CHITRADURGA NEWS | 23 MAY 2025
ಚಿತ್ರದುರ್ಗ: ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಬಸವೇಶ್ವರ ಸಭಾಂಗಣದಲ್ಲಿ ಶ್ರೀ ಮುರುಘಾಮಠ ಹಾಗೂ ರಾಷ್ಟ್ರೀಯ ಯೋಗ ಶಿಕ್ಷಣ ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಉಚಿತ ಯೋಗ, ಪ್ರಾಣಾಯಾಮ ನಿರಂತರ ತರಗತಿ ಹಮ್ಮಿಕೊಳ್ಳಲಾಗಿದೆ.
Also Read: ಮೆಟ್ರಿಕ್ ನಂತರ ಮತ್ತು ಪೂರ್ವ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

ಈ ವೇಳೆ ಉಚಿತ ಯೋಗ ಪ್ರಾಣಾಯಾಮ ನಿರಂತರ ತರಗತಿ ಉದ್ಘಾಟನಾ ಸಮಾರಂಭದಲ್ಲಿ ಡಾ.ಬಸವಕುಮಾರ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಒಮ್ಮೊಮ್ಮೆ ನಾವು ಜೀವನದಲ್ಲಿ ಯಾವುದನ್ನು ಅಮುಖ್ಯ ಎಂದು ಪರಿಗಣಿಸುತ್ತೇವೆಯೋ ಅವು ಒಂದು ಕಾಲಕ್ಕೆ ಮುಖ್ಯವಾಗುವುದು ಶತಸಿದ್ಧ. ಅದರಲ್ಲಿ ಆರೋಗ್ಯದ ಬಗೆಗಿನ ಕಾಳಜಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ನಮ್ಮ ನಿತ್ಯದ ಜೀವನ ಕ್ರಮದಲ್ಲಿ ಒಂದು ಗಂಟೆಯಾದರೂ ನಮ್ಮ ದೇಹಾರೋಗ್ಯದ ಕಡೆಗೆ ಗಮನಹರಿಸಿದರೆ ಒಂದಷ್ಟು ಸುಸ್ಥಿತಿಯಲ್ಲಿರಿಸಿಕೊಳ್ಳಲು ಸಾಧ್ಯವಿದೆ. ನಿರಂತರ ಯೋಗ ಅದು ಬದ್ಧತೆಯಿಂದ ಕೂಡಿರಬೇಕು. ಈಗಿನ ಪರಿಸ್ಥಿತಿ ನೋಡಿದರೆ ಪ್ರಪಂಚದ ಮುಂದಿನ ಜಮಾನ ಯೋಗದ ಜಗತ್ತಾಗಿ ಪರಿಣಮಿಸುವ ಮೂಲಕ ಎಲ್ಲರೂ ಯೋಗದ ಕಡೆಗೆ ಮುಖ ಮಾಡುವಂತಾದರೆ ಅಚ್ಚರಿಪಡುವಂತಿಲ್ಲ.
ಆರೋಗ್ಯ ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಸಮಾಜದ ಸ್ವಾಸ್ತ್ಯವನ್ನು ಕಾಪಿಟ್ಟುಕೊಳ್ಳಬೇಕಿದೆ. ಆರೋಗ್ಯ ಸುಧಾರಣೆಯ ಮೂಲಕ ಆರೋಗ್ಯವಂತ ಸಮಾಜಕ್ಕೆ ನಾವು ಸಹಕರಿಸಬೇಕಾಗಿದೆ ಎಂದರು.
Also Read: ರೈತರ ಮಕ್ಕಳಿಗೆ ಉಚಿತ 10 ತಿಂಗಳು ತೋಟಗಾರಿಕೆ ತರಬೇತಿ | ಅರ್ಜಿ ಆಹ್ವಾನ
ಶ್ರೀಮಠದ ಮೂಲಕ ರಾಷ್ಟ್ರೀಯ ಯೋಗ ಶಿಕ್ಷಣ ಸಂಸ್ಥೆಯವರು ಉಚಿತವಾಗಿ ಯೋಗ ನಡೆಸಿಕೊಡುವ ಈ ಕ್ರಮವನ್ನು ಎಲ್ಲರೂ ಪಡೆಯಿರಿ.
