
CHITRADURGA NEWS | 24 AUGUST 2026
ಚಿತ್ರದುರ್ಗ: ಶ್ರಾವಣಮಾಸದ ಪ್ರಯುಕ್ತ ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಮೂಲಕರ್ತೃ ಮುರಿಗೆ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ವಚನಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಭಕ್ತಿಭಾವದಿಂದ ನೆರವೇರಿದವು.
ಇದನ್ನೂ ಓದಿ: ಮೊಳಕಾಲ್ಮೂರಿನಲ್ಲಿ ನೂತನ ಬಸ್ ನಿಲ್ದಾಣ ಲೋಕಾರ್ಪಣೆ | ಬಸ್‍ಗಳ ಕಾರ್ಯಾಚರಣೆಗೆ ಸಚಿವ ಟಿ.ರಘುಮೂರ್ತಿ ಚಾಲನೆ
ನಂತರ ಮುರುಘಾ ಪರಂಪರೆಯ 12ನೇ ಪೀಠಾಧಿಪತಿಗಳಾದ ಶ್ರೀ ಸಾವಳಗಿ ಗುರುಶಾಂತ ಸ್ವಾಮಿಗಳವರ ಸ್ಮರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗುರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮಿಗಳು, ಶ್ರೀ ಬಸವ ಮುರುಗೇಂದ್ರ ಸ್ವಾಮಿಗಳು ಸೇರಿದಂತೆ ಸೇವಾಕರ್ತರಾದ ಜಿ.ವಿ. ಶಿವಣ್ಣ ಮತ್ತು ಕುಟುಂಬದವರು, ಚಂದ್ರಿಕಾ ರಾಜು ಮತ್ತು ಕುಟುಂಬದವರು, ಮಲ್ಲಿಕಾರ್ಜುನಯ್ಯ ಹಾಗೂ ಮಕ್ಕಳು, ಮಲ್ಲಿಕಾರ್ಜುನ ಟ್ರೇಡರ್ಸ್‌ನವರು, ನ್ಯಾಯವಾದಿ ಅಭಿಷೇಕ್, ಜಯಪ್ರಕಾಶ್ ಹಾಗೂ ಕುಟುಂಬದವರು, ಶಿವಗಂಗಾದ ನಾಗರಾಜಪ್ಪ ಹಾಗೂ ಕುಟುಂಬದವರು, ಶಿವಮೊಗ್ಗದ ಜಯದೇವಪ್ಪ ಹಾಗೂ ಕುಟುಂಬದವರು, ಮಂಜುನಾಥಸ್ವಾಮಿ, ಉಷಾ ಹಾಗೂ ಕುಟುಂಬದವರು, ಶುಭ ಫರ್ನಿಚರ್‌ನವರು ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

