನ ಗಂಗೋತ್ರಿಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಮತ್ತು ಕ್ಷಯರೋಗ ನಿಯಂತ್ರಣ ಕಛೇರಿ ಹಾಗೂ ಜಿಲ್ಲಾರಕ್ತ ನಿಧಿ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2 ಇವರ ಸಹಯೋಗದೊಂದಲ್ಲಿ ಆಯೋಜಿಸಲಾದ ಮಲೇರಿಯಾ ಮಾಸಚರಣೆ, ಕೋವಿಡ್-19 ಬಗ್ಗೆ ಅರಿವು, ರಕ್ತದಾನ ಶಿಬಿರ ಮತ್ತು ತಂಬಾಕು ನಿಯಂತ್ರಣ ಕುರಿತು, ಹಾಗೂ ಜಾಗೃತಿ ಮತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ, ತಂಬಾಕಿನಲ್ಲಿರುವ ನಿಕೋಟಿನ್ ಎಂಬ ಮಾದಕ ವಸ್ತು ವ್ಯಸನವಾಗಿಸುತ್ತದೆ. ಎಂಬ ಕಟು ಸತ್ಯಅರ್ಥ ಮಾಡಿಕೊಳ್ಳಬೇಕು. ಹದಿ ಹರೆಯದವರು ತಂಬಾಕು ಉತ್ಪನ್ನಗಳನ್ನು ಸೇವನೆ ಮಾಡಲು ನೇರ ಹಾಗೂ ಪರೋಕ್ಷವಾಗಿ ಜಾಹಿರಾತುಗಳು ಉತ್ತೇಜನ ನೀಡುತ್ತವೆ.
ಸಾಮಾನ್ಯವಾಗಿ 18 ವಯಸ್ಸಿನಿಂದ ಯುವಕರು ತಂಬಾಕು ಉತ್ಪನ್ನ ಸೇವನೆಯನ್ನು ಆರಂಭಿಸುವುದಾಗಿ ಅಂದಾಜಿಸಲಾಗಿದೆ. ಧೂಮಪಾನ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮಕ ಬೀರುವುದರೊಂದಿಗೆ ಕ್ಯಾನ್ಸರ್ , ಹೃದಯ ಶ್ವಾಸ ಸಂಬಂಧಿ ಇತ್ಯಾದಿ ಕಾಯಿಲೆಗಳು ಬರುತ್ತವೆ ಎಂದರು.
Also Read: ಇಂದಿರಾ ಕ್ಯಾಂಟೀನ್ ಊಟದ ಮೆನು ವ್ಯತ್ಯಾಸ | ಹೆಚ್ಚುವರಿ ಹಣ | ಪರಿಶೀಲಿಸಿ ಅಮಾನತು ಸಚಿವ ರಹೀಂ ಖಾನ್
ಡಾ.ನಂದಿನಿಯವರು ಮಾತಾನಾಡಿ ಮಲೇರಿಯ ನಿಯಂತ್ರಣದಲ್ಲಿ ಸಮುದಾಯದ ಸಹಭಾಗಿತ್ವ ಅತೀ ಮುಖ್ಯವಾಗಿರುತ್ತದೆಯೆಂದು ತಿಳಿಸಿದರು. ಯಾವುದೇ ಜ್ವರ ಮಲೇರಿಯ ಆಗಿರಬಹುದು ಶೀಘ್ರ ಪತ್ತೆ ಮಾಡುವುದರಿಂದ ಸಂಪೂರ್ಣ ಚಿಕಿತ್ಸೆಯಿಂದ ತಡೆಯಬಹುದು.
ಸೊಳ್ಳೆಗಳ ನಿಯಂತ್ರಣ ಕ್ರಮಗಳ, ಜೈವಿಕ ಪರಿಸರ ನಿಯಂತ್ರಣ ಕ್ರಮಕೈಗೊಳ್ಳುವುದು ಸ್ವಯಂರಕ್ಷಣಾ ವಿಧಾನಗಳನ್ನು ಬಳಸುವುದು ಪರಿಸರ ನೈರ್ಮಲ್ಯ ಕಾಪಾಡುವುದು ಗ್ರಾಮ ಪಂಚಾಯಿತಿ ಸದಸ್ಯರು, ಸ್ಥಳಿಯ ಮುಖಂಡರು ಆರೋಗ್ಯ ಕಾರ್ಯಕರ್ತರೊಡನೆ ಸಹಕರಿಸಿ, ಮಲೇರಿಯಾ ನಿಯಂತ್ರಣ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಮಲೇರಿಯಾ ನಿಯಂತ್ರಣ ಖಂಡಿತ ಸಾಧ್ಯವೆಂದು ತಿಳಿಸಿದರು.
ಡಾ. ರವೀಂದ್ರಎಸ್ ಪಿ ಇವರು ಮಾತಾನಾಡಿ, ಯಾವುದೇ ಜ್ವರ ಮತ್ತಿತರೆ ಖಾಯಿಲೆಗಳನ್ನು ಶೀಘ್ರದಲ್ಲಿ ಪತ್ತೆ ಮಾಡಿ ನಿಯಂತ್ರಣ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಹಾಗೂ ಉತ್ತಮ ಆಹಾರ ಸೇವನೆ, ವ್ಯಾಯಾಮಗಳಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದೆಂದು ತಿಳಿಸಿದರು. ಕೋವಿಡ್ -19 ನಿಯಂತ್ರಣಕ್ಕಾಗಿ ಮಾಸ್ಕ್, ಕೈಗಳನ್ನು ಶುಚಿಯಾಗಿಟ್ಟುಕೊಳ್ಳವುದು ಸ್ಯಾನಿಟೈಜರ್ ಬಳಸುವುದು ಇದರಿಂದಾಗಿ ನಿಯಂತ್ರಣ ಮಾಡಬಹುದೆಂದು ತಿಳಿಸಿದರು.
ಕನ್ನಡ ಅಧ್ಯಯನ ವಿಭಾಗದ ಡಾ.ವಿಜಯಕುಮಾರ್.ಹೆಚ್.ಜಿ ಅಧ್ಯಕ್ಷೀಯ ಭಾಷಣದಲ್ಲಿ ಸ್ನಾತಕೋತ್ತರ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳಿಗೆ, ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಗಮನ ಹರಿಸಬೇಕು. ಕುಟುಂಬದ ಸದಸ್ಯರ ಆರೋಗ್ಯ ಕಾಪಾಡುವಲ್ಲಿ ಮಹಿಳೆಯರಿಗೆ ಹೆಚ್ಚಿನ ಜವಾಬ್ದಾರಿಯು ಇರುತ್ತದೆ ತಿಳಿಸಿದರು.
Also Read: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಸ್ನಾತಕೋತ್ತರ ಕೇಂದ್ರದ ಎಲ್ಲಾ ಅಧ್ಯಯನ ವಿಭಾಗದ ಎನ್‌ಎಸ್‌ಎಸ್ ವಿದ್ಯಾರ್ಥಿ, ವಿದ್ಯಾರ್ಥಿನಿಯರು ರಕ್ತದಾನವನ್ನು ಮಾಡಿದರು.
ರಸಾಯನಶಾಸ್ತ್ರ ಅಧ್ಯಯನ ವಿಭಾಗದ ಡಾ.ರಾಜೇಂದ್ರ ಪ್ರಸಾದ್, ಜಿ ಆರ್ ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಡಾಗೀತಾಂಜಲಿ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ನಿವೇದಿತ.ಬಿ.ಟಿ, ಡಾ.ಸುಂದರಂ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
