
CHITRADURGA NEWS | 21 JUNE 2024
ಚಿತ್ರದುರ್ಗ: ಪೆಟ್ರೋಲ್ – ಡೀಸೆಲ್ ಬೆಲೆ ಇಳಿಕೆಗೆ ಜಿಲ್ಲಾ ಟ್ರಕ್ಕರ್ ಅಸೋಸಿಯೇಷನ್ ವತಿಯಿಂದ ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ: ಚನ್ನಗಿರಿ, ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಬೆಲೆ ಇಳಿಕೆ
ಪೆಟ್ರೋಲ್-ಡೀಸೆಲ್ ಬೆಲೆ ಜಾಸ್ತಿಯಾಗಿರುವುದರಿಂದ ಟೈರ್ ಮತ್ತು ಬಿಡಿ ಭಾಗಗಳ ಬೆಲೆ ಏರಿಕೆಯಾಗಿದ್ದು, ಲಾರಿ ಮಾಲೀಕರ ಜೀವನ ದುಸ್ತರವಾಗಿದೆ. ವಿಎಲ್‍ಟಿ ಮತ್ತು ಪ್ಯಾನಿಕ್ ಬಟನ್ ಹೊರೆಯೂ ಲಾರಿ ಮಾಲೀಕರ ಮೇಲೆ ಹೇರಿದಂತಾಗಿದೆ. ಇದೆಲ್ಲದರ ಪರಿಣಾಮ ಸಾಗಾಣಿಕೆ ವೆಚ್ಚವು ದುಬಾರಿಯಾಗುತ್ತದೆ.
ರಸ್ತೆ ತೆರಿಗೆಯ ಮೇಲೆ ಮೂರರಷ್ಟು ಸೆಸ್ ಜಾಸ್ತಿಯಾಗಿದೆ. ಎಲ್ಲಾ ಹೆಚ್ಚುವರಿಗಳನ್ನು ಬಾಡಿಗೆ ರೂಪದಲ್ಲಿ ಪಡೆಯಲು ಲಾರಿ ಉದ್ಯಮ ನಡೆಸುತ್ತಿರುವ ಡಿಮಾಂಡ್ ಅಂಡ್ ಸಪ್ಲೈನಲ್ಲಿ ಸಾಧ್ಯವಾಗುವುದಿಲ್ಲ.
ಲಾರಿ ಮಾಲೀಕರು ವಿಮುಖರಾಗುತ್ತಿರುವುದರಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯನ್ನು ಹಿಂದಕ್ಕೆ ಪಡೆಯುವಂತೆ ಜಿಲ್ಲಾ ಟ್ರಕ್ಕರ್ ಅಸೋಸಿಯೇಷನ್ ಅಧ್ಯಕ್ಷ ವಿಶ್ವನಾಥ್ ಒತ್ತಾಯಿಸಿದರು.
ಇದನ್ನೂ ಓದಿ: ಮಲ್ಲಿಕಾರ್ಜುನ ಜಗದ್ಗುರುಗಳ ಸ್ಮರಣೋತ್ಸವ | ಎಸ್‍ಜೆಎಂ ವಿದ್ಯಾಪೀಠ ಸಂಸ್ಥಾಪನಾ ದಿನಾಚರಣೆಗೆ ತೀರ್ಮಾನ
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸುರೇಶ್ ಸಿಂಗನಾಳ್, ಅಬ್ದುಲ್ ಸತ್ತಾರ್, ಸಂತೋಷ್, ಅನ್ವರ್ ಬಿ. ಎಂ.ಎಸ್.ನಸ್ರುಲ್ಲಾ, ಸಲೀಂ, ಮುಜೀಬ್ ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

