
CHITRADURGA NEWS | 07 AUGUST 2025
ಚಿತ್ರದುರ್ಗ: ಜಿಲ್ಲೆಯ ಜೀವನಾಡಿ ವಾಣಿವಿಲಾಸ ಸಾಗರ ಜಲಾಶಯದ ಒಳಹರಿವು ಮುಂದುವರೆದಿದೆ.
ಆಗಸ್ಟ್ 7 ರಂದು ಬೆಳಗ್ಗ 8 ಗಂಟೆಗೆ ನಡೆಸಿದ ಮಾಪನದ ವೇಳೆ ಜಲಾಶಯಕ್ಕೆ 1150 ಕ್ಯೂಸೆಕ್ ನೀರು ಹರಿದು ಬಂದಿದೆ.

ಇದನ್ನೂ ಓದಿ: ಮಂಗಳವಾರವೂ ಜಿಲ್ಲೆಯಲ್ಲಿ ಭರ್ಜರಿ ಮಳೆ | ಯಾವ ಊರಿನಲ್ಲಿ ಎಷ್ಟು ಮಿ.ಮೀ
ಇಂದು ಹರಿದು ಬಂದ ನೀರೆಷ್ಟು ?
135 ಅಡಿ ಎತ್ತರದ, 30 TMC ಸಾಮರ್ಥ್ಯದ ವಾಣಿವಿಲಾಸ ಸಾಗರ ಜಲಾಶಯದಲ್ಲಿ ಆಗಸ್ಟ್ 7ಕ್ಕೆ 123.90 ಅಡಿ ನೀರಿದೆ. ಅಂದರೆ, 23.441 TMC ಅಡಿ ನೀರಿದೆ.
ಇಂದು ಬೆಳಗ್ಗೆ 8 ಗಂಟೆ ಹೊತ್ತಿಗೆ ಜಲಾಶಯಕ್ಕೆ 1550 ಕ್ಯೂಸೆಕ್ ನೀರು ಹರಿದು ಬಂದಿದೆ.
ಇದನ್ನೂ ಓದಿ: ವಿವಿ ಸಾಗರಕ್ಕೆ ಭರ್ಜರಿ ಒಳಹರಿವು | ಎಷ್ಟಿದೆ ಜಲಾಶಯದ ನೀರಿನ ಮಟ್ಟ ?
ಕಳೆದ ವರ್ಷ ಇದೇ ದಿನ ಅಂದರೆ 2024 ಆಗಸ್ಟ್ 7 ರಂದು ಜಲಾಶಯದಲ್ಲಿ 114.80 ಅಡಿ ನೀರಿತ್ತು. ಅಂದರೆ, 18.82 TMC ನೀರಿತ್ತು.
ಈ ವರ್ಷದ ಪ್ರಮಾಣ ಇನ್ನೂ ಹೆಚ್ಚಾಗಿಯೇ ಇರುವುದರಿಂದ ವಿವಿ ಸಾಗರ ಈ ವರ್ಷ ಬಹು ಬೇಗ ಕೋಡಿ ಬೀಳುವ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿವೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