ಜಿಲ್ಲಾ ಆಯುಷ್ ಇಲಾಖೆ ವೈದ್ಯಾಧಿಕಾರಿ ಡಾ.ಟಿ. ಶಿವಕುಮಾರ್ ಮಾತನಾಡಿ, ನೂರಾರು ಸಮಸ್ಯೆಗಳಿದ್ದರೆ ಅದಕ್ಕೆ ನಾವು ಪರಿಹಾರ ಕಂಡುಕೊಳ್ಳಬಹುದು. ಆದರೆ ದೇಹಕ್ಕೆ ಒಂದೇ ಒಂದು ಜಾಡ್ಯ ಬಂತೆ0ದರೆ ಅದರ ಕಡೆಗೆ ನಮ್ಮ ಚಿಂತೆ ಇರುತ್ತದೆ. ದೇಹ ಗಟ್ಟಿಯಾಗಿದ್ದರೆ ಮಾತ್ರ ಏನಾದರೂ ಸಾಧನೆ ಸಾಧ್ಯ. ಸದೃಢ ದೇಹ ಸಂಪಾದಿಸಲು ಯೋಗದಿಂದ ಸಾಧ್ಯವಿದೆ.
ಶಾರೀರಿಕ ಸಮತೋಲನ ಜೊತೆಗೆ ಮಾನಸಿಕ ಒತ್ತಡಕ್ಕೂ ಇದು ಸಹಕಾರಿಯಾಗುವ ಹಾಗೆಯೇ ಸರಿಯಾದ ಆಹಾರ, ನಿದ್ರೆ, ಇತ್ಯಾದಿ ಉಪಕ್ರಮಗಳಿಂದ ಉತ್ತಮವಾದ ಆರೋಗ್ಯ ಸಂಪಾದಿಸಲು ಸಾಧ್ಯವಿದೆ ಎಂದು ಹೇಳಿದರು.
Also Read: ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ನಿರ್ದೋಷಿ | ಚಿತ್ರದುರ್ಗ ನ್ಯಾಯಾಲಯದಿಂದ ತೀರ್ಪು
ಜಿಲ್ಲೆಯ ಯೋಗಾಚಾರ್ಯ ಎಂದೇ ಖ್ಯಾತರಾಗಿರುವ ಎಲ್.ಎಸ್. ಚಿನ್ಮಯಾನಂದ ಮಾತನಾಡಿ, ಆನಂದ ಅನ್ನುವುದು ಯಾವುದೇ ಭೌತಿಕ ವಸ್ತುಗಳಲ್ಲಿಲ್ಲ ಬದಲಿಗೆ ಆರೋಗ್ಯದಲ್ಲಿದೆ. ಅದನ್ನು ಸಂಪಾದಿಸಿದರೆ ಎಲ್ಲವನ್ನು ಸಂಪಾದಿಸಬಹುದು. ಯಾರ ಬಲವಂತಕ್ಕೆ ಯೋಗ ಮಾಡದೆ ವೈಯಕ್ತಿಕ ಹಿತಾಸಕ್ತಿಗೆ ಮಾಡಿ ಎಂದು ಸಲಹೆ ನೀಡಿದರು
ಕಡ್ಲೆಗುದ್ದು ಪ್ರೌಢಶಾಲೆಯ ಮುಖ್ಯಶಿಕ್ಷಕ ಕೆ.ಎನ್.ಮಹೇಶ್, ಅಮೃತ ಆಯುರ್ವೇದ ಮೆಡಿಕಲ್ ಕಾಲೇಜಿನ ಉಪನ್ಯಾಸಕ ಭರಮಸಾಗರ ತಿಪ್ಪೇಸ್ವಾಮಿ ಎಂ. ಮಾತನಾಡಿದರು.
ಈ ಸಂದರ್ಭದಲ್ಲಿ ಉಚಿತ ಯೋಗ ತರಗತಿ ನಡೆಸಿಕೊಡುವ ರಾಷ್ಟ್ರೀಯ ಯೋಗ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಎಂ.ಆರ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬಸವರಾಜ್ ಎಲ್.ಎಸ್. ಉಪಸ್ಥಿತರಿದ್ದರು.
Also Read: RCB ಗೆಲುವಿಗಾಗಿ ಅಭಿಮಾನಿಯಿಂದ ಸೈಕಲ್ ಯಾತ್ರೆ
ನಾಳೆಯಿಂದ ಪ್ರತಿ ದಿನ ಬೆಳಗ್ಗೆ 5.45 ಗಂಟೆಯಿಂದ ಶ್ರೀ ಮುರುಘಾಮಠದ ಬಸವೇಶ್ವರ ಸಭಾಂಗಣದಲ್ಲಿ ಯೋಗ ತರಗತಿಗಳು ಆರಂಭವಾಗಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
