
CHITRADURGA NEWS |06 August 2025
ಚಿತ್ರದುರ್ಗ: ಜಿಲ್ಲೆಯಲ್ಲಿ ಮಂಗಳವಾರ ಭರ್ಜರಿ ಮಳೆಯಾಗಿದ್ದು, ಕೆರೆ, ಕಟ್ಟೆ, ಹಳ್ಳ, ಕೊಳ್ಳಗಳಲ್ಲಿ ನೀರು ಹರಿದಿದೆ.
ಇದನ್ನೂ ಓದಿ: ಸೋಮವಾರ ರಾತ್ರಿ ಎಲ್ಲೆಲ್ಲಿ ಎಷ್ಟು ಮಳೆ ಸುರಿಯಿತು ? | 14 ಮನೆಗಳಿಗೆ ಹಾನಿ
ಮಂಗಳವಾರ ರಾತ್ರಿ ಸುರಿದ ಮಳೆ ವಿವರದನ್ವಯ ಚಿತ್ರದುರ್ಗ ಜಿಲ್ಲೆಯಲ್ಲಿ ಸರಾಸರಿ 31 ಮಿ.ಮೀ ಮಳೆಯಗಿದೆ.
ಚಳ್ಳಕೆರೆ ತಾಲ್ಲೂಕಿನಲ್ಲಿ 17 ಮಿ.ಮೀ, ಚಿತ್ರದುರ್ಗ ತಾಲ್ಲೂಕು 16.5 ಮಿ.ಮೀ, ಹಿರಿಯೂರು ತಾಲ್ಲೂಕು 36.4 ಮಿ.ಮೀ, ಹೊಳಲ್ಕೆರೆ ತಾಲ್ಲೂಕು 44.6 ಮಿ.ಮೀ, ಹೊಸದುರ್ಗ ತಾಲ್ಲೂಕು 51.5 ಮಿ.ಮೀ ಹಾಗೂ ಮೊಳಕಾಲ್ಮೂರು ತಾಲ್ಲೂಕಿನಲ್ಲಿ 21.1 ಮಿ.ಮೀ. ಮಳೆಯಾಗಿದೆ.
ಹೋಬಳಿವಾರು ಮಳೆ ವಿವರ:
ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 20.6 ಮಿ.ಮೀ, ನಾಯಕನಹಟ್ಟಿ 20.9 ಮಿ.ಮೀ, ಪರಶುರಾಂಪುರ 18.2 ಮಿ.ಮೀ, ತಳಕು 9.6 ಮಿ.ಮೀ, ಮಳೆಯಾಗಿದೆ.
ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗದಲ್ಲಿ 24.3 ಮಿ.ಮೀ, ಭರಮಸಾಗರ 6.8 ಮಿ.ಮೀ, ಹಿರೇಗುಂಟನೂರು 8.4 ಮಿ.ಮೀ, ತುರುವನೂರು 19.4 ಮಿ.ಮೀ, ಮಳೆಯಾಗಿದೆ.
ಇದನ್ನೂ ಓದಿ: ವಿವಿ ಸಾಗರಕ್ಕೆ ಭರ್ಜರಿ ಒಳಹರಿವು | ಎಷ್ಟಿದೆ ಜಲಾಶಯದ ನೀರಿನ ಮಟ್ಟ ?
ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 71.8 ಮಿ.ಮೀ,. ಐಮಂಗಳ 48.8 ಮಿ.ಮೀ, ಧರ್ಮಪುರ 13.6 ಮಿ.ಮೀ, ಜವನಗೊಂಡನಹಳ್ಳಿ 20.5 ಮಿ.ಮೀ ಮಳೆಯಾಗಿದೆ.
ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 42.2 ಮಿ.ಮೀ, ಬಿ.ದುರ್ಗ 41.5 ಮಿ.ಮೀ, ರಾಮಗಿರಿ 51.3 ಮಿ.ಮೀ, ತಾಳ್ಯ 43.3 ಮಿ.ಮೀ ಮಳೆಯಾಗಿದೆ.
ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 49.7 ಮಿ.ಮೀ, ಮಾಡದಕೆರೆ 73.1 ಮಿ.ಮೀ,, ಮತ್ತೋಡು 51.7 ಮಿ.ಮೀ, ಶ್ರೀರಾಂಪುರ 25.5 ಮಿ.ಮೀ ಮಳೆಯಾಗಿದೆ.
ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 16.6 ಮಿ.ಮೀ, ದೇವಸಮುದ್ರದಲ್ಲಿ 26.1 ಮಿ.ಮೀ ಮಳೆಯಾಗಿದೆ.
18 ಮನೆಗಳು ಹಾನಿ :
ಮಳೆಯಿಂದಾಗಿ ಜಿಲ್ಲೆಯಾದ್ಯಂತ 16 ಮನೆಗಳು ಭಾಗಶಃ ಮತ್ತು 2 ಮನೆಗಳು ಸಂಪೂರ್ಣ ಹಾನಿಯಾಗಿದ್ದು, 2 ಮನೆಗಳಿಗೆ ನೀರು ನುಗ್ಗಿರುವ ಪ್ರಕರಣ ವರದಿಯಾಗಿದೆ.
ಇದನ್ನೂ ಓದಿ: ಜಿಲ್ಲೆಯಲ್ಲಿ 29 ಅಂಗನವಾಡಿ ಕಾರ್ಯಕರ್ತೆ, 228 ಸಹಾಯಕಿ ಹುದ್ದೆ ಖಾಲಿ | ನೇಮಕಾತಿಗೆ ಅರ್ಜಿ ಅಹ್ವಾನ
ಚಿತ್ರದುರ್ಗ ತಾಲ್ಲೂಕಿನಲ್ಲಿ 04 ಭಾಗಶಃ ಮನೆಹಾನಿ, ಚಳ್ಳಕೆರೆ ತಾಲ್ಲೂಕಿನಲ್ಲಿ 05 ಭಾಗಶಃ ಮನೆಹಾನಿ, ಹೊಳಲ್ಕೆರೆಯಲ್ಲಿ 04 ಭಾಗಶಃ ಮನೆಹಾನಿ ಹಾಗೂ 02 ಪೂರ್ಣ ಮನೆಹಾನಿಯಾಗಿದೆ.
ಹೊಸದುರ್ಗದಲ್ಲಿ ಭಾಗಶಃ ಮನೆಹಾನಿ 02 ಹಾಗೂ 02 ಮನೆಗೆ ನೀರು ನುಗ್ಗಿರುವ ಪ್ರಕರಣ ವರದಿಯಾಗಿದೆ. ಹಿರಿಯೂರು ತಾಲ್ಲೂಕಿನಲ್ಲಿ 04 ಹೆಕ್ಟರ್ ಕೃಷಿ ಬೆಳೆ ಹಾನಿಯಾಗಿದೆ. ಮೊಳಕಾಲ್ಮೂರು ತಾಲ್ಲೂಕಿನಲ್ಲಿ 1 ಮನೆ ಭಾಗಶಃ ಮನೆಹಾನಿಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
